Advertisement
ಸುಕುಮಾರ್ ನಿರ್ದೇಶನದ ಚಿತ್ರವನ್ನು ಬಹಿಷ್ಕರಿಸಲು ಜನರನ್ನು ಕೋರುವ ಹ್ಯಾಶ್‌ಟ್ಯಾಗ್, ಚಿತ್ರ ಬಿಡುಗಡೆಗೆ ಒಂದು ದಿನ ಮುಂಚೆ ಟ್ರೆಂಡಿಂಗ್ ಆಗಿದೆ.
Related Articles
Advertisement
ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗು ವ್ಯಕ್ತಿಯೊಬ್ಬರು “ತೆಲುಗಿನ ವ್ಯಕ್ತಿಯಾಗಿ ಆದರೆ ಬೆಂಗಳೂರಿನಲ್ಲಿ ಉಳಿದುಕೊಂಡಿರುವ ನಾನು ನಮ್ಮ ಕನ್ನಡಿಗರನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ಯಾವುದೇ ಭಾಷೆಯ ಚಿತ್ರ ನಮ್ಮ ಕರ್ನಾಟಕದಲ್ಲಿ ನಮ್ಮ ಕನ್ನಡದಲ್ಲಿ ಬಿಡುಗಡೆಯಾಗಬೇಕು ಎಂದು ಬರೆದಿದ್ದು ಭಾರಿ ಮೆಚ್ಚುಗೆ ಪಡೆದು ಸುದ್ದಿಯಾಗಿದೆ.
ಪ್ರೀತಿಯ ಅಲ್ಲುಅರ್ಜುನ್ ಅವರೇ , ನಿಮ್ಮ ತೆಲುಗು ಚಿತ್ರಕ್ಕಾಗಿ ಬೆಂಗಳೂರಿನಲ್ಲಿ 450 ಶೋಗಳನ್ನು ಬುಕ್ ಮಾಡಲಾಗಿದೆ. ಟಾಲಿವುಡ್ ತೆಲುಗು ಸಿನಿಮಾಗಳನ್ನು ಕರ್ನಾಟಕದಲ್ಲಿ ಏಕೆ ಡಂಪ್ ಮಾಡುತ್ತದೆ? ಕರ್ನಾಟಕ ತೆಲುಗು ಸಿನಿಮಾಗಳ ಡಂಪಿಂಗ್ ತಾಣವಲ್ಲ. ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಿ ಎಂದು ಹಲವಾರು ಮಂದಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಪುಷ್ಪ ಕನ್ನಡ ಆವೃತ್ತಿಗೆ 3 ಶೋಗಳು ಮಾತ್ರ ಸಿಕ್ಕಿವೆ. ತೆಲುಗು ಆವೃತ್ತಿಗೆ ಬರೋಬ್ಬರಿ 593, ತಮಿಳು – 10, ಮಲಯಾಳಂ 4 ಶೋಗಳನ್ನು ಪಡೆದುಕೊಂಡಿದೆ. ದೇಶದ ಒಂದು ಭಾಷೆ ಇತರ ಭಾಷೆಗಳಿಗಿಂತ ಕಡಿಮೆ ಪರದೆಯನ್ನು ಪಡೆಯುವುದು ಇತಿಹಾಸದಲ್ಲಿ ಮೊದಲನೆಯದು ಎಂದು ಬುಕ್ ಮೈ ಶೋ ಮೂಲ ಉಲ್ಲೇಖ ಮಾಡಿ, ಟ್ವೀಟ್ ಮಾಡಲಾಗಿದೆ.