Advertisement

ಕಾಂಗ್ರೆಸ್‌ “ಇಂದಿರಾ ತಂತ್ರ’ಕ್ಕೆ ಬಿಜೆಪಿ “ಪಂಚ ತಂತ್ರ’

07:20 AM Aug 10, 2017 | |

ಬೆಂಗಳೂರು: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಮಾಜಿ ಪ್ರಧಾನಿ ಇಂದಿರಾಗಾಂಧಿ ಹೆಸರಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ಧತೆ ಆರಂಭಿಸುತ್ತಿದ್ದರೆ, ಇದಕ್ಕೆ ಪ್ರತಿಯಾಗಿ ಬಿಜೆಪಿ ಕೇಂದ್ರ ಮತ್ತು ರಾಜ್ಯದ ಐವರು ನಾಯಕರ ನೇತೃತ್ವದಲ್ಲಿ “ಪಂಚತಂತ್ರ’ಗಳೊಂದಿಗೆ ಚುನಾವಣಾ ಕಾರ್ಯತಂತ್ರ ರೂಪಿಸಲು ಚಿಂತನೆ ನಡೆಸಿದೆ.

Advertisement

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜ್ಯ ಪ್ರವಾಸದ ಬಳಿಕ ಅವರು ಪ್ರಧಾನಿ ಮೋದಿ ಅವರೊಂದಿಗೆ ಸಮಾಲೋಚನೆ
ನಡೆಸಿ ಈ ಕಾರ್ಯತಂತ್ರಕ್ಕೆ ಅಂತಿಮ ರೂಪ ನೀಡಲಿದ್ದಾರೆ. ಇದು ಕಾರ್ಯರೂಪಕ್ಕೆ ಬಂದರೆ ಅರುಣ್‌ ಜೇಟ್ಲಿ ಅವರಿಗೆ ಚುನಾವಣಾ ಉಸ್ತುವಾರಿ ಮತ್ತು ಡಿ.ವಿ.ಸದಾನಂದಗೌಡ ಅವರಿಗೆ ಪ್ರಚಾರ ಸಮಿತಿ ಸ್ಥಾನ ನೀಡುವ ಯೋಜನೆ ಸಿದ್ಧಪಡಿಸಲಾಗಿದೆ.

2008ರ ರಾಜ್ಯ ವಿಧಾನಸಭಾ ಚುನಾವಣೆ ಯಲ್ಲಿ ಅರುಣ್‌ ಜೇಟ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿದ್ದರು. ಆಗ ಯಡಿಯೂರಪ್ಪ ಸಿಎಂ ಅಭ್ಯರ್ಥಿಯಾಗಿದ್ದರೆ, ಸದಾನಂದಗೌಡ ರಾಜ್ಯಾಧ್ಯಕ್ಷರಾಗಿದ್ದರು.

ಆಗ ರಾಜ್ಯದಲ್ಲಿದ್ದ ಬಿಜೆಪಿ ಪರ ಅಲೆಯನ್ನು ಸಮರ್ಪಕವಾಗಿ ಬಳಸಿಕೊಂಡಿದ್ದ ಈ ಜೋಡಿ 110 ಸ್ಥಾನಗಳನ್ನು ಗೆದ್ದು ಬಿಜೆಪಿಯನ್ನು ಅಧಿಕಾರದ ಗದ್ದುಗೆಗೆ ಕೂರಿಸಿದ್ದರು. ಅದೇ ರೀತಿ 2018ರ ವಿಧಾನಸಭೆ ಚುನಾಣೆಯಲ್ಲೂ ರಾಜ್ಯದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಇದೆ. ಜೊತೆಗೆ ಕೇಂದ್ರದಲ್ಲಿನ ಮೋದಿ ಸರ್ಕಾರದ ಜನಪ್ರಿಯತೆಯ ಲಾಭವೂ ಸಿಗಲಿದೆ. ಈ ಎರಡೂ ಅನುಕೂಲಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಮೋದಿ ಮತ್ತು ಅಮಿತ್‌ ಶಾ ನೇತೃತ್ವದಲ್ಲಿ ಜೇಟ್ಲಿ ಯಡಿಯೂರಪ್ಪ ಮತ್ತು ಸದಾನಂದಗೌಡ ಅವರನ್ನು ಸೇರಿಸಿಕೊಂಡು ಚುನಾವಣಾ ಕಾರ್ಯತಂತ್ರ ರೂಪಿಸುವ ಬಗ್ಗೆ ರಾಜ್ಯ ಬಿಜೆಪಿಯಲ್ಲಿ ಈಗಾಗಲೇ ಸಿದಟಛಿತೆ ನಡೆಯುತ್ತಿದ್ದು, ಪ್ರಧಾನಿ ಮತ್ತು ಅಮಿತ್‌ ಶಾ ಅವರ ಒಪ್ಪಿಗೆಗಾಗಿ ಕಾಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಜೇಟ್ಲಿ,ಡಿವಿಎಸ್‌ದೇ ಸಮಸ್ಯೆ: ಈ ಕಾರ್ಯತಂತ್ರಕ್ಕೆ ಸದ್ಯ ಸಮಸ್ಯೆಯಾಗಿರುವುದು ಅರುಣ್‌ ಜೇಟ್ಲಿ ಮತ್ತು ಸದಾನಂದಗೌಡ
ಕೇಂದ್ರ ಸಚಿವರಾಗಿರುವುದು. ಜೇಟ್ಲಿ ಹಣಕಾಸು ಮತ್ತು ರಕ್ಷಣೆಯಂತಹ ಮಹತ್ವದ ಜವಾಬ್ದಾರಿ ಹೊಂದಿದ್ದು, ರಾಜ್ಯ ಚುನಾವಣಾ ಉಸ್ತುವಾರಿಯಾದರೆ ಎರಡನ್ನೂ ನಿರ್ವಹಿಸುವುದು ಕಷ್ಟವಾಗಬಹುದು ಎಂಬ ಮಾತು ಕೇಳಿಬರುತ್ತಿದೆ. ಎರಡನ್ನೂ ನಿಭಾಯಿಸಲು ಕಷ್ಟವಾದರೆ ಚುನಾವಣಾ ಕಾರ್ಯತಂತ್ರಗಳನ್ನಾದರೂ ಸಿದಟಛಿಪಡಿಸಲಿ ಎಂಬ ಬೇಡಿಕೆ ಮುಂದಿಡಲು ರಾಜ್ಯ ನಾಯಕರು ಮುಂದಾಗಿದ್ದಾರೆ.

Advertisement

ಅದೇ ರೀತಿ ಸದಾನಂದಗೌಡರು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರಾದರೆ, ಏನೇ ಸಮಸ್ಯೆಗಳಿದ್ದರೂ ಎಲ್ಲರನ್ನೂ ಒಟ್ಟಿಗೆ
ಕರೆದೊಯ್ಯುವ ಅವರ ಗುಣ ಪಕ್ಷಕ್ಕೆ ನೆರವಾಗಲಿದೆ ಎಂಬುದು ಹಲವರ ಅಭಿಪ್ರಾಯ. ರಾಜ್ಯ ಚುನಾವಣಾ ಜವಾಬ್ದಾರಿಯನ್ನು
ಸಮರ್ಥವಾಗಿ ನಿರ್ವಹಿಸಲು ಅನುವಾಗುವಂತೆ ಕೇಂದ್ರ ಸಂಪುಟದಿಂದ ಕೈಬಿಟ್ಟರೆ ಒಕ್ಕಲಿಗ ಸಮುದಾಯಕ್ಕೆ ಅಸಮಾಧಾನ ವಾಗಲಿದೆ. ಆದ್ದರಿಂದ ಕಷ್ಟವಾದರೂ ಅವರು ಎರಡೂ ಜವಾಬ್ದಾರಿಗಳನ್ನು ನಿರ್ವಹಿಸುವಂತೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ ಎನ್ನಲಾಗಿದೆ.

ಯಾವ ರೀತಿ ಕಾರ್ಯನಿರ್ವಹಣೆ?: ಇದುವರೆಗೆ ಸಾಕಷ್ಟು ಚುನಾವಣೆಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ ಅಮಿತ್‌
ಶಾ ತಮ್ಮ ಇದುವರೆಗಿನ ಅನುಭವಗಳ ಆಧಾರದ ಮೇಲೆ ಚುನಾವಣಾ ಪ್ರಕ್ರಿಯೆ ಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು
ನೀಡಲಿದ್ದಾರೆ. ಇದನ್ನು ಆಧರಿಸಿ ಮತ್ತು ಸ್ಥಳೀಯ ರಾಜಕಾರಣವನ್ನು ಗಮನದ ಲ್ಲಿಟ್ಟುಕೊಂಡು ಜೇಟ್ಲಿ ಅವರು ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ. ಕೇಂದ್ರ ಸರ್ಕಾರದ ಸಾಧನೆಗಳೊಂದಿಗೆ ಪ್ರಧಾನಿ ಮೋದಿ ಅವರು ಉನ್ನತ
ಮಟ್ಟದಲ್ಲಿ ಈ ಕಾರ್ಯತಂತ್ರಕ್ಕೆ ಸಾಥ್‌ ನೀಡಲಿದ್ದು, ಯಡಿಯೂರಪ್ಪ ಅವರು ಚುನಾವಣಾ ಪ್ರಚಾರದ ವೇಳೆ ಇದನ್ನು
ಬಳಸಿಕೊಂಡರೆ, ಸದಾನಂದಗೌಡ ಅವರು ಸ್ಥಳೀಯ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ
ಕಾರ್ಯತಂತ್ರಗಳನ್ನು ಜಾರಿಗೊಳಿಸುತ್ತಾರೆ.ಇದು ಸದ್ಯಕ್ಕೆ ಬಿಜೆಪಿ ಸಿದ್ಧಪಡಿಸಿರುವ “ಪಂಚ ತಂತ್ರ’ ಯೋಜನೆ.

ಏನಿದು ಪಂಚ ತಂತ್ರ?
– ರಾಜಕೀಯ ಚಾಣಾಕ್ಷತನ ಮತ್ತು ಭಿನ್ನಾಭಿಪ್ರಾಯಗಳನ್ನು ಮಟ್ಟಹಾಕುವ ಅಮಿತ್‌ ಶಾ ಅವರ ಕಾರ್ಯವೈಖರಿ

– ಉತ್ತಮ ನಾಯಕತ್ವ ಮತ್ತು ಅಭಿವೃದಿಟಛಿಪರ ಆಡಳಿತ ನೀಡುವ ಪ್ರಧಾನಿ ನರೇಂದ್ರ ಮೋದಿ

– ಅವರ ಜನಪ್ರಿಯತೆ ಚುನಾವಣಾ ಕಾರ್ಯತಂತ್ರ ಗಳನ್ನು ರೂಪಿಸುವ, ಅನುಷ್ಠಾನಗೊಳಿಸುವ ಅರುಣ್‌ ಜೇಟ್ಲಿ ಅವರ ಚಾಕಚಕ್ಯತೆ

– ರಾಜ್ಯ ಮಟ್ಟದಲ್ಲಿ ಒಬ್ಬ ಮಾಸ್‌ ಲೀಡರ್‌ ಆಗಿರುವ ಬಿ.ಎಸ್‌. ಯಡಿಯೂರಪ್ಪ ಅವರ ನಾಯಕತ್ವ

– ಕೇಡರ್‌ ಮಟ್ಟ ತಲುಪುವ ಮತ್ತು ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಸದಾನಂದಗೌಡ ಅವರ ಚಾಕಚಕ್ಯತೆ

– ಪ್ರದೀಪ್‌ ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next