Advertisement

ಗಡಿ ಭದ್ರತೆ ; ಲಡಾಖ್‌ ಕಾವಲಿಗೆ ಬೆಂಗಳೂರು ಕಾಪ್ಟರ್‌!

12:13 AM Aug 13, 2020 | mahesh |

ಹೊಸದಿಲ್ಲಿ/ಬೆಂಗಳೂರು: ಚೀನ ಜತೆಗಿನ ಗಡಿ ಉದ್ವಿಗ್ನತೆ ನಡುವೆಯೇ ಭಾರತ ವಿಶ್ವದ ಅತ್ಯಂತ ಹಗುರ ಯುದ್ಧ ಹೆಲಿಕಾಪ್ಟರ್‌ಗಳನ್ನು ಲೇಹ್‌-ಲಡಾಖ್‌ನಲ್ಲಿ ಕಾರ್ಯಾಚರಣೆಗಾಗಿ ನಿಯೋಜಿಸಿದೆ. ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ ಅಭಿವೃದ್ಧಿ ಪಡಿಸಿದ 2 ಲಘು ಸಮರ ಹೆಲಿಕಾಪ್ಟರ್‌ಗಳು (ಎಲ್‌ಸಿಎಚ್‌) ಎತ್ತರದ ನೆಲೆಗಳಿಗೆ ಶಸ್ತ್ರಾಸ್ತ್ರಗಳನ್ನು ಹೊತ್ತೂಯ್ಯಬಲ್ಲವು ಅಲ್ಲದೆ ಹವಾಮಾನ ವೈಪರೀತ್ಯದ ನಡುವೆಯೂ ನಿಖರ  ದಾಳಿ ಮಾಡಬಲ್ಲವು. ಲಡಾಖ್‌ನ 15-17 ಸಾವಿರ ಅಡಿ ಎತ್ತರದಲ್ಲಿ ಇವು ಹಾರಾಟ ನಡೆಸಲಿವೆ.

Advertisement

ಗೇಮ್‌ ಚೇಂಜರ್‌
ಎಲ್‌ಸಿಎಚ್‌ಗಳನ್ನು ಸ್ವದೇಶಿ ಯುದ್ಧ ಹೆಲಿಕಾಪ್ಟರ್‌ ರಂಗದಲ್ಲಿ ಗೇಮ್‌ ಚೇಂಜರ್‌ ಎಂದೇ ವಿಶ್ಲೇಷಿಸಲಾಗುತ್ತಿದೆ. “ಇವು ಜಗತ್ತಿನ ಅತ್ಯಂತ ಹಗುರ ಯುದ್ಧ ಹೆಲಿಕಾಪ್ಟರ್‌ಗಳು. ಐಎಎಫ್ನ ಅಗತ್ಯಕ್ಕೆ ತಕ್ಕಂತೆ ಎಚ್‌ಎಎಲ್‌ ಇದನ್ನು ವಿನ್ಯಾಸಗೊಳಿಸಿದೆ. ಆತ್ಮನಿರ್ಭರ ಭಾರತ ಕಲ್ಪನೆಯಲ್ಲಿ ಸಿದ್ಧಪಡಿಸಲಾಗಿದೆ’ ಎಂದು ಎಚ್‌ಎಎಲ್‌ ಸಿಎಂಡಿ ಆರ್‌. ಮಾಧವನ್‌ ತಿಳಿಸಿದ್ದಾರೆ.

ಒಟ್ಟು 110 ಎಲ್‌ಸಿಎಚ್‌
ಭಾರತೀಯ ಸೇನೆಗೆ ಒಟ್ಟು 110 ಲೈಟ್‌ ಕಾಂಬಾಟ್‌ ಹೆಲಿಕಾಪ್ಟರ್‌ಗಳ ಅಗತ್ಯ ಕಂಡುಕೊಳ್ಳಲಾಗಿದೆ. ಆರಂಭದಲ್ಲಿ 2 ಎಲ್‌ಸಿಎಚ್‌ಗಳನ್ನು ಸೇನೆಗೆ ಹಸ್ತಾಂತರಿಸಲಾಗಿದೆ. ವಿಶ್ವದ ಅತ್ಯಂತ ಲಘು ಯುದ್ಧ ಹೆಲಿಕಾಪ್ಟರನ್ನು ಅಲ್ಪಾವಧಿ ಯಲ್ಲಿ ದೇಶೀಯವಾಗಿ ನಿರ್ಮಿಸುವಲ್ಲಿ ಎಚ್‌ಎಎಲ್‌ ಯಶಸ್ವಿಯಾಗಿದೆ. ಬುಧವಾರ ಹೆಲಿಕಾಪ್ಟರ್‌ನ ಸಾಮರ್ಥ್ಯ ಪ್ರದರ್ಶನ ನಡೆಯಿತು. ಅನಂತರ ಭಾರತೀಯ ವಾಯು ಪಡೆಗೆ ಎಚ್‌ಎಎಲ್‌ ಹಸ್ತಾಂತರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next