Advertisement

ಅಮೆರಿಕ ಇತಿಹಾಸದಲ್ಲೇ ಭೀಕರ ಪ್ರಾಕೃತಿಕ ವಿಕೋಪ

07:05 AM Sep 01, 2017 | Team Udayavani |

ಹೂಸ್ಟನ್‌: ಅಮೆರಿಕದ ಟೆಕ್ಸಾಸ್‌ ನಗರವನ್ನೇ ಮುಳುಗಿಸಿರುವ ಹಾರ್ವೆ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ ಗುರುವಾರ 38ಕ್ಕೇರಿಕೆಯಾಗಿದೆ. ಅಲ್ಲದೆ, ಇದನ್ನು ಅಮೆರಿಕದ ಇತಿಹಾಸದಲ್ಲೇ ಅತಿ ದುಬಾರಿ ಪ್ರಾಕೃತಿಕ ವಿಕೋಪ ಎಂದು ಬಣ್ಣಿಸಲಾಗಿದೆ. ಏಕೆಂದರೆ, ಹಾರ್ವೆ ಚಂಡಮಾರುತದಿಂದಾಗಿ ಅಪಾರ ಪ್ರಮಾಣದ ಹಾನಿ ಉಂಟಾಗಿದ್ದು, ಟೆಕ್ಸಾಸ್‌ವೊಂದರಲ್ಲೇ 10.22 ಲಕ್ಷ ಕೋಟಿ ರೂ.(160 ಶತಕೋಟಿ ಡಾಲರ್‌) ಆರ್ಥಿಕ ಹಾನಿ ಸಂಭವಿಸಿದೆ.

Advertisement

ಇಲ್ಲಿ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, 20ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಹಲವಾರು ಮೃತದೇಹಗಳು ನೀರಿನಲ್ಲಿ ತೇಲುತ್ತಿದ್ದು ಅವುಗಳನ್ನು ಹೊರತೆಗೆಯುವ ಕಾರ್ಯವೂ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ, ಟೆಕ್ಸಾಸ್‌ನ ರಾಸಾಯನಿಕ ಘಟಕವೊಂದರಲ್ಲಿ 2 ಸ್ಫೋಟಗಳು ಸಂಭವಿಸಿದ್ದು, ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ. ಈ ಸ್ಫೋಟಕ್ಕೂ ಪ್ರವಾಹವೇ ಕಾರಣ ಎನ್ನಲಾಗಿದೆ. ಘಟಕದಲ್ಲಿ ಇನ್ನಷ್ಟು ಸ್ಫೋಟಗಳು ಸಂಭವಿಸುವ ಅಪಾಯವಿರುವ ಕಾರಣ, 3 ಕಿ.ಮೀ. ವ್ಯಾಪ್ತಿಯಲ್ಲಿರುವ ಎಲ್ಲರನ್ನೂ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಜತೆಗೆ, ತುರ್ತು ಕಾರ್ಯಪಡೆಯನ್ನು ಘಟಕಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next