Advertisement

ಬಿಜೆಪಿ ಬಂಡೆಯಂತೆ ದೇಶದ ಸೇನೆಯ ಬೆಂಬಲಕ್ಕೆ ನಿಲ್ಲಲಿದೆ: ಉಧಾಂಪುರದಲ್ಲಿ ಶಾ

09:05 AM Apr 04, 2019 | Team Udayavani |

ಉಧಾಂಪುರ, ಜಮ್ಮು ಕಾಶ್ಮೀರ : ‘ಜಮ್ಮು ಕಾಶ್ಮೀರದಲ್ಲಿನ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ಯಾರೂ ಕೂಡ ದುರ್ಬಲಗೊಳಿಸಲು ಬಿಜೆಪಿ ಬಿಡದು; ಅದು ಬಂಡೆಯಂತೆ ಭದ್ರತಾ ಪಡೆಗಳ ಬೆಂಬಲಕ್ಕೆ ಸದಾ ಕಾಲ ನಿಲ್ಲಲಿದೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಉಧಾಂಪುರ ರಾಲಿಯಲ್ಲಿ ಗುಡುಗಿದ್ದಾರೆ.

Advertisement

‘ಕಾಂಗ್ರೆಸ್‌ ಪಕ್ಷ ತಾನು ಗೆದ್ದು ಬಂದರೆ ಜಮ್ಮು ಕಾಶ್ಮೀರದಲ್ಲಿ ಪ್ರಕೃತ ಚಾಲ್ತಿಯಲ್ಲಿರುವ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯಿದೆಯನ್ನು ತೆಗೆದು ಹಾಕಲಿದೆ ಮತ್ತು ಜಮ್ಮು ಕಾಶ್ಮೀರದ ಸಾಂವಿಧಾನಿಕ ಸ್ಥಾನಮಾನಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳಲಿದೆ’ ಎಂಬ ಭರವಸೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದೆ.

ಇದನ್ನು ಕಟುವಾಗಿ ಟೀಕಿಸಿರುವ ಅಮಿತ್‌ ಶಾ, ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಅದರ ನಾಯಕರಿಗೆ ಈ ರೀತಿಯ ಆಶ್ವಾಸನೆಗಳನ್ನು ನೀಡುವುದಕ್ಕೆ ನಾಚಿಕೆಯಾಗಬೇಕು; ಭಾರತೀಯ ಜನತಾ ಪಕ್ಷ ಜಮ್ಮು ಕಾಶ್ಮೀರದಲ್ಲಿನ ಎಎಫ್ಎಸ್‌ಪಿಎ ತೆಗೆದು ಹಾಕುವುದಕ್ಕೆ ಮತ್ತು ದೇಶದ್ರೋಹದ ಅಂಶವನ್ನು ಕೈಬಿಡುವುದಕ್ಕೆ ಎಂದೂ ಅವಕಾಶ ನೀಡದು ಎಂದು ಹೇಳಿದರು.

ಇದೇ ವೇಳೆ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದ ಶಾ, “ನಿಮ್ಮಿಂದ ಒಂದು ಬುಲೆಟ್‌ ನಮ್ಮತ್ತ ಹಾರಿ ಬಂದರೂ ನಾವು ನಿಮ್ಮ ಮೇಲೆ ಶೆಲ್‌ ದಾಳಿ ನಡೆಸುತ್ತೇವೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next