Advertisement

ಅಂದು ಬಾಲಿವುಡ್ ಸ್ಟಾರ್ ಆಗಿ ಮೆರೆದು ಬಡತನದಲ್ಲಿಯೇ ಮಣ್ಣಾದರು!

04:28 PM May 24, 2018 | Sharanya Alva |

ಕೋಟಿ ಕಟ್ಟಿ ಮೆರೆದವರೆಲ್ಲಾ ಮಣ್ಣು ಪಾಲಾದರು ಎಂಬ ನಾಣ್ನುಡಿ ಬಾಲಿವುಡ್ ನ ಖ್ಯಾತ ಸ್ಟಾರ್ ನಟರಿಗೂ ಅನ್ವಯಿಸುತ್ತದೆ ಎಂಬುದಕ್ಕೆ ಹಲವಾರು ಉದಾಹರಣೆಗಳು ಸಾಕ್ಷಿಯಾಗಿವೆ. ಹೌದು ಬಾಲಿವುಡ್ ರಂಗದಲ್ಲಿ ಹೆಸರು, ಹಣ, ಕೀರ್ತಿ ಗಳಿಸಿಯೂ ಕೂಡಾ ಕೊನೆಗೆ ಬೀದಿಪಾಲಾದ ಹೃದಯ ವಿದ್ರಾವಕ ಕಥಾನಕ ಇದಾಗಿದೆ. ಸ್ಟಾರ್ ನಟ, ನಟಿಯರಾಗಿ ಹೆಸರು ಮಾಡಿದ್ದವರು ಕೊನೆಗೆ ಬರಿಗೈ ದಾಸರಾಗಿ ಇಹಲೋಕ ತ್ಯಜಿಸಿದ ಹಲವರ ಚಿತ್ರಣ ಇಲ್ಲಿದೆ..

Advertisement

ಮೀನಾ ಕುಮಾರಿ:

ಬಾಲಿವುಡ್ ಚಿತ್ರರಂಗದಲ್ಲಿ ದುರಂತ ರಾಣಿ ಎಂದೇ ಹೆಸರಾಗಿದ್ದ ಮೀನಾ ಕುಮಾರಿ ನಟಿಯಾಗಿ, ಗಾಯಕಿಯಾಗಿ ಹಾಗೂ ಕವಿಯಾಗಿ ಚಿರಪರಿಚಿತರಾಗಿದ್ದವರು.  ಹಿಂದಿ ಚಿತ್ರರಂಗದ ಐತಿಹಾಸಿಕ ಪಾತ್ರದಲ್ಲಿ ಅದ್ಭುತ ನಟಿ ಎಂದೇ ಹೆಸರು ಮಾಡಿದ್ದರು. ತಮ್ಮ 33 ವರ್ಷಗಳ ಸಿನಿ ಜರ್ನಿಯಲ್ಲಿ 92 ಸಿನಿಮಾಗಳಲ್ಲಿ ಅಭಿನಯಿಸಿದ್ದರು.

ನಾಲ್ಕು ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ 1954ರಲ್ಲಿ ತೆರೆಕಂಡಿದ್ದ ಬೈಜು ಬಾವ್ರ ಹಿಂದಿ ಸಿನಿಮಾದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದರು. 1950, 1960ರ ದಶಕದಲ್ಲಿ ಜನಪ್ರಿಯ ನಟಿಯಾಗಿದ್ದವರು ಮೀನಾ ಕುಮಾರಿ. 4ನೇ ವಯಸ್ಸಿನಲ್ಲಿಯೇ ಚಿತ್ರರಂಗ ಪ್ರವೇಶಿಸಿದ್ದ ಮೀನಾ 1952ರಲ್ಲಿ ಕಮಲ್ ಅಮ್ರೋಹಿಯನ್ನು ಗುಟ್ಟಾಗಿ ವಿವಾಹವಾಗಿದ್ದರು. ನಿರ್ದೇಶಕ ಕಮಲ್ ಗೆ ಅದಾಗಲೇ ಮದುವೆಯಾಗಿತ್ತು, ಇಬ್ಬರ ನಡುವಿನ ಮನಸ್ತಾಪ 1964ರಲ್ಲಿ ವಿಚ್ಛೇದನದಲ್ಲಿ ಅಂತ್ಯಗೊಂಡಿತ್ತು.

ತದನಂತರ ಮೀನಾ ಕುಮಾರಿ ಸಂಪೂರ್ಣವಾಗಿ ಕುಡಿತದ ದಾಸಳಾಗಿ ಬಿಟ್ಟಿದ್ದಳು. ಇದರ ಪರಿಣಾಮ ಆಕೆ ತೀವ್ರವಾಗಿ ಯಕೃತ್ತಿನ(ಕಿಡ್ನಿ) ತೊಂದರೆಗೆ ಒಳಗಾಗಿದ್ದರು. ಮೀನಾ ಕುಮಾರಿಯ ಕೊನೆಯ ಚಿತ್ರ ಪಾಕೀಝಾ ಬಿಡುಗಡೆಯಾಗಿ ಮೂರು ವಾರಗಳಲ್ಲಿ ತೀವ್ರ ಅನಾರೋಗ್ಯದಿಂದ 1972ರ ಮಾರ್ಚ್ 31ರಂದು ಇಹಲೋಕ ತ್ಯಜಿಸಿದ್ದರು.

Advertisement

ಸ್ಟಾರ್ ನಟಿ ಅನಾಥೆಯಾಗಿದ್ದಳು!

ಒಂದು ಕಾಲದ ಸ್ಟಾರ್ ನಟಿಯಾಗಿದ್ದ ಮೀನಾ ಕುಮಾರಿ ಕೊನೆಯ ದಿನಗಳನ್ನು ನರ್ಸಿಂಗ್ ಹೋಮ್ ಒಂದರಲ್ಲಿ ಕಳೆದಿದ್ದರು. ಆ ಹೊತ್ತಿಗೆ ಆಕೆಯಿಂದ ಎಲ್ಲರೂ ದೂರವಾಗಿದ್ದರು. ಕೊನೆಗೆ ಆಸ್ಪತ್ರೆಯ ಬಿಲ್ ಪಾವತಿಸಲೂ ಹಣ ಇಲ್ಲವಾಗಿತ್ತಂತೆ. ಕೊನೆಗೆ ಮುಂಬೈನ ನಾರಿಯಲ್ ವಾಡಿ ರಹೆಮತಾಬಾದ್ ಖಬರಿಸ್ತಾನ್ ದಲ್ಲಿ ಶವವನ್ನು ಹೂಳಲಾಗಿತ್ತು.

ಅಚಲಾ ಸಚ್ದೇವ್:

ಹಿಂದಿ ಚಿತ್ರರಂಗದಲ್ಲಿ ತಾಯಿ ಹಾಗೂ ಅಜ್ಜಿ ಪಾತ್ರದಲ್ಲಿ ಪ್ರೇಕ್ಷಕರ ಮನಗೆದ್ದ ನಟಿ ಅಚಲಾ ಸಚ್ಚೇವ್. ಮೂಲತಃ ಪೇಶಾವರದ ಅಚಲಾ ಅವರು 1920 ಮೇ 3ರಂದು ಜನಿಸಿದ್ದರು. ಬಾಲನಟಿಯಾಗಿ ಭಾರತೀಯ ಚಿತ್ರರಂಗದಲ್ಲಿ ತಮ್ಮ ಚಿತ್ರರಂಗದ ಬದುಕನ್ನು ಆರಂಭಿಸಿದ್ದರು. 1965ರಲ್ಲಿ ತೆರೆಕಂಡ ವಕ್ತ್ ಸಿನಿಮಾದಲ್ಲಿ ಬಲರಾಜ್ ಸಾಹ್ನಿ ಅವರ ಪತ್ನಿಯ ಪಾತ್ರ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಸುಮಾರು 130 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡಾ. ಕೊನೆಯ ದಿನಗಳಲ್ಲಿ ಪಾರ್ಶ್ವವಾಯು ಪೀಡಿತರಾಗಿ, ಕಣ್ಣಿನ ದೃಷ್ಟಿಯನ್ನೂ ಕಳೆದುಕೊಂಡಿದ್ದರು. ದುರಂತ ಅಂದರೆ ಅಚಲ ನಿಧನರಾಗುವ ವೇಳೆ ಆಸ್ಪತ್ರೆಯಲ್ಲಿ ಒಬ್ಬಂಟಿಯಾಗಿದ್ದರು. ಅಲ್ಲದೇ ಹೆಸರಾಂತ ನಟಿಯಾಗಿದ್ದರೂ ಹಣವಿಲ್ಲದೆ ಪರದಾಡುತ್ತಿದ್ದರು!

ವಿಮಿ:

ಬಾಲಿವುಡ್ ನಲ್ಲಿ ವಿಮಿ ಎಂಬ ನಟಿ ಹೆಸರನ್ನು ಒಮ್ಮೆ ನೆನಪಿಸಿಕೊಳ್ಳಿ..ಬಿಆರ್ ಛೋಪ್ರಾ ಅವರ ಬ್ಲಾಕ್ ಬಸ್ಟರ್ ಹಮ್ ರಾಝ್ ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಿದ್ದರು. ಹಾರ್ಡ್ ವೇರ್ ಉದ್ಯಮಿ ಶಿವ್ ಅಗರ್ವಾಲ್ ಜತೆ ವಿವಾಹವಾಗಿತ್ತು. ಬಾಲಿವುಡ್ ನ ರಾಜ್ ಕುಮಾರ್ ಹಾಗೂ ಸುನೀಲ್ ದತ್ ಜತೆ ನಾಯಕಿ ನಟಿಯಾಗಿ ನಟಿಸಿ ಹೆಸರಾದವರು ವಿಮಿ. ಚಿತ್ರರಂಗದಲ್ಲಿನ ಯಶಸ್ಸಿನಿಂದ ಹಣ, ಪ್ರೀತಿ ಹಾಗೂ ಸ್ಟಾರ್ ಪಟ್ಟ ಸಿಕ್ಕಿತ್ತು. ಪತಿ ಅಗರ್ವಾಲ್ ವಿಚ್ಛೇದನ ಮೂಲಕ ದೂರವಾದ ಮೇಲೆ ಸಿನಿಮಾದಲ್ಲಿ ಅವಕಾಶವೇ ಇಲ್ಲದಂತಾಯಿತು! ಇದರಿಂದ ಆಕೆ ದಿವಾಳಿಯಾಗಿದ್ದಳು. ಅಷ್ಟೇ ಅಲ್ಲ ಯಶಸ್ಸಿನ ಮೆಟ್ಟಿಲು ಏರಿ ಎರಡು ವರ್ಷಗಳಲ್ಲಿಯೇ ಆಕೆಯನ್ನು ಎಲ್ಲರೂ ಮರೆತೇ ಬಿಟ್ಟಿದ್ದರು. 1977 ಆಗಸ್ಟ್ 22ರಂದು ವಿಮಿ ಇಹಲೋಕ ತ್ಯಜಿಸಿದಾಗ ವಯಸ್ಸು 34! ಬಾಲಿವುಡ್ ನಲ್ಲಿ ಸ್ಟಾರ್ ನಟಿ ಎನಿಸಿಕೊಂಡಿದ್ದ ವಿಮಿಯ ಮೃತದೇಹವನ್ನು ಕೈಗಾಡಿಯಲ್ಲಿ ಇಟ್ಟು ತಳ್ಳಿಕೊಂಡು ಶವಾಗಾರಕ್ಕೆ ಕೊಂಡೊಯ್ಯಲಾಗಿತ್ತು!

ಭರತ್ ಭೂಷಣ್ ಭಲ್ಲಾ:

ಹಿಂದಿ ಸಿನಿಮಾ ರಂಗದಲ್ಲಿ ಭರತ್ ಭೂಷಣ್ ಭಲ್ಲಾ ನಟರಾಗಿ, ನಿರ್ಮಾಪಕರಾಗಿ, ಸ್ಕ್ರಿಪ್ಟ್ ರೈಟರ್ ಆಗಿ ಹೆಸರು ಮಾಡಿದ್ದರು. ಮೀರತ್ ನ ಖ್ಯಾತ ಜಮೀನ್ದಾರ್ ರಾಯ್ ಬಹದ್ದೂರ್ ಪ್ರಕಾಶ್ ಅವರ ಪುತ್ರಿ ಶಾರದಾ ಅವರನ್ನು ವಿವಾಹವಾಗಿದ್ದರು. ಭಲ್ಲಾ ದಂಪತಿಗೆ ಇಬ್ಬರು ಪುತ್ರಿಯರು. 1950, 60ರ ದಶಕದ ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದರು. ವಿಧಿ ಬರಹ ಜುಗಾರಿ ಚಟಕ್ಕೆ ಬಿದ್ದು ಸಾಲದ ಸುಳಿಯಲ್ಲಿ ಸಿಲುಕಿದ ಭರತ್ ಭೂಷಣ್ ಬಾಂದ್ರಾದಲ್ಲಿದ್ದ ಬಂಗ್ಲೆ, ಕಾರು ಹಾಗೂ ತಮ್ಮ ಸಂಗ್ರಹದಲ್ಲಿದ್ದ ಪುಸ್ತಕಗಳನ್ನೂ ಸಹ ಮಾರಾಟ ಮಾಡಿದ್ದರು. ಜೀವನ ನಡೆಸಲು ಕೊನೆಗೆ ವಾಚ್ ಮನ್ ಆಗಿ ಕಾರ್ಯನಿರ್ವಹಿಸಿದ್ದರು! ಹಣವಿಲ್ಲದೆ ಮುಂಬೈನ ಸ್ಲಂ ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಒಂದು ಕಾಲದ ಸ್ಟಾರ್ ನಟ 1992ರಲ್ಲಿ ಸಾವನ್ನಪ್ಪಿದ ವೇಳೆ ಬರಿಗೈ ದಾಸನಾಗಿದ್ದರು!

ರಾಜ್ ಕುಮಾರಿ ದುಬೆ:

ಭಾರತೀಯ ಸಿನಿಮಾ ರಂಗದ ಮೊದಲ ಹಿನ್ನೆಲೆ ಗಾಯಕಿ ರಾಜಕುಮಾರಿ ದುಬೆ ಅದ್ಭುತ ಪ್ರತಿಭೆ. ಆದರೆ ಕಾಲಚಕ್ರ ಉರುಳಿದಂತೆ ಅವಕಾಶ ಇಲ್ಲದೆ ಬದುಕುವ ಸ್ಥಿತಿ ಬಂದೊದಗಿದ್ದು ದುಬೆ ಅವರಿಗೆ..ಬಡತನದಲ್ಲಿಯೇ ಕಾಲ ಕಳೆದ ರಾಜಕುಮಾರಿ ದುಬೆ ಅವರ ಅಂತ್ಯಕ್ರಿಯೆಯ ಖರ್ಚನ್ನು ಭರಿಸಿದ್ದು ನೆರೆಹೊರೆಯವರು!

Advertisement

Udayavani is now on Telegram. Click here to join our channel and stay updated with the latest news.

Next