Advertisement

NDA ಸರಕಾರ ಬಡಜನರ ಆವಶ್ಯಕತೆ ಈಡೇರಿಸಿದೆ: ಸಂಕಲ್ಪ ಪತ್ರ ಬಿಡುಗಡೆಗೊಳಿಸಿ ಶಾ

09:03 AM Apr 09, 2019 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಬಡ ಜನರ ಮೂಲಭೂತ ಆವಶ್ಯಕತೆಗಳನ್ನು ಪೂರೈಸಿದೆ ಎಂದು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರಿಂದು ಪಕ್ಷದ ಸಂಕಲ್ಪ ಪತ್ರವನ್ನು ಬಿಡುಗಡೆಗೊಳಿಸಿ ಹೇಳಿದರು.

Advertisement

ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಆಡಳಿತೆಯ ಕಳೆದ ಐದು ವರ್ಷಗಳು ಭಾರತದ ಸುವರ್ಣ ವರ್ಷಗಳಾಗಿವೆ ಎಂದು ವರ್ಣಿಸಿದ ಶಾ, ಕೇಂದ್ರದಲ್ಲಿನ ನಮ್ಮ ಸರಕಾರ ಪಾರದರ್ಶಕ ಸರಕಾರಕ್ಕೆ ಅತ್ಯುತ್ತಮ ನಿದರ್ಶನವಾಗಿದೆ ಎಂದು ಹೇಳಿದರು.

ಸಂಕಲ್ಪ ಪತ್ರ ಬಿಡುಗಡೆಗೆ ಮುನ್ನ ಅಮಿತ್‌ ಶಾ ಅವರು ಪಕ್ಷದ 2014ರ ಸಾಧನೆಗಳನ್ನು ವಿವರಿಸಿದರು.

ಸಂಕಲ್ಪ ಪತ್ರ ಬಿಡುಗಡೆ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಾರ್ಯಾಲಯಕ್ಕೆ ಆಗಮಿಸಿದ್ದರು. ಕೇಂದ್ರ ಸಚಿವರಾದ ರಾಜನಾಥ್‌ ಸಿಂಗ್‌, ಸುಶ್ಮಾ ಸ್ವರಾಜ್‌, ಅರುಣ್‌ ಜೇತ್ಲಿ ಮತ್ತು ತಾವರಚಂದ್‌ ಗೆಹಲೋಟ್‌ ಉಪಸ್ಥಿತರಿದ್ದರು.

ಏಳು ಹಂತಗಳ 2019ರ ಲೋಕಸಭಾ
ಚುನಾವಣೆಯ ಮೊದಲ ಹಂತಕ್ಕೆ ಇನ್ನು ಕೇವಲ ಮೂರು ದಿನಗಳ ಮಾತ್ರವೇ ಬಾಕಿ ಇರುವಾಗಿ ಬಿಜೆಪಿ ಇಂದು ಸೋಮವಾರ ತನ್ನ ಸಂಕಲ್ಪ ಪತ್ರವನ್ನು ಬಿಡುಗಡೆ ಮಾಡಿದೆ.

Advertisement

ದೇಶದ 543 ಲೋಕಸಭಾ ಕ್ಷೇತ್ರಗಳ ಪ್ರತಿನಿಧಿಗಳನ್ನು ಚುನಾಯಿಸಲು 90 ಕೋಟಿ ಅರ್ಹ ಮತದಾರರು ಇದೀಗ ಮತದಾನದ ಮುಹೂರ್ತವನ್ನು ಎದುರು ನೋಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next