ಶ್ರೀನಗರ : ಜಮ್ಮು ಕಾಶ್ಮೀರದ ಬಡ ಜನರ ಕೈಯಲ್ಲಿ ಬಂದೂಕು ಮತ್ತು ಕಲ್ಲು ಎರಡೂ ಇದೆ; ಆದುದರಿಂದ ಅವರ ಬದುಕು ದುರಂತಮಯವಾಗುವುದನ್ನು ತಪ್ಪಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಭಯೋತ್ಪಾದನೆಯ ಪಿಡುಗಿನಿಂದ ರಾಜ್ಯದಲ್ಲಿ ಜೀವ ಕಳೆದುಕೊಳ್ಳುತ್ತಿರುವ ಬಡ ಜನರನ್ನು ಪಾರು ಮಾಡಲು ಮಧ್ಯಮ ಮಟ್ಟದ ಉಪಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಮೆಹಬೂಬ ಹೇಳಿದರು.
ಶೋಪಿಯಾನ್ ಎನ್‌ಕೌಂಟರ್ ನಲ್ಲಿ ಐವರು ಪೌರರು ಮೃತಪಟ್ಟಿರುವುದಕ್ಕೆ ಪ್ರತಿಕ್ರಿಯಿಸುತ್ತಿದ್ದ ಪಿಡಿಪಿ ನಾಯಕಿ, ರಾಜ್ಯದ ಬಡಜನರು ತಮ್ಮ ದಾರಿದ್ರéದ ಪರಿಣಾಮವಾಗಿ ದಾರಿ ತಪ್ಪುವುದನ್ನು ತಡೆಯುವ ಉಪಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
“ನಮ್ಮ ಯೋಧರು ಮತ್ತು ಮಕ್ಕಳು ಹತರಾಗುತ್ತಿದ್ದಾರೆ. ಬಡಜನರ ಕೈಯಲ್ಲಿ ಬಂದೂಕು ಮತ್ತು ಕಲ್ಲು ಎರಡೂ ಇದೆ. ಆದುದರಿಂದ ಬಡಜನರನ್ನು ಪಾರು ಮಾಡುವ ಮಧ್ಯಮ ಮಟ್ಟದ ಉಪಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ’ ಎಂದು ಮೆಹಬೂಬ ಹೇಳಿದರು.
ನಿನ್ನೆ ಭಾನುವಾರ ಶೋಪಿಯಾನ್ ಎನ್‌ಕೌಂಟರ್ ನಲ್ಲಿ ಐವರು ನಾಗರಿಕರು ಹತರಾದುದನ್ನು ಅನುಸರಿಸಿ ಮೆಹಬೂಬ ಅವರು, ಕೇಂದ್ರದಲ್ಲಿನ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ “ಹಾಲಿ ಸ್ಥಿತಿಯಲ್ಲಿ ರಾಜ್ಯದ ಅಮಾಯಕರ ಜನರ ಜೀವ ಉಳಿಸಲು ಅವರ ಮೇಲೆ ಅನುಕಂಪವನ್ನು ತೋರಬೇಕು’ ಎಂದು ಒತ್ತಾಯಿಸಿದ್ದರು.