Advertisement
ಬೆಳಗ್ಗೆ 10ರಿಂದ ಅಪರಾಹ್ನ 4ರ ವರೆಗೆ ಜರಗಿದ ರಕ್ತದಾನ ಶಿಬಿರದಲ್ಲಿ ಸಯಾನ್‌ನ ಲೋಕಮಾನ್ಯ ತಿಲಕ್ ಆಸ್ಪತ್ರೆಯ ಬ್ಲಿಡ್ ಬ್ಯಾಂಕ್‌ನ ವೈದ್ಯರು ಮತ್ತು ಸಿಬಂದಿ ಪಾಲ್ಗೊಂಡು ಸಹಕರಿಸಿದರು. ಪ್ರಸ್ತುತ ಕೊರೊನಾ ಮಹಾಮಾರಿಯಿಂದ ಸರ್ವರು ಲಸಿಕೆ ಪಡೆಯುವ ಅನಿವಾರ್ಯತೆ ಇದ್ದು, ಲಸಿಕೆ ಪಡೆದ 28 ದಿನಗಳ ಕಾಲ ರಕ್ತದಾನ ಸಾಧ್ಯವಿಲ್ಲದ ಕಾರಣ ಮುಂದೆ ರಕ್ತದ ಕೊರತೆ ಎದುರಾಗಬಹುದು ಎಂಬುದನ್ನು ಮನಗಂಡು ಸೇವಾ ಮಂಡಲವು ಈ ಶಿಬಿರವನ್ನು ಆಯೋಜಿಸಿತ್ತು.
ಸೇವಾ ಮಂಡಲದ ಆಡಳಿತ ಸಮಿತಿ, ಕಾರ್ಯಕಾರಿ ಸಮಿತಿಯ ಸರ್ವಸದಸ್ಯರು ರಕ್ತದಾನ ಶಿಬಿರದ ಯಶಸ್ಸಿಗೆ ಸಹಕರಿಸಿದರು.
Related Articles
Advertisement