Advertisement
ಮೃತಳನ್ನು ಥಾಯ್ಲೆಂಡ್ ಕೈಕನ್ ಕೇನ್ನಕಮ್ (31) ಎನ್ನಲಾಗಿದ್ದು, ಮಾಧ್ಯಮ ವರದಿಗಳ ಪ್ರಕಾರ ಕೈಕನ್ ಒಬ್ಬ ಮಾಡೆಲ್ ಆಗಿದ್ದು ಹುಟ್ಟೂರಾದ ಥಾಯ್ಲೆಂಡ್ ನಲ್ಲಿ ಆಕೆಗೆ ಕೆಲಸ ಕಡಿಮೆಯಾದ ಉದ್ಯೋಗ ಅವಕಾಶಗಳ ಹುಡುಕಾಟದಲ್ಲಿ ಆಕೆ ಬಹ್ರೈನ್ ಗೆ ತೆರಳಿದ್ದಳು. ಅಲ್ಲಿ ಅವಳು ಈಶಾನ್ಯ ಥೈಲ್ಯಾಂಡ್‌ನಲ್ಲಿ ತನ್ನ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಅಲ್ಲಿನ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ ಎನ್ನಲಾಗಿದೆ. ಅಲ್ಲದೆ ಆಕೆ ತನ್ನ ಕುಟುಂಬಕ್ಕೆ ತಾನು ಗೆಳೆಯನ ಜೊತೆ ಇಲ್ಲಿ ನೆಲೆಸಿರುವುದಾಗಿ ಹೇಳಿಕೊಂಡಿದ್ದಳು ಆದರೆ ಇತ್ತೀಚಿಗೆ ಒಂದು ವರ್ಷದಿಂದ ಆಕೆ ಕುಟುಂಬದ ಜೊತೆ ಸಂಪರ್ಕಕ್ಕೆ ಸಿಗಲಿಲ್ಲ ಎನ್ನಲಾಗಿದೆ.
ಚೈನಾ ಟೈಮ್ಸ್ ವರದಿಯ ಪ್ರಕಾರ, ಕೈಕನ್ ಜೀವನದಲ್ಲಿ ಏನಾದರೂ ಸಾಧನೆ ಮಾಡಿ ಮುಂದೆ ಬರಬೇಕು ಎಂದು ಬಯಸಿದ್ದಳು, ಆಕೆ ಓರ್ವ ಮಾಡೆಲ್ ಆದ ಕಾರಣ ಥೈಲ್ಯಾಂಡ್ ನಲ್ಲಿ ಅವಕಾಶಗಳು ಸಿಗದೇ ಇದ್ದಾಗ ತನ್ನ ದೇಶ ಬಿಟ್ಟು ಹೊರಗೆ ಹೋಗಲು ನಿರ್ಧರಿಸಿದ್ದಾಳೆ. ಅಲ್ಲದೆ ಕೈಕನ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯಳಾಗಿದ್ದಳು ತನ್ನ ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತಿದ್ದಳು ಆದರೆ ಕಳೆದ ಒಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಆಕೆ ಯಾವುದೇ ಪೋಸ್ಟ್ ಹಾಕಿರಲಿಲ್ಲ ಎನ್ನಲಾಗಿದೆ. ಏಪ್ರಿಲ್ 2023 ರಲ್ಲಿ ಕೇನ್ನಕಮ್ ಪೋಸ್ಟ್ ಮಾಡುವುದನ್ನು ನಿಲ್ಲಿಸಿದಾಗ ಚಿಂತಿತರಾದ ಕುಟುಂಬ ಆಕೆಯ ಸಂಪರ್ಕ ಮಾಡುವ ಕೆಲಸ ಮಾಡಿದ್ದಾರೆ ಆದರೆ ಆಕೆಯ ಸಂಪರ್ಕ ಸಾಧ್ಯವಾಗಲಿಲ್ಲ ಇದರಿಂದ ಗಾಬರಿಗೊಂಡ ಕುಟುಂಬ ಥಾಯ್ ರಾಯಭಾರ ಕಚೇರಿಯಿಂದ ಸಹಾಯವನ್ನು ಕೋರಿದೆ, ಆದರೆ ಕುಟುಂಬಕ್ಕೆ ಯಾವುದೇ ಪ್ರಯೋಜನವಾಗಲಿಲ್ಲ. ಏಪ್ರಿಲ್ 18 ರಂದು, ಆಗ್ನೇಯ ಏಷ್ಯಾದ ಮಹಿಳೆಯ ಶವವನ್ನು ಸಲ್ಮಾನಿಯಾ ವೈದ್ಯಕೀಯ ಸಂಕೀರ್ಣದ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಥಾಯ್ ರಾಯಭಾರ ಕಚೇರಿಯು ಕೇನ್ನಕುಮ್ ಅವರ ಕುಟುಂಬಕ್ಕೆ ಮಾಹಿತಿ ನೀಡಿತ್ತು, ಥಾಯ್ ರಾಯಭಾರ ಕಚೇರಿ ನೀಡಿ ಮಾಹಿತಿಯನ್ನು ಪರಿಶೀಲಿಸಿದ ಕುಟುಂಬ ಮೃತ ಮಹಿಳೆಯ ಮುಖ ಹಾಗೂ ಆಕೆಯ ಕಾಲಿನ ಮೇಲೆ ಹಾಕಲಾದ ಹಚ್ಚೆಯ ಆಧಾರದಲ್ಲಿ ಆಕೆಯೇ ತನ್ನ ಮಗಳೆಂದು ಕುಟುಂಬ ಒಪ್ಪಿಕೊಂಡಿದೆ.
Related Articles
ಚೈನಾ ಟೈಮ್ಸ್ ವರದಿಯ ಪ್ರಕಾರ ಮೃತ ಮಹಿಳೆ ಅತಿಯಾದ ಮದ್ಯ ಸೇವನೆ ಮಾಡಿರುವುದೇ ಆಕೆಯ ಸಾವಿಗೆ ಕಾರಣ ಎಂದು ವರದಿ ನೀಡಿದೆ, ಅತಿಯಾದ ಮದ್ಯ ಸೇವನೆ ಮಾಡಿದ ಪರಿಣಾಮ ರಕ್ತ ನಾಳಗಳು ವೈಫಲ್ಯವಾಗಿ ಮೃತಪಟ್ಟಿದ್ದಾಗಿ ಹೇಳಲಾಗಿದೆ. ಇದೀಗ ಕೇನ್ನಕಮ್ ಅವರ ಕುಟುಂಬವು ಅವರ ದೇಹವನ್ನು ತಾಯ್ನಾಡಿಗೆ ಮರಳಿ ತರಲು ಥಾಯ್ ರಾಯಭಾರ ಕಚೇರಿಯ ಸಹಾಯವನ್ನು ಕೋರುತ್ತಿದೆ.
Advertisement
ಇದನ್ನೂ ಓದಿ: W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ