Advertisement
ನಟ ಪ್ರಭಾಸ್ ಅವರನ್ನು ರಾಜಕೀಯಕ್ಕೆ ಕರೆ ತಂದರೆ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ರಾಜು ಸಮುದಾಯಕ್ಕೆ ಪ್ರಾತಿನಿಧ್ಯ ಸಿಗಲು ಹಾಗೂ ಸಮುದಾಯದವನ್ನು ಎಲ್ಲರೂ ಗುರುತಿಸಲು ಸಹಕಾರಿಯಾಗಲಿದೆ ಎಂದು ರಾಜ್ಯದ ಮುಖಂಡರು ಕೃಷ್ಣಂರಾಜು ಅವರ ಬಳಿ ಪ್ರಸ್ತಾಪವನ್ನೂ ಇಟ್ಟಿದ್ದು ವಿಶೇಷ. ಈ ಸಂದರ್ಭದಲ್ಲಿ ಕೃಷ್ಣಂರಾಜು ಜತೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನ.
ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ವಾತಾವರಣವಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದರಿಂದ ಬಿಜೆಪಿ ಗೆಲ್ಲುವ ವಿಶ್ವಾಸವಿದೆ. * ಆಂಧ್ರಪ್ರದೇಶಕ್ಕೆ ವಿಶೆಷ ಪ್ಯಾಕೇಜ್ ನೀಡಿಲ್ಲ. ತೆಲುಗು ಭಾಷಿಕರು ಬಿಜೆಪಿಗೆ ಮತ ಹಾಕಬಾರದು ಎಂಬ ಅಭಿಯಾನ ನಡೆಯುತ್ತಿದೆಯಲ್ಲಾ?|
ಅದೆಲ್ಲಾ ಇಲ್ಲಿ ನಡೆಯುವುದಿಲ್ಲ. ಬಿಜೆಪಿ ಆಂಧ್ರಪ್ರದೇಶಕ್ಕೆ ಮೋಸ ಮಾಡಿಲ್ಲ. ವಾಗಾœನ ಮಾಡಿದ್ದನ್ನು ಈಡೇರಿಸಿದೆ, ಇನ್ನೂ ಕೊಡಲಿದೆ.
Related Articles
ಅದು ರಾಜಕೀಯ ಕಾರಣಗಳಿಗೆ. ಆ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಆದರೆ, ನರೇಂದ್ರಮೋದಿಯಿಂದ ನಮಗೆ ಅನ್ಯಾಯವಾಗಿಲ್ಲ
Advertisement
* ಈ ಚುನಾವಣೆಯಲ್ಲಿ ನಿಮ್ಮ ರಾಜು ಸಮುದಾಯಕ್ಕೆ ಬಿಜೆಪಿಯಿಂದ ಎಷ್ಟು ಟಿಕೆಟ್ ಕೊಡಿಸುವಿರಿ? ಯಾವ್ಯಾವ ಕ್ಷೇತ್ರದಲ್ಲಿ ರಾಜು ಸಮುದಾಯದ ನಾಯಕರಿಗೆ ಗೆಲ್ಲುವ ಸಾಮರ್ಥ್ಯ ಇದೆಯೋ ಅಲ್ಲಿ ಟಿಕೆಟ್ ದೊರೆಯಲಿದೆ. * ನೀವು ಆ ಬಗ್ಗೆ ಮಾತನಾಡಿದ್ದೀರಾ?
ಹೌದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಬಳಿ ಮಾತನಾಡಿದ್ದೇನೆ. * ನಿಮ್ಮನ್ನು ಸಮುದಾಯದ ಸಂಘಟಿಸಲು ಕೇಂದ್ರದ ನಾಯಕರು ಕರ್ನಾಟಕಕ್ಕೆ ಕಳುಹಿಸಿದ್ದಾರಾ?
ಹಾಗೇನಿಲ್ಲ. ಪಕ್ಷದ ಜವಾಬ್ದಾರಿಯುತ ಮುಖಂಡನಾಗಿ ಪಕ್ಷದ ಪರ ಕೆಲಸ ಮಾಡಲು ಬಂದಿದ್ದೇನೆ. * ಮುಂದಿನ ಲೋಕಸಭೆ ಚುನಾವಣೆಯಲ್ಲಿ ಆಂಧ್ರ-ತೆಲಂಗಾಣದಲ್ಲಿ ಯಾವುದು ಪ್ರಮುಖ ವಿಷಯ?
ಟಿಡಿಪಿ-ಬಿಜೆಪಿ ಮರು ಮೈತ್ರಿ ಸಾಧ್ಯವಾ? ಯಾವುದೇ ಚುನಾವಣೆಯಲ್ಲೂ ಅಭಿವೃದ್ಧಿ ಪ್ರಮುಖ ವಿಷಯ. ಜತೆಗೂಡುವುದು ಬಿಡುವುದು ಅವರವರಿಗೆ ಬಿಟ್ಟದ್ದು. * ನಿಮ್ಮ ಸಹೋದರ ಪುತ್ರ ನಟ ಪ್ರಭಾಸ್‌ನನ್ನು ಸಮುದಾಯದ ಪರವಾಗಿ ರಾಜಕೀಯಕ್ಕೆ ಕರೆತನ್ನಿ ಎಂಬ ಪ್ರಸ್ತಾಪವಿದೆಯಂತಲ್ಲಾ?
ರಾಜಕೀಯಕ್ಕೆ ಬರುವುದು ಬಿಡುವುದು ಆತನ ಇಚ್ಛೆ. ಆಂಧ್ರದ ರೆಬೆಲ್ ಸ್ಟಾರ್: ಉಪ್ಪಲಪಾಟಿ ಚಿನ್ನವೆಂಕಟ ಕೃಷ್ಣಂರಾಜು ಅವಿಭಜಿತ ಆಂಧ್ರಪ್ರದೇಶದಲ್ಲಿ “ರೆಬಲ್‌ಸ್ಟಾರ್’ ಎಂದೇ ಖ್ಯಾತಿ. 183 ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು “ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್ ಅವರ ದೊಡ್ಡಪ್ಪ. ಪ್ರಭಾಸ್ ಇವರ ಗರಡಿಯಲ್ಲೇ ಪಳಗಿ ನಟರಾದವರು. 1998 ರಲ್ಲಿ ಕಾಕಿನಾಡಿ, 1999 ರಲ್ಲಿ ನರಸಾಪುರ ಲೋಕಸಭೆ ಕ್ಷೇತ್ರದಿಂದ ಗೆದ್ದಿದ್ದ ಕೃಷ್ಣಂರಾಜು, ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. * ಎಸ್.ಲಕ್ಷ್ಮಿನಾರಾಯಣ