Advertisement
ಸುಮಾರು 4 ತಿಂಗಳಿಂದ ಥಾಯ್ಲೆಂಡ್‌ನಲ್ಲಿ ವಾಸವಾಗಿದ್ದ ವ್ಯಕ್ತಿ 2 ವಾರಗಳ ಹಿಂದಷ್ಟೇ ಕೊರಿಯಾಗೆ ಮರಳಿದ್ದರು. ಇತ್ತೀಚೆಗೆ ಅವರಿಗೆ ತಲೆನೋವು, ಜ್ವರ, ವಾಂತಿ, ಮಾತನಾಡುವಾಗ ತೊದಲುವುದು, ಕುತ್ತಿಗೆಯಲ್ಲಿ ಬಿಗಿತ ಮುಂತಾದ ಮಿದುಳು ಪೊರೆ ಉರಿತದ ಸಮಸ್ಯೆ ತಲೆದೋರಿತ್ತು. ಕೂಡಲೇ ಅವರನ್ನು ತುರ್ತು ನಿಗಾ ಘಟಕಕ್ಕೆ ಸೇರಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ “ನಗ್ಲೆàರಿಯಾ ಫೌಲೇರಿ’ ಸೋಂಕು ಇರುವುದು ದೃಢಪಟ್ಟಿತ್ತು.
ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾದ ಈ ನಗ್ಲೆàರಿಯಾ ಫೌಲೇರಿ ಎಂಬ ಅಮೀಬಾವೇ ಸೋಂಕಿನ ಮೂಲ. ಇದು ಮಣ್ಣು, ಸರೋವರ, ನದಿಗಳಲ್ಲಿ ಇರುತ್ತವೆ. ಈ ಅಮೀಬಾವನ್ನು ಒಳಗೊಂಡಿರುವ ನೀರು ಮನುಷ್ಯರ ಮೂಗಿನೊಳಕ್ಕೆ ಸೇರಿದರೆ, ಅದು ನೇರವಾಗಿ ಮೆದುಳಿನ ಸೋಂಕಿಗೆ ಕಾರಣವಾಗುತ್ತದೆ. ಹೀಗಾಗಿಯೇ ಇದನ್ನು “ಮೆದುಳು ತಿನ್ನುವ ಅಮೀಬಾ’ ಎಂದು ಕರೆಯುತ್ತಾರೆ. ಅಮೆರಿಕದಲ್ಲಿ ಪ್ರತಿ ವರ್ಷ 3 ಮಂದಿ ಈ ಸೋಂಕಿಗೆ ತುತ್ತಾಗುತ್ತಾರೆ. ಆದರೆ, ಈ ಸೋಂಕು ಸಾಮಾನ್ಯವಾಗಿ ಮಾರಣಾಂತಿಕವೇ ಆಗಿರುತ್ತದೆ. ಸೋಂಕು ಮೊದಲು ಪತ್ತೆಯಾಗಿದ್ದು- 1965ರಲ್ಲಿ ಆಸ್ಟ್ರೇಲಿಯಾದಲ್ಲಿ.
Related Articles
Advertisement