ಬಿಜೆಪಿ ಐಟಿ ಸೆಲ್, ಪಕ್ಷದ ಪ್ರಬಲ ಸ್ಟಾರ್ ಪ್ರಚಾರಕ ಎನ್ನುವ ಮಾತು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದ್ದು, ಜಾಲತಾಣಗಳ ಮೂಲಕವೇ ಬಿಜೆಪಿಗೆ ಭರ್ಜರಿ ಪ್ರಚಾರ ಸಿಗುತ್ತಿರುವುದು ಸುಳ್ಳಲ್ಲ. ಜಾಲತಾಣಗಳಲ್ಲಿ ಅತ್ಯಂತ ಕ್ಷಿಪ್ರವಾಗಿ, ಕ್ಷಣಕ್ಷಣಕ್ಕೂ ಸಕ್ರಿಯವಾಗಿರುವ ಬಿಜೆಪಿ, ಟ್ವಿಟರ್‌ನಲ್ಲಿ 2 ಕೋಟಿ ಹಿಂಬಾಲಕರನ್ನು ಹೊಂದುವ ಮೂಲಕ ಅತಿಹೆಚ್ಚು ಫಾಲೋವರ್ ಹೊಂದಿರುವ ಏಕೈಕ ರಾಜಕೀಯ ಪಕ್ಷವಾಗಿದೆ.
ಸದಾ ಸಕ್ರಿಯತೆ ಕಾರಣ
ಬಿಜೆಪಿ ಫಾಲೋವರ್‌ಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣ, ಪೇಜ್ ಸದಾ ಸಕ್ರಿಯವಾಗಿರುವುದು. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಮಾತ್ರ ಬಿಜೆಪಿ ಅಕೌಂಟ್‌ನಿಂದ ಫಾಲೋ ಮಾಡಲಾಗುತ್ತಿದ್ದು, ಪಕ್ಷದ ಕಾರ್ಯಚಟುವಟಿಕೆ, ಪ್ರಮುಖ ಯೋಜನೆ ಸೇರಿದಂತೆ ನಿತ್ಯ ಪ್ರಮುಖ ಚಟುವಟಿಕೆಗಳನ್ನು ಪೇಜ್‌ನಲ್ಲಿ ಅಪ್ಲೋಡ್ ಮಾಡಲಾಗುತ್ತಿರುತ್ತದೆ.
ಜಗತ್ತಿನಲ್ಲೇ ನಂ.1
ದೇಶದ ಇತರ ರಾಜಕೀಯ ಪಕ್ಷಗಳು ಮಾತ್ರವಲ್ಲದೇ, ವಿಶ್ವದ ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಬಿಜೆಪಿ ಟ್ವಿಟರ್‌ನಲ್ಲಿ ಹಿಂದಿಕ್ಕಿದೆ. ಅಮೆರಿಕದ ಆಡಳಿತಾರೂಢ ಡೆಮಕ್ರಾಟ್ ಪಕ್ಷಕ್ಕೂ ಟ್ವಿಟರ್‌ನಲ್ಲಿರುವ ಹಿಂಬಾಲಕರ ಸಂಖ್ಯೆ ಕೇವಲ 23 ಲಕ್ಷ ಮಾತ್ರ.
ಯಾವ ಪಕ್ಷಕ್ಕೆ ಎಷ್ಟು ಫಾಲೋವರ್ಸ್?
ಪಕ್ಷ ಫಾಲೋವರ್ಸ್
ಬಿಜೆಪಿ 2 ಕೋಟಿ
ಕಾಂಗ್ರೆಸ್ 92 ಲಕ್ಷ
ಆಪ್ 64 ಲಕ್ಷ
ಟಿಎಂಸಿ 6.5 ಲಕ್ಷ
ಸಿಪಿಎಂ 4.5 ಲಕ್ಷ
Related Articles
ಬಿಜೆಪಿ ಟ್ವಿಟರ್ ಖಾತೆ 2 ಕೋಟಿ ಹಿಂಬಾಲಕರನ್ನು ಪಡೆಯುವ ಮೂಲಕ ಹೊಸ ಮೈಲುಗಲ್ಲನ್ನು ಸೃಷ್ಟಿಸಿದೆ. ಈ ಮೂಲಕ ನಾವು ಹೊಸ ಅಧ್ಯಾಯ ಬರೆಯುತ್ತಿದ್ದೇವೆ. ಇದು ನಮ್ಮ ಏಕತೆ, ಸೌಹಾರ್ದತೆ ಮತ್ತು
ಶಕ್ತಿಯ ಪ್ರತೀಕ.
-ಅಮಿತ್ ಮಾಳವೀಯ,
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ