Advertisement
ಹಾಲಿ ಅಧ್ಯಕ್ಷ ನಳಿನ್ ಅಧಿಕಾರಾವಧಿ ಅಂತ್ಯಗೊಂಡು ಬಹಳ ದಿನಗಳಾಗಿವೆ. ಹೊಸ ರಾಜ್ಯಾಧ್ಯಕ್ಷರ ನೇಮಕ ಆಗಬೇಕಿತ್ತು. ರಾಜ್ಯ ವಿಧಾನಸಭಾ ಚುನಾವಣ ಫಲಿತಾಂಶವು ವ್ಯತಿರಿಕ್ತವಾಗಿ ಬಂದಿರುವುದರಿಂದ ಕರ್ನಾಟಕ ಬಿಜೆಪಿಯಲ್ಲಿ ಎಲ್ಲ ಪ್ರಕ್ರಿಯೆಗಳೂ ಸ್ಥಗಿತ ಗೊಂಡಂತಾಗಿದೆ.
Related Articles
Advertisement
ಜಾತಿ ಸಂಯೋಜನೆ ಸೂತ್ರಪ್ರಸ್ತುತ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲು ಬಂಟ ಸಮುದಾಯಕ್ಕೆ ಸೇರಿದವರು. ಇನ್ನೊಂದೆಡೆ ಲಿಂಗಾಯತ ಸಮುದಾಯದ ಬಿ.ಎಸ್. ಯಡಿಯೂರಪ್ಪ ಅವರು ವಿಪಕ್ಷ ನಾಯಕ ಹಾಗೂ ಸಿಎಂ ಸ್ಥಾನಗಳಲ್ಲಿ ಇದ್ದುದರಿಂದ ಎರಡು ಪ್ರಮುಖ ಸಮುದಾಯಗಳಿಗೂ ನ್ಯಾಯ ಸಂದಿತ್ತು. ಇದೇ ಜಾತಿ ಸಂಯೋಜನೆಯ ಸೂತ್ರವನ್ನು ಲೋಕಸಭೆ ಚುನಾವಣೆಗೆ ಮುನ್ನ ಹೆಣೆಯಬೇಕು ಎಂಬುದು ಬಿಜೆಪಿಯ ಚಿಂತನೆ. ಒಕ್ಕಲಿಗ ಅಥವಾ ಲಿಂಗಾಯತರು ರಾಜ್ಯಾಧ್ಯಕ್ಷರಾದರೆ, ವಿಧಾನಸಭೆ ವಿಪಕ್ಷ ನಾಯಕ ನಾಯಕ ಸ್ಥಾನದಲ್ಲಿ ಲಿಂಗಾಯತ ಅಥವಾ ಒಕ್ಕಲಿಗ ನಾಯಕರು ಇರಬೇಕು. ಆಗ ಮಾತ್ರ ಪಕ್ಷವನ್ನು ಮುನ್ನಡೆಸಿಕೊಂಡುವ ಹೋಗುವುದು ಸುಲಭವಾಗಲಿದೆ ಎಂಬ ಲೆಕ್ಕಾಚಾರಗಳು ನಡೆದಿವೆ. ಶೋಭಾ ಹೆಸರೇ ಏಕೆ?
ವಿಧಾನಸಭೆ ಚುನಾವಣೆಯಲ್ಲಿ ಗುಂಪುಗಾರಿಕೆ ಹೆಚ್ಚಾದ್ದರಿಂದ ವರಿಷ್ಠರಿಗೆ ರಾಜ್ಯದ ತಳ ಹಂತ ದಿಂದ ಸರಿಯಾದ ಮಾಹಿತಿಗಳು ತಲುಪು ತ್ತಿರಲಿಲ್ಲ. ರಾಜ್ಯ ಹಾಗೂ ಹೊಸದಿಲ್ಲಿ ನಡುವೆ ಸಂವಹನದ ಕೊರತೆ ಆಗಿತ್ತು. ಸಂಘಟನೆ ಕುಸಿದಿತ್ತು. ಮಹಿಳೆಯನ್ನು ಈ ಹುದ್ದೆಗೆ ನೇಮಿಸಿದರೆ, ಗುಂಪುಗಾರಿಕೆಗೆ ಅವಕಾಶ ಇರುವುದಿಲ್ಲ. ಎಲ್ಲರೂ ಸಹಕರಿಸುತ್ತಾರೆ ಎಂಬ ವಿಶ್ವಾಸ ವರಿಷ್ಠರಲ್ಲಿದೆ. ಲೋಕಸಭೆ ಚುನಾವಣೆಗೆ ಎಲ್ಲರನ್ನೂ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಛಾತಿ ಶೋಭಾ ಅವರಲ್ಲಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಶೋಭಾ ಕರಂದ್ಲಾಜೆ ಉತ್ತರ ಪ್ರದೇಶ ಚುನಾ ವಣೆಯಲ್ಲಿ ತೋರಿದ ಕ್ರಿಯಾಶೀಲತೆಯು ವರಿಷ್ಠರ ಮೆಚ್ಚುಗೆಗೆ ಪಾತ್ರವಾಗಿದೆ. ಶೋಭಾ ಅವರಿಗೆ ರಾಜ್ಯಾಧ್ಯಕ್ಷೆ ಪಟ್ಟ ಕೊಟ್ಟರೆ ಉಡುಪಿ- ಚಿಕ್ಕಮಗಳೂರು ಕ್ಷೇತ್ರದಿಂದ ಡಿ.ವಿ. ಸದಾನಂದ ಗೌಡರನ್ನು ಮತ್ತೆ ಕಣಕ್ಕಿಳಿಸಿ ಸಮಾಧಾನಪಡಿಸುವ ತಂತ್ರಗಾರಿಕೆಯೂ ಇದರಲ್ಲಿದೆ. ಕರಾವಳಿಗೆ ರಾಜ್ಯಾಧ್ಯಕ್ಷ ಪಟ್ಟ?
ನಳಿನ್ ಕುಮಾರ್ ಕಟೀಲು ಅವರು ಕರಾವಳಿ ಭಾಗದವರಾಗಿದ್ದು, ಶೋಭಾ ಕರಂದ್ಲಾಜೆಗೆ ರಾಜ್ಯಾಧ್ಯಕ್ಷರ ಪಟ್ಟ ಒಲಿದರೆ ಕರಾವಳಿಯವರಿಗೇ ಮತ್ತೊಮ್ಮೆ ಈ ಪಟ್ಟ ಸಿಕ್ಕಂತಾಗುತ್ತದೆ. ಅಲ್ಲದೆ ಮೊಟ್ಟ ಮೊದಲ ಮಹಿಳಾ ರಾಜ್ಯಾಧ್ಯಕ್ಷ ಎನ್ನುವ ಕೀರ್ತಿಗೂ ಶೋಭಾ ಪಾತ್ರರಾಗಲಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದ ಶೋಭಾ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟರೆ, ವಿಪಕ್ಷ ನಾಯಕ ಸ್ಥಾನಕ್ಕೆ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿ ಅಥವಾ ಬಸನಗೌಡ ಪಾಟೀಲ್ ಯತ್ನಾಳ್ ಹೆಸರು ಮತ್ತೊಮ್ಮೆ ಮುಂಚೂಣಿಗೆ ಬರಲಿದೆ. ಒಕ್ಕಲಿಗ-ಲಿಂಗಾಯತ ಜಾತಿ ಸಂಯೋಜನೆಯನ್ನು ಬಿಟ್ಟು ಹಿಂದುಳಿದ ವರ್ಗದವರಿಗೆ ಸ್ಥಾನ ನೀಡಬಹುದೇ ಎಂಬ ರಾಜಕೀಯ ಲೆಕ್ಕಾಚಾರಗಳೂ ನಡೆದಿವೆ.