Advertisement
ಜನ ಪ್ರಕಾಶನವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಅಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಎಚ್.ಎನ್. ನಾಗಮೋಹನ ದಾಸ್ ಅವರ “ಮೀಸಲಾತಿ-ಭ್ರಮೆ ಮತ್ತು ವಾಸ್ತವ’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.
Related Articles
Advertisement
ವಿದ್ಯೆ, ಸಂಪತ್ತು, ಪ್ರತಿಭೆ ಯಾವುದೋ ಒಂದು ಜಾತಿ, ವರ್ಗದ ಸಂಪತ್ತಲ್ಲ. ಅದಕ್ಕೆ ಉದಾಹರಣೆಯಂತೆ ಬದುಕಿದವರು ಡಾ. ಬಿ.ಆರ್. ಅಂಬೇಡ್ಕರ್ ಅವರು. ದೇಶದ ಕೆಲವೇ ಬುದ್ಧಿವಂತ, ಮೇಧಾವಿ ರಾಜಕಾರಣಿಗಳಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಕೂಡಾ ಒಬ್ಬರು ಎಂದರು.
ಇದ್ದಿದ್ದು ಇದ್ದ ಹಾಗೆ ಹೇಳಿದರೆ: ದೇಶದ ಮೂಲ ನಿವಾಸಿಗಳ ಬಗ್ಗೆ ಮಾತನಾಡುವಾಗ ಆರ್ಯರ ಬಗ್ಗೆ ಮಾತನಾಡಿದ್ದೆ. ಆಗ ಎಲ್ಲರೂ ನನ್ನ ಮೇಲೆ ಮುಗಿಬಿದ್ದರು. ಇದ್ದದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದರು ಎನ್ನುವಂತಹ ಪರಿಸ್ಥಿತಿ ಎದುರಿಸಿದೆ. ನಾನು ಒಬ್ಬ ಮಾತನಾಡಿದರೆ 20 ಜನ ನನ್ನ ಮೇಲೆ ಮುಗಿಬೀಳುತ್ತಾರೆ. ಆದರೆ, ನಮ್ಮವರ್ಯಾರೂ (ಹಿಂದುಳಿದವರು) ನನ್ನ ಪರವಾಗಿ ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು. ಪತ್ರಕರ್ತ ಬಿ.ಎಂ.ಹನೀಫ್, ಜನ ಪ್ರಕಾಶನದ ಬಿ.ರಾಜಶೇಖರ ಮೂರ್ತಿ, ಗ್ರಾಮ ಭಾರತ ಸಾಂಸ್ಕೃತಿಕ ವೇದಿಕೆಯ ಕಿಗ್ಗ ರಾಜಶೇಖರ್ ಇತರರಿದ್ದರು. ಜನರಲ್ಲಿರುವ ಮೀಸಲಾತಿ ಬಗೆಗಿನ ಮಾಹಿತಿ ನೀಡಲು ಪುಸ್ತಕ ರಚಿಸಲಾಗಿದೆ. ಮೀಸಲಾತಿ ಹಾಗೂ ಶೋಷಿತ ವರ್ಗದವರ ಪರವಾಗಿ ಮಾತನಾಡಿದರೆ ದೇಶದ್ರೋಹ ಕಾಯ್ದೆ ಅಡಿ ಬಂಧಿಸಲಾಗುತ್ತಿದೆ. ಅದಾಗದಿದ್ದರೂ ಎನ್‌ಕೌಂಟರ್ ಮಾಡಲಾಗುತ್ತಿದೆ. ಪ್ರತಿಭಟಿಸಿದರೆ ನಮ್ಮ ಮನೆಗಳ ಮೇಲೆ ಬುಲ್ಡೋಜರ್ ಹತ್ತಿಸುತ್ತಾರೆ. ಹೀಗೆ ಭಯದಲ್ಲಿಯೇ ಜೀವಿಸುವ ಮತ್ತು ಮಾತನಾಡುವ ಸ್ಥಿತಿಯಿದೆ.
-ನಾಗಮೋಹನದಾಸ್
ನಿವೃತ್ತ ನ್ಯಾಯಮೂರ್ತಿ, ಲೇಖಕ ನಾನು ಒಬ್ಬ ಹಿಂದುಳಿದ ಜಾತಿಗೆ ಸೇರಿದವನು. ನಾನೂ 3 ಸಾವಿರ ಚಿತ್ರಗೀತೆಗಳನ್ನು ಬರೆದರೂ, ಜನರು ನನ್ನನ್ನು ಒಬ್ಬ ಪ್ರತಿಭಾವಂತ ಎಂದು ಗುರುತಿಸುವುದೇ ಇಲ್ಲ. ಇದು ನಮ್ಮ ಪರಿಸ್ಥಿತಿ.
-ಹಂಸಲೇಖ
ಸಂಗೀತ ನಿರ್ದೇಶಕ ಕೆಲವರು ಮೀಸಲಾತಿ ಕುರಿತಾಗಿ ಸಮಾಜದಲ್ಲಿ ಮತ್ಸರದ ವಾತಾವರಣ ಬೆಳೆಸುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಮೀಸಲಾತಿ ವ್ಯವಸ್ಥೆಗೆ ಕುತ್ತು ತರಲಾಗುತ್ತಿದೆ. ಈ ಬಗ್ಗೆ ಎಲ್ಲರೂ ಎಚ್ಚರವಹಿಸಬೇಕು.
-ಬಂಜಗೆರೆ ಜಯಪ್ರಕಾಶ್
ಪ್ರಗತಿಪರ ಚಿಂತಕ