ಮುಂಬಯಿ: ಬೊರಿವಲಿ ಪೂರ್ವದ ರಾಜೇಂದ್ರ ನಗರ ದತ್ತಪಾಡಾ ಶ್ರೀ ದುರ್ಗಾ ಪರಮೇಶ್ವರಿ ಮತ್ತು ಶ್ರೀ ಬ್ರಹ್ಮಬೈದರ್ಕಳ ಸೇವಾ ಸಮಿತಿ ಇದರ ಬ್ರಹ್ಮ ಬೈದರ್ಕಳ ನೇಮದ ಸುವರ್ಣಮಹೋತ್ಸವ ಡಿ. 24ರಂದು ಜರಗಿತು.
ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮವಾಗಿ ಸಾಣೂರು ಸಾಂತಿಂಜ ಜನಾರ್ದನ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಅನ್ನಸಂತರ್ಪಣೆ ಜರಗಿತು. ಸಂಜೆ ಭಜನೆ ಆನಂತರ ಧಾರ್ಮಿಕ ಸಭಾ ಕಾರ್ಯಕ್ರಮ ನೆರವೇರಿತು. ಬಿಲ್ಲವರ ಮಹಾ ಮಂಡಳದ ಅಧ್ಯಕ್ಷ ಜಯ ಸಿ. ಸುವರ್ಣ, ಉತ್ತರ ಮುಂಬಯಿ ಸಂಸದ ಗೋಪಾಲ್ ಸಿ. ಶೆಟ್ಟಿ, ಭಾರತ್ ಬ್ಯಾಂಕಿನ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಪೊವಾಯಿ ಮಹಾಶೇಷ ರುಂಡಮಾಲಿನಿ ದೇವಸ್ಥಾನದ ಇದರ ಧರ್ಮದರ್ಶಿ ಶ್ರೀ ಸುವರ್ಣ ಬಾಬಾ, ಸಮಾಜ ಸೇವಕರುಗಳಾದ ಪ್ರಶಾಂತ್ ಪೂಜಾರಿ, ಉದ್ಯಮಿ ತಮ್ಮಣ್ಣ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತುಳುನಾಡ ವೀರ-ಪುರುಷ ಕೋಟಿ-ಚೆನ್ನಯರ ಪೂಜಾರಿಗಳಾಗಿ ಹಲವಾರು ನೇಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅವಳಿ ಸಹೋದರರಾದ ಉಮೇಶ್ ಪೂಜಾರಿ ಮತ್ತು ರಮೇಶ್ ಪೂಜಾರಿ ಇರ್ವತ್ತೂರು ಅವರನ್ನು ಚಿನ್ನದ ಸರ ತೊಡಿಸಿ, ಹೂವಿನ ಹಾರ, ಸ್ಮರಣಿಕೆಯನ್ನಿತ್ತು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.
ಅಲ್ಲದೆ ಅತಿಥಿಗಳಾಗಿ ಪಾಲ್ಗೊಂಡ ಜಯ ಸಿ. ಸುವರ್ಣ, ಗೋಪಾಲ ಸಿ. ಶೆಟ್ಟಿ, ಗಂಗಾಧರ ಜೆ. ಪೂಜಾರಿ, ಪ್ರಶಾಂತ್ ಪೂಜಾರಿ, ತಮ್ಮಣ್ಣ ಅವರನ್ನು ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು. ದೇವಿ ಪಾತ್ರಿ ಪ್ರಸಾದ್ ಸಾಲ್ಯಾನ್ ಕಾರ್ಕಳ, ಮಧ್ಯಸ್ಥರಾದ ರಾಕೇಶ್ ಭಟ್ ಕಾರ್ಕಳ, ರಾಜು ಪೂಜಾರಿ ಮೂಡಬಿದ್ರೆ, ವಿಶ್ವನಾಥ ಗುರುಸ್ವಾಮಿ, ಉಮೇಶ್ ಕಾಂತವರ, ಅರ್ಚಕ ಕೇಶವ ಎ. ಬಿ., ಶೈಲೇಶ್ ಪೂಜಾರಿ, ಅಣ್ಣಿ ಪೂಜಾರಿ, ಸತೀಶ್ ದೇವಾಡಿಗ ಅವರನ್ನು ಸಮಿತಿಯ ವತಿಯಿಂದ ಗೌರವಿಸಲಾಯಿತು.
ಸಮಿತಿಯ ಅಧ್ಯಕ್ಷ ಮುಂಡಪ್ಪ ಎಸ್. ಪಯ್ಯಡೆ, ಮೊಕ್ತೇಸರ ಸುಮತಿ ಕೆ. ಬಂಗೇರ ಬೆಳುವಾಯಿ, ಕಾರ್ಯಕಾರಿ ಸಮಿತಿಯ ಸದಸ್ಯರು, ವ್ಯವಸ್ಥಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಚಿತ್ರ-ವರದಿ : ರಮೇಶ್ ಉದ್ಯಾವರ