Advertisement

ವಿಶ್ವಕಪ್‌ ಬಾಕ್ಸಿಂಗ್‌ : ಸಿಮ್ರನ್‌ಜೀತ್‌ ಕೌರ್‌ ಫೈನಲ್‌ ಪ್ರವೇಶ

10:32 PM Dec 18, 2020 | mahesh |

ಹೊಸದಿಲ್ಲಿ: ಜರ್ಮನಿಯಲ್ಲಿ ನಡೆ ಯುತ್ತಿರುವ ವಿಶ್ವಕಪ್‌ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಭಾರತದ ಸಿಮ್ರನ್‌ಜೀತ್‌ ಕೌರ್‌ (60 ಕೆಜಿ) ಫೈನಲ್‌ ತಲುಪಿ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ.  ವನಿತೆಯರ ಸೆಮಿಫೈನಲ್‌ನಲ್ಲಿ ಸಿಮ್ರನ್‌ಜೀತ್‌‌ ಉಕ್ರೇನಿನ ಮರಿಯಾನಾ ಬಸಾನೆಟ್ಸ್‌ ವಿರುದ್ಧ 4-1 ಅಂಕಗಳ ಮೇಲುಗೈ ಸಾಧಿಸಿದರು. 57 ಕೆಜಿ ವಿಭಾಗದಲ್ಲಿ ಭಾರತೀಯರಾದ ಸೋನಿಯಾ ಲಾಥರ್‌-ಮನೀಷಾ ನಡುವೆ ಸೆಮಿಫೈನಲ್‌ ಸೆಣಸಾಟ ನಡೆಯಲಿದೆ. ಸೋನಿಯಾ ಉಕ್ರೇನಿನ ಸ್ನಿಜಾನಾ ಖೊಲೊಡ್ಕೊವಾ ಅವರನ್ನು 3-2ರಿಂದ ಮಣಿಸಿದರೆ, ಮನೀಷಾಗೆ ಬೈ ಲಭಿಸಿತು.

Advertisement

ಪುರುಷರ ಪ್ಲಸ್‌ 91 ಕೆಜಿ ವಿಭಾಗದಲ್ಲಿ ಸತೀಶ್‌ ಕುಮಾರ್‌ ಮಾಲ್ಡೋವಾದ ಝವಾಂಟಿನ್‌ ಅಲೆಕ್ಸೆಲ್‌ ಅವರನ್ನು 5-0 ಭರ್ಜರಿ ಅಂತರದಿಂದ ಮಣಿಸಿ ಸೆಮಿಫೈನಲ್‌ ತಲುಪಿದರು. ಮೊಹಮ್ಮದ್‌ ಹುಸಮುದ್ದೀನ್‌ (57 ಕೆಜಿ) ಜರ್ಮನಿಯ ಉಮರ್‌ ಬಾಜ್ವಾ ಅವರನ್ನೂ 5-0 ಅಂಕಗಳಿಂದ ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದರು. ಆದರೆ 75 ಕೆಜಿ ವಿಭಾಗದಲ್ಲಿ ಆಶಿಷ್‌ ನೆದರ್ಲೆಂಡ್ಸ್‌ನ ಮ್ಯಾಕ್ಸ್‌ ವಾನ್‌ ಡರ್‌ ಪಾಸ್‌ ವಿರುದ್ಧದ ಕ್ವಾರ್ಟರ್‌ ಫೈನಲ್‌ ಮುಖಾಮುಖೀಯಲ್ಲಿ 3-1 ಅಂತರದಿಂದ ಸೋಲು ಕಾಣಬೇಕಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next