ಕಲಾದಗಿ: ಬೈಕ್ ನಲ್ಲಿ ಬಂದ ವ್ಯಕ್ತಿ ಮಾರ್ಗ ಮಧ್ಯೆ ಒಬ್ಬ ವ್ಯಕ್ತಿಯ ಕೊರಳಿನಲ್ಲಿದ್ದ ಚಿನ್ನದ ಚೈನ್ ದೋಚಿ ಪರಾರಿಯಾದ ಘಟನೆ ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ.9ರ ಸೋಮವಾರ ಸಂಜೆ ನಡೆದಿದೆ.
ಬೀಳಗಿ ತಾಲೂಕಿನ ಸುನಗ ಗ್ರಾಮದ ಮಾಜಿ ಸೈನಿಕ ಬಸವರಾಜ ರುದ್ರಪ್ಪ ಮೇಟಿ (54) 14 ಗ್ರಾಂ. ತೂಕದ ಚಿನ್ನದ ಚೈನ್ ಕಳೆದುಕೊಂಡ ವ್ಯಕ್ತಿ.
ಡಿ.9ರ ಸೋಮವಾರ ಸಂಜೆ ಬಸವರಾಜ ತಮ್ಮ ಊರು ಸುನಗಕ್ಕೆ ಹೋಗಲು ಬಸ್ ಗೆ ಕಾಯುತ್ತಿದ್ದರು. ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ಬಂದ ಅಪರಿಚಿತ ವ್ಯಕ್ತಿ ಬೀಳಗಿಗೆ ಹೇಗೆ ಹೋಗುವುದು ಎಂದು ವಿಛಾರಿಸಿದಾಗ ಬಸವರಾಜ, ತಾನೂ ಆ ಕಡೆಗೆ ಹೋಗುತ್ತಿರುವುದಾಗಿ ಆ ಬೈಕ್ ಗೆ ಹತ್ತಿದ್ದಾರೆ.
ಮಾಜಿ ಸೈನಿಕ ಬಸವರಾಜರನ್ನು ಬೈಕ್ ಗೆ ಹತ್ತಿಸಿಕೊಂಡು ತುಸು ದೂರ ಸಾಗಿ ಹೆದ್ದಾರಿ ಪಕ್ಕ ಕಚ್ಚಾದಾರಿಯೊಳಗೆ ಕರೆದೊಯ್ದು ಬಸವರಾಜನನ್ನು ಹೆದರಿಸಿ, ಬೆದರಿಸಿ ಕೊರಳಿನಲ್ಲಿದ್ದ ಚೈನನ್ನು ಕಿತ್ತುಕೊಂಡು, ಮೊಬೈಲ್ ಕೊಡಲು ಹೆದರಿಸಿ, ಬಳಿಕ ಮೊಬೈಲ್ ಪಡೆದು ತುಸು ದೂರು ಎಸೆದು, ಮೊಬೈಲ್ ತೆಗೆದುಕೊಂಡ ಬಾ ಎಂದು ಬೆದರಿಸಿದಾಗ ಮೊಬೈಲ್ ತರಲು ಬಸವರಾಜ ಹೋದಾಗ, ಅಪರಿಚಿತ ವ್ಯಕ್ತಿ (ಕಳ್ಳ) ಪರಾರಿಯಾಗಿದ್ದಾನೆ.
ಈ ಕುರಿತ ಪ್ರಕರಣ ಕಲಾದಗಿ ಪೊಲೀಸ್ ಠಾಣೆಯಲ್ಲಿ ಡಿ. 10 ರಂದು ದೂರು ದಾಖಲಾಗಿದೆ.