Advertisement

ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್ ಲವ್ಲಿನಾ ಈಗ ಅಸ್ಸಾಂನ DSP

01:31 PM Jan 13, 2022 | Team Udayavani |

ಅಸ್ಸಾಂ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಬಾಕ್ಸರ್‌ ಲವ್ಲಿನಾ ಬೋರ್ಗ ಹೈನ್‌ ಅಸ್ಸಾಂ ಪೊಲೀಸ್‌ ಉಪಾಧೀಕ್ಷಕರಾಗಿ (ಡಿಎಸ್‌ ಪಿ) ನೇಮಕಗೊಂಡಿದ್ದಾರೆ.

Advertisement

ಲವ್ಲಿನಾಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ನೇಮಕ ಪತ್ರವನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಅವರು, ಲವ್ಲಿನಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ದೇಶದ ಜತೆಗೆ ಅಸ್ಸಾಂ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ಈ ಸಾಧನೆಯನ್ನು ಗುರುತಿಸಿ ಅವರಿಗೆ ಡಿಎಸ್‌ ಪಿ ಹುದ್ದೆಯನ್ನು ನೀಡಲಾಗಿದೆ. ಮುಂದಿನ ಕ್ರೀಡಾಕೂಟದಲ್ಲಿಯೂ ಅವರಿಗೆ ಗೆಲುವಿನ ಯಶಸ್ಸು ಸಿಗಲಿ ಎಂದು ಹಾರೈಸಿದರು.

ಏಕದಿನ ತಂಡಕ್ಕೆ ಜಯಂತ್‌, ಸೈನಿ
ಸ್ಪಿನ್ನರ್‌ ಜಯಂತ್‌ ಯಾದವ್‌ ಮತ್ತು ಪೇಸ್‌ ಬೌಲರ್‌ ನವದೀಪ್‌ ಸೈನಿ ಅವರನ್ನು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತದ ಏಕದಿನ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ. ಕೋವಿಡ್‌ ಪಾಸಿಟಿವ್‌ ಬಂದ ಕಾರಣ ಆಪ್ ಸ್ಪಿನ್ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಅವರನ್ನು ಕೈಬಿಡಲಾಯಿತು.

ಮೊಹಮ್ಮದ್‌ ಸಿರಾಜ್‌ ಸ್ನಾಯು ಸೆಳೆತಕ್ಕೊಳಗಾಗಿರುವ ಕಾರಣ ಸೈನಿ ಅವರನ್ನು ಸೇರಿಸಿಕೊಳ್ಳಲಾಯಿತು ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ತಂಡ ಬುಧವಾರ ದಕ್ಷಿಣ ಆಫ್ರಿಕಾಕ್ಕೆ ವಿಮಾನ ಏರಿತು. ಸರಣಿಯ ಮೊದಲ ಪಂದ್ಯ ಜ. 19ರಂದು ಪಾರ್ಲ್ ನಲ್ಲಿ ನಡೆಯಲಿದೆ.

Advertisement

ಪರಿಷ್ಕೃತ ತಂಡ: ಕೆ.ಎಲ್‌. ರಾಹುಲ್‌ (ನಾಯಕ), ಶಿಖರ್‌ ಧವನ್‌, ಋತುರಾಜ್‌ ಗಾಯಕ್ವಾಡ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಶ್ರೇಯಸ್‌ ಅಯ್ಯರ್‌, ವೆಂಕಟೇಶ್‌ ಅಯ್ಯರ್‌, ರಿಷಭ್‌ ಪಂತ್‌, ಇಶಾನ್‌ ಕಿಶನ್‌, ಯಜುವೇಂದ್ರ ಚಹಲ್‌, ಆರ್‌. ಅಶ್ವಿ‌ನ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ, ದೀಪಕ್‌ ಚಹರ್‌, ಪ್ರಸಿದ್ಧ್ ಕೃಷ್ಣ, ಶಾರ್ದೂಲ್  ಠಾಕೂರ್‌, ಮೊಹಮ್ಮದ್‌ ಸಿರಾಜ್‌, ಜಯಂತ್‌ ಯಾದವ್‌, ನವದೀಪ್‌ ಸೈನಿ.

Advertisement

Udayavani is now on Telegram. Click here to join our channel and stay updated with the latest news.

Next