ರಾಮೇಶ್ವರಂ:ಮಾಜಿ ರಾಷ್ಟ್ರಪತಿ,ಅಬ್ದುಲ್ ಕಲಾಂ ಅವರ ಕುರಿತ ‘ಡಾ ಎಪಿಜೆ ಅಬ್ದುಲ್ ಕಲಾಂ: ಮೆಮೊರೀಸ್ ನೆವರ್ ಡೈ’ ಪುಸ್ತಕವನ್ನು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಡುಗಡೆ ಮಾಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿ, ಬಡ ವ್ಯಕ್ತಿಯೊಬ್ಬ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯುನ್ನತ ಹುದ್ದೆಯನ್ನು ತಲುಪಿದಾಗ, ಆತ ಪ್ರಜಾಪ್ರಭುತ್ವವನ್ನು ಬಡವರ ಕಲ್ಯಾಣಕ್ಕಾಗಿ ಅರ್ಪಿಸುತ್ತಾನೆ. ಈ ಕಲ್ಪನೆಯನ್ನು ಡಾ. ಕಲಾಂ ಮತ್ತು ಮೋದಿ ಜಿ ಇಬ್ಬರೂ ನಿಜವೆಂದು ಸಾಬೀತುಪಡಿಸಿದ್ದಾರೆ” ಎಂದರು.
‘ಡಾ.ಎ.ಪಿ.ಜೆ. ಅಬ್ದುಲ್ ಕಲಾಂ: ಮೆಮೊರೀಸ್ ನೆವರ್ ಡೈ’ ಎಂಬ ಪುಸ್ತಕವು ರಾಮೇಶ್ವರಂ ಎಂಬ ಸಣ್ಣ ಪಟ್ಟಣದಿಂದ ಅತ್ಯುನ್ನತ ಸಾಂವಿಧಾನಿಕ ಹುದ್ದೆಗೆ ಡಾ ಕಲಾಂ ಅವರ ಪ್ರಯಾಣವನ್ನು ವಿವರಿಸುತ್ತದೆ ಎಂದರು.
ಕಲಾಂ ಅವರು ಮಾನವೀಯತೆಯ ಸುಧಾರಣೆಗಾಗಿ ಕನಸು ಕಾಣಲು ಮತ್ತು ಕಾರ್ಯನಿರ್ವಹಿಸಲು ಭಾರತಕ್ಕೆ ಕಲಿಸಿದರು. ಅವರ ಮಾರ್ಗದಲ್ಲಿ ನಡೆದರೆ ಅದು ಇಂದು ನೆರವೇರುವುದನ್ನು ನೋಡಬಹುದು.ಪುಸ್ತಕದ ಲೇಖಕರು ನಮ್ಮನ್ನು ಅವರ ಸ್ಮರಣೆಯ ಹಾದಿಯಲ್ಲಿ ಇಳಿಸಿ ಹೊಸ ತಲೆಮಾರು ಹೊಸ ಎತ್ತರವನ್ನು ತಲುಪಲು ಕನಸುಗಳನ್ನು ಎತ್ತಿ ತೋರಿಸುತ್ತಾರೆ ಎಂದರು.
ಈ ಪುಸ್ತಕವು ತಮಿಳಿನ ‘ನಿನೈವುಗಲುಕ್ಕು ಮರಣಮಿಲ್ಲೈ’ ಪುಸ್ತಕದ ಇಂಗ್ಲಿಷ್ ಅನುವಾದವಾಗಿದೆ. ಕಲಾಂ ಅವರಿಗೆ ಆತ್ಮೆಯರಾಗಿದ್ದ ಇಬ್ಬರು ಬರೆದಿದ್ದಾರೆ. ಕಲಾಂ ಅವರ ಸೋದರ ಸೊಸೆ ಡಾ.ನಜೀಮಾ ಮರೈಕಾಯರ್ ಮತ್ತು ಖ್ಯಾತ ಇಸ್ರೋ ವಿಜ್ಞಾನಿ ಡಾ. ವೈ.ಎಸ್. ರಾಜನ್ ಬರೆದಿದ್ದಾರೆ.