Advertisement

ಕೋವಿಡ್ 19 ಚಿಕಿತ್ಸೆಗೂ ಉಪಯೋಗವಾಗುತ್ತದೆ ‘ಬ್ರೈನ್ ಇ ಟ್ಯಾಟೂ ತಂತ್ರಜ್ಞಾನ’..!?

06:01 PM May 26, 2021 | ಶ್ರೀರಾಜ್ ವಕ್ವಾಡಿ |

ಇತ್ತೀಚಿನ ದಿನಗಳಲ್ಲಿ ಜಗತ್ತು ಹೊಸ ತಂತ್ರಜ್ಞಾನಕ್ಕೆ ತರೆದುಕೊಳ್ಳುತ್ತಾ ಸಾಗುತ್ತಿದೆ. ಊಹೆಗೂ ಮೀರಿ ಬೆಳೆಯುತ್ತಿರುವ ತಂತ್ರಜ್ಞಾನ ಮನುಷ್ಯನ ಮೆದುಳಿನ ಕಾರ್ಯವನ್ನು ಗ್ರಹಿಸುವಷ್ಟು ಮುಂದುವರಿದೆದೆ ಎನ್ನುವುದಕ್ಕೆ ಬ್ರೈನ್ ಸೈಂಟಿಫಿಕ್ ಇಂಕ್ ಸಂಸ್ಥೆ ತಯಾರಿಸಿದ ‘ಬ್ರೈನ್ ಇ ಟ್ಯಾಟೂ’ವೇ ಸಾಕ್ಷಿ.

Advertisement

ಬ್ರೈನ್ ಸೈಂಟಿಫಿಕ್ ಇಂಕ್ ಸಂಸ್ಥೆಯ ಸಹ ಸಂಸ್ಥಾಪಕನಾಗಿರುವ ಬೋರಿಸ್ ಗೋಲ್ಡ್ಟೈನ್ ಉತ್ತಮ ಹಚ್ಚೇವಾದಿಯು ಆಗಿದ್ದಾರೆ. ಇವರ ವಿಶೇಷತೆ ಅಂದರೆ ತಲೆಯ ಮೇಲೆ ಮಾತ್ರ  ಟ್ಯಾಟೂ ಹಾಕುವುದು, ಅದು ನೀವೂ ಹಿಂದೆಂದ್ದು ಕಂಡಿರದ ಚಿತ್ರವಾಗಿರುತ್ತದೆ.  ಒಂದು ಸ್ಟ್ಯಾಂಪ್ ಗಾತ್ರದ ಸಣ್ಣ ಟ್ಯಾಟೂ ಇದಾಗಿದ್ದು, ನೋಡುಗರಿಗೆ ತಲೆಬುರುಡೆಯಲ್ಲಿ ಯಾವುದೋ ಚಿಪ್ ಸಿಕ್ಕಿಹಾಕಿಕೊಂಡಂತೆ ಭಾಸವಾಗುತ್ತದೆ.

ಇದನ್ನೂ ಓದಿ : ಆಂಬ್ಯುಲೆನ್ಸ್ ಧನ ದಾಹ : ಕಾರಿನಲ್ಲಿ ಮಗಳ ಶವ ಸಾಗಿಸಿದ ತಂದೆ

ಈ ಟ್ಯಾಟೂ ವಂಡರ್ ಮೆಟೀರಿಯಲ್ ಗ್ರಾಫೀನ್‍ ನಿಂದ ಮಾಡಲಾದ ಶಾಯಿಯಿಂದ ಬರೆಯಲಾಗುತ್ತದೆ. ಇದನ್ನು ಒಮ್ಮೆ ಮುದ್ರಿಸಿದರೆ ಮೆದುಳಿನ ತರಂಗ ಚಟುವಟಿಕೆಗಳನ್ನು ಸಂಸ್ಕರಿಸಿ ಅವುಗಳನ್ನು ನೇರವಾಗಿ ಮೇಘಕ್ಕೆ (ಕ್ಲೌಡ್) ರವಾನಿಸುತ್ತವೆ. ಹೀಗೆ ರವಾನೆಯಾದ ಸಂದೇಶಗಳು ಬ್ರೈನ್ ಸೈಂಟಿಫಿಕ್ ಇಂಕ್ ಸಂಸ್ಥೆಯ ಕೃತಕ ಬುದ್ಧಿಮತ್ತೆಗಳಿಗೆ ತಲುಪಿದಾಗ ಅವುಗಳು ಮೆದುಳಿನ ಚಟುವಟಿಕೆಗಳನ್ನು ನಿರಂತರವಾಗಿ ವಿಶ್ಲೇಷಿಸಲು ಆರಂಭಿಸುತ್ತದೆ.

Advertisement

ಇದರಿಂದ ಅಲ್ಸೈಮರ್ಸ್‍ನಂತಹ ಖಾಯಿಲೆಯನ್ನು ಹೊಂದಿದ ರೋಗಿಗಳ ಮೆದುಳಿನಲ್ಲಿ ನಡೆಯುವ ಬದಲಾವಣೆಯನ್ನು ವಿಶ್ಲೇಷಿಸಲು ಸಹಾಯಕವಾಗಿದೆ. ಕ್ಲಿನಿಕಲ್ ಸೆಟ್ಟಿಂಗ್‍ ನ ಹೊರಗೆ, ದೈನಂದಿನ ಜೀವನಕ್ಕೆ ಅಡ್ಡಿಪಡಿಸದೆ ದೀರ್ಘಾವಧಿಯ ನಿರಂತರ ಡೇಟಾ ಸಂಗ್ರಹಣೆಗೆ ಇದು ಅವಕಾಶ ನೀಡುತ್ತದೆ.

ಮೆದುಳಿನ ಸ್ಕ್ಯಾನ್‍ ಗಳಂತಹ ಪ್ರಮುಖ ಪರೀಕ್ಷೆಗಳನ್ನು ನಡೆಸುವಾಗ ರೋಗಿಗಳೊಂದಿಗೆ ವೈದ್ಯರ ಸಂಪರ್ಕವನ್ನು ಕಡಿಮೆ ಮಾಡುವ ಅಗತ್ಯವನ್ನು ಜಾಗತಿಕ ಸಾಂಕ್ರಾಮಿಕ ರೋಗ ಕೋವಿಡ್ 19 ಹೆಚ್ಚು ಒತ್ತು ಕೊಡುತ್ತದೆ.  ಆಸ್ಪತ್ರೆಗೆ ದಾಖಲಾದ 80 ಶೇಕಡಕ್ಕಿಂತ ಹೆಚ್ಚು ಕೋವಿಡ್ 19 ರೋಗಿಗಳು ನರವೈಜ್ಞಾನಿಕ ಲಕ್ಷಣಗಳನ್ನು ಹೊಂದಿದ್ದಾರೆ ಎಂಬುದನ್ನ ಅಧ್ಯಯನಗಳು ತಿಳಿಸುತ್ತವೆ.

ಈ ರೋಗಿಗಳ ತಪಾಸಣೆಗೆ ಇಇಜಿ ಪರೀಕ್ಷೆಯ ಅಗತ್ಯವಿದ್ದು, ಬ್ರೈನ್ ಇ ಟ್ಯಾಟೂ ತಂತ್ರಜ್ಞಾನವು ಇಂತಹ ಪರೀಕ್ಷೆಗಳಿಗೆ ಸುರಕ್ಷಿತವಾದ ಪರ್ಯಾಯ ಮಾರ್ಗವನ್ನು ಮಾಡಿಕೊಟ್ಟಿದೆ ಎಂದು ಸಂಸ್ಥೆ ಭಾವಿಸಿದೆ. ಅಲ್ಲದೇ ಈ ತಂತ್ರಜ್ಞಾನವನ್ನು ಜಗತ್ತಿನಾದ್ಯಂತ ವಿಸ್ತರಿಸುವ ಪ್ರಯೋಗಕ್ಕೆ ಬ್ರೈನ್ ಸೈಂಟಿಫಿಕ್ ಇಂಕ್ ಸಂಸ್ಥೆ ಮುಂದಾಗುತ್ತಿದೆ.

ಕೀರ್ತನಾ ಭಟ್ ಕೇಳ

ಇದನ್ನೂ ಓದಿ : ಒಡಿಶಾ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿದ ಯಾಸ್, ಪಶ್ಚಿಮಬಂಗಾಳದಲ್ಲಿ 3 ಲಕ್ಷ ಮನೆಗಳಿಗೆ ಹಾನಿ

Advertisement

Udayavani is now on Telegram. Click here to join our channel and stay updated with the latest news.

Next