Advertisement

ಹಿಂದುಳಿದವರ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆದ ಬ್ರಹ್ಮಶ್ರೀ

04:54 PM Sep 11, 2022 | Team Udayavani |

ಪಿರಿಯಾಪಟ್ಟಣ: ಹಿಂದುಳಿದ ವರ್ಗದ ಜನರಿಗೆ ದೇವಾಲಯದ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಖುದ್ದು ಶಿವ ದೇವಾಲಯವನ್ನು ನಿರ್ಮಿಸುವ ಮೂಲಕ ದೇವಾಲಯಗಳನ್ನು ಗ್ರಂಥಾಲಯಗಳನ್ನಾಗಿ ಮಾಡಿ ಶಿಕ್ಷಣ ಕ್ರಾಂತ್ರಿಗೆ ಮುನ್ನುಡಿ ಬರೆದವರು ಬ್ರಹ್ಮಶ್ರೀ ನಾರಾಯಣ ಗುರುಗಳು ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎನ್‌.ಆರ್‌. ಕಾಂತರಾಜ್‌ ಶ್ಲಾಘಿಸಿದರು.

Advertisement

ತಾಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇರಳದಲ್ಲಿ ಜಾತಿಯತೆ ತುಂಬಿ ತುಳುಕುತಿದ್ದ ಕಾಲವದು, ಹಿಂದುಳಿದ ವರ್ಗದ ಜನರನ್ನು ಕೀಳು ಜಾತಿಯವರೆಂದು ದೂರವಿಟ್ಟಿದ್ದ ಸಂದರ್ಭದಲ್ಲಿ ನಾರಾಯಣ ಗುರುಗಳು ಮಹಾನ್‌ ಕ್ರಾಂತಿಕಾರ ಹೆಜ್ಜೆಯನಿಟ್ಟು ಶೋಷಿತರನ್ನು ರಕ್ಷಿಸುವ ಮತ್ತು ಅವರಲ್ಲಿ ಧೈರ್ಯ ತುಂಬು ಕೆಲಸ ಮಾಡಿದರು. ಶಿಕ್ಷಣಕ್ಕಾಗಿ ಸ್ವಾತಂತ್ರ್ಯರಾಗಿ ಸಂಘಟನೆಗಾಗಿ ಬಲಿಷ್ಠರಾಗಿ ಎಂದು ಹೇಳುವ ಮೂಲಕ ಕೆಲ ಸಮುದಾಯದ ಜನರನ್ನು ಶೈಕ್ಷಣಿಕವಾಗಿ ಪ್ರಗತಿಯತ್ತ ಸಾಗುವಂತೆ ಹುರಿದುಂಬಿಸಿದರು.

ಕಲುಷಿತ ಸಮಾಜವನ್ನು ತಿದ್ದುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ, ಅಂದಿನ ಕಾಲಘಟ್ಟದಲ್ಲಿ ಮಹಾತ್ಮ ಗಾಂಧಿಜೀಯವರು ನಾರಾಯಣ ಗುರುಗಳನ್ನು ಭೇಟಿ ಮಾಡಿ ಅಸ್ಪೃಶ್ಯ ನಿವಾರಣೆಗೆ ಸಲಹೆ ಕೇಳಿದಾಗ ಕೇವಲ ತೋರಿಕೆಗೆ ಸಮಾಜದಲ್ಲಿ ಬೇರು ಬಿಟ್ಟಿರುವ ಅಸ್ಪೃಶ್ಯತೆ ನಿವಾರಣೆ ಅಸಾಧ್ಯ ಅದು ಪ್ರತಿಯೊಬ್ಬರ ಮನದಿಂದ ತೊಳೆದಾಗ ಮಾತ್ರ ಸಾಧ್ಯವಾಗಲಿದೆ ಎಂದರು.

ಅದಕ್ಕೆ ಮೊದಲು ಕೆಳ ವರ್ಗದವರನ್ನು ಶೈಕ್ಷಣಿಕವಾಗಿ ಬೆಳೆಸಬೇಕಿದೆ. ಆಗ ತನ್ನಿಂದ ತಾನೇ ಅಸ್ಪೃಶ್ಯ ಭೇದ ಭಾವ ಮೆಳು ಕೀಳೆಂಬುದ ಅಳಿಯಲು ಸುಲಭವೆಂದು ಸಲಹೆ ನೀಡಿದ್ದರು. ಹೀಗೆ ನರಾಯಣ ಗುರು ಕೇರಳವಷ್ಟೆ ಅಲ್ಲದೆ ದೇಶದಾದ್ಯಂತ ಸಾಕಷ್ಟು ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ. ಸಮಾದಲ್ಲಿನ ಅನಿಷ್ಟ ಪದ್ಧತಿ ಮೂಢನಂಬಿಕೆಯಂಥ ಆಚಾರ ವಿಚಾರಗಳನ್ನು ನೋಡಿ ಜಾಗೃತಿ ಮೂಡಿಸಲು ತೆರಳಿ ಉತ್ಕೃಷ್ಟ ಸಮಾಜದವರಿಂದ ಸಾಕಷ್ಟು ನೋವು ಅನುಭವಿಸಿ ಅವರು ಕಾಡು ಮೇಡು ಅಲೆದು ಅರಣ್ಯದಲ್ಲಿ ತಪಸ್ಸು ಧ್ಯಾನಗೈದು ಸಂತರಾದರು. ಧಾರ್ಮಿಕತೆ ಮೂಲಕ ಸಮಾಜ ಅನಿಷ್ಟತೆಯನ್ನು ಕಿತ್ತೆಸೆಯಲು ಪ್ರಯತ್ನಿಸಿದರು. ಆ ಕಾರಣಕ್ಕೆ ಅವರ 70 ವರ್ಷದ ಸಂದರ್ಭದಲ್ಲಿ ಭಾರತ ಸರ್ಕಾರದಿಂದ ಜಗದ್ಧೋದ್ಧಾರಕ ಎಂಬ ಬಿರುದು ನೀಡಲಾಗಿದೆ ಎಂದರು.

ಶಾಸಕ ಕೆ.ಮಹದೇವ್‌ ಮಾತನಾಡಿ, ನಾರಾಯಣ ಗುರುಗಳು ಕೆಳ ವರ್ಗದ ಜನರಿಗಾಗಿ ವಾಚನಾಲಯ, ದೇವಾಲಯ ಮತ್ತು ಶಾಲೆಗಳನ್ನು ಕಟ್ಟಬೇಕು. ನಾವೆಲ್ಲ ಶಿಕ್ಷಣವಂತರಾಗಬೇಕು ಎಂದು ಕರೆ ನೀಡುತ್ತಿದ್ದರು. ಅಂದಿನ ಅವರ ಪರಿಶ್ರಮದ ಫ‌ಲವೇ ಇಂದು ಇಡೀ ಕೇರಳ ಶೈಕ್ಷಣಿಕವಾಗಿ ದೇಶದಲ್ಲಿಯೇ ಮುಂದಿದೆ. ಹೀಗಾಗಿ ನಾರಾಯಣ ಗುರು ಅವರನ್ನು ಕೇರಳದ ಬಸವಣ್ಣ ಎಂದು ಸಂಬೋಧಿಸಲಾಗುತ್ತಿದೆ ಎಂದು ತಿಳಿಸಿದರು.‌

Advertisement

ತಹಶೀಲ್ದಾರ್‌ ಚಂದ್ರಮೌಳಿ, ಪುರಸಭಾ ಅಧ್ಯಕ್ಷ ಮಹೇಶ್‌, ಆರ್ಯ ಈಡಿಗರ ಸಂಘದ ಅಧ್ಯಕ್ಷ ಪಿ.ವೈ. ಮಲ್ಲೇಶ್‌, ಬಿಇಒ ಬಸವರಾಜು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ, ಪ್ರಸಾದ್‌, ಸಮಾಜ ಕಲ್ಯಾಣಾಧಿಕಾರಿ ಸಿದ್ದೇಗೌಡ, ಅಬಕಾರಿ ಉಪ ನಿರೀಕ್ಷಕ ಧರ್ಮರಾಜು, ತೋಟಗಾರಿಕೆ ಅಧಿಕಾರಿ ಪ್ರಸಾದ್, ಮುಖಂಡರಾದ ತಿಮ್ಮಪ್ಪ, ಕೆಂಪರಾಜು, ನಿಂಗರಾಜು, ನಾಗೇಂದ್ರ, ಸೇರಿದಂತೆ ಆರ್ಯ ಈಡಿಗರ ಸಂಘದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next