ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯ ವಿಜಯ ವಿಠಲ ದೇಗುಲದ ಸಂಗೀತ ಕಂಬಗಳಿಗೆ ಡಿಜಿಟಲ್ ಟಚ್ ನೀಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮುಂದಾಗಿದ್ದು, ಇನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಮೊಬೈಲ್ ಫೋನ್ ಗಳಲ್ಲಿಯೇ ಸಪ್ತ ಸ್ವರಗಳ ನಾದ ಕೇಳಬಹುದಾಗಿದೆ.
Advertisement
ಈ ದೇವಾಲಯದ ಮುಖ್ಯ ಆಕರ್ಷಣೆ ಎಂದರೆ ರಂಗ ಮಂಟಪದಲ್ಲಿರುವ 56 ಸಪ್ತ ಸ್ವರ ಸ್ತಂಭಗಳು. ಇದನ್ನು ಸರಿಗಮಸ್ತಂಭಗಳು ಎಂದೂ ಕರೆಯುವುದುಂಟು. ಸ್ತಂಭಗಳನ್ನು ನಿಧಾನವಾಗಿ ಕೈಯಿಂದ ತಟ್ಟಿದಾಗ ಸಂಗೀತದ ನಾನಾ ಸ್ವರಗಳು
ಹೊರಹೊಮ್ಮುತ್ತವೆ. ಈ ಮಂಟಪದಲ್ಲಿ ಮುಖ್ಯ ಸ್ತಂಭಗಳ ಒಂದು ಗುಂಪು ಮತ್ತು ಹಲವಾರು ಸಣ್ಣ ಸ್ತಂಭಗಳಿವೆ.
Related Articles
ಸಂಭವವಿತ್ತು. ಇದನ್ನು ತಪ್ಪಿಸಲು ಪುರಾತತ್ವ ಇಲಾಖೆ ಈಗ ಕ್ಯೂಆರ್ ಕೋಡ್ ಅಳವಡಿಸಿದೆ. ಆ ಮೂಲಕ ದೇಶ-ವಿದೇಶ
ಪ್ರವಾಸಿಗರನ್ನು ಸೆಳೆ ಯಲು ಮುಂದಾಗಿದೆ. ಈ 56 ಸ್ತಂಭಗಳಿಗೂ ಸೇರಿ ಒಟ್ಟು ಆರು ಕಡೆ ಕೋಡ್ಗಳನ್ನು ಆಳವಡಿಸಲು
ನಿರ್ಧರಿಸಲಾಗಿದ್ದು, ಪ್ರಾಯೋಗಿಕವಾಗಿ ಎರಡು ಕೋಡ್ಗಳನ್ನು ಅಳವಡಿಸಲಾಗಿದೆ. ಇನ್ನೊಂದು ವಾರದಲ್ಲಿ ಎಲ್ಲ ಆರೂ ಕೋಡ್ ಗಳು ಕಾರ್ಯನಿರ್ವಹಿಸಲಿವೆ.
Advertisement
ರಹಸ್ಯ ಭೇದಿಸಲು ಕಂಬ ಕತ್ತರಿಸಿದ್ದ ಬ್ರಿಟಿಷರು!
ಅಂದಿನ ಬ್ರಿಟಿಷ್ ಅಧಿಕಾರಿಗಳು ಸ್ತಪ ಸ್ವರಗಳ ಸ್ತಂಭಗಳಲ್ಲಿ ಅಡಗಿರುವ ರಹಸ್ಯವನ್ನು ಭೇದಿಸಲು ಯತ್ನಿಸಿದ್ದರು. ಈ ಕುತೂಹಲಕ್ಕೆ ತೆರೆ ಎಳೆಯಲು ಅವರು ಎರಡು ಸಂಗೀತ ಸ್ತಂಭಗಳನ್ನು ಕತ್ತರಿಸಿ, ಅದರೊಳಗಿಂದ ಸಂಗೀತ ಸ್ವರಗಳು ಮೂಡಿ ಬರಲು ಕಾರಣವಾಗುತ್ತಿರುವ ಅಂಶಗಳ ಬಗ್ಗೆ ಸಂಶೋಧನೆ ನಡೆಸಿದ್ದರು. ಆದರೆ, ಕಂಬಗಳ ಒಳಗೆ ಏನೂ ಕಂಡು ಬಂದಿಲ್ಲ. ಈ ಎರಡು ಸ್ತಂಭಗಳು ಈಗಲೂ ಹಾಗೇ ಉಳಿದಿವೆ.
ಹಂಪಿಯ ವಿಜಯ ವಿಠಲ್ ದೇವಾಲಯದ ರಂಗ ಮಂಟಪದಲ್ಲಿರುವ ಸಂಗೀತ ಕಂಬಗಳಲ್ಲಿ ಹೊರ ಹೊಮ್ಮುವ ನಾದವನ್ನು ಪ್ರವಾಸಿಗರು ಆಲಿಸಲು ಕ್ಯೂಆರ್ ಕೋಡ್ ಅಳವಡಿಸಲಾಗಿದೆ. ಸ್ಕ್ಯಾನ್ ಮಾಡಿ ಸ್ತಪ ಸ್ವರಗಳನ್ನು ಫೋನ್ಗಳಲ್ಲಿ ಆಲಿಸಿ ಆನಂದಿಸಬಹುದು.●ನಿಹಿಲ್ದಾಸ್, ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ, ಭಾರತೀಯ ಪುರಾತತ್ವ ಇಲಾಖೆ, ಹಂಪಿ ವೃತ್ತ ಹಂಪಿಗೆ ನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಆಗಮಿಸುತ್ತಾರೆ. ಅದರಲ್ಲಿಯೂ ವಿಜಯ ವಿಠಲ್ ದೇವಾಲಯವನ್ನು ವೀಕ್ಷಣೆ ಮಾಡದೆ ಅವರು ಮರಳುವುದಿಲ್ಲ. ಈಗ ಪುರಾತತ್ವ ಇಲಾಖೆ ಸಂಗೀತ ಕಂಬಗಳಿಗೆ ಕ್ಯೂ ಆರ್ ಕೋಡ್ ಅಳವಡಿಸಿದ್ದಾರೆ. ಇದರಿಂದ ಪ್ರವಾಸಿಗರಿಗೆ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.
● ವಿರೂಪಾಕ್ಷಿ, ಗೈಡ್, ಹಂಪಿ *ಪಿ.ಸತ್ಯನಾರಾಯಣ