Advertisement

BJP list; ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಬಘೇಲ್ vs ವಿಜಯ್ ಬಘೇಲ್ ಹಣಾಹಣಿ!

08:29 PM Aug 17, 2023 | Team Udayavani |

ಹೊಸದಿಲ್ಲಿ: ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಗುರುವಾರ ಬಿಜೆಪಿ ಪ್ರಕಟಿಸಿದ 29 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ದುರ್ಗ್ ಸಂಸದ ವಿಜಯ್ ಬಘೇಲ್ ಸ್ಥಾನ ಪಡೆದಿದ್ದಾರೆ. ವಿಜಯ್ ಬಘೇಲ್ ಅವರು ಪಟಾನ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದರೊಂದಿಗೆ ಛತ್ತೀಸ್‌ಗಢದ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್ ಅವರ ಸ್ವಕ್ಷೇತ್ರ ಪಟಾನ್‌ನಲ್ಲಿ ಬಿಜೆಪಿ ಚಿಕ್ಕಪ್ಪನ ವಿರುದ್ಧ ರಾಜಕೀಯ ಕಾಳಗಕ್ಕೆ ವೇದಿಕೆಯನ್ನುಯನ್ನು ಹುಟ್ಟುಹಾಕಿದೆ.

Advertisement

ಪಟಾನ್ ಪ್ರಸ್ತುತ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರತಿನಿಧಿಸುತ್ತಿದ್ದು, ಪಟಾನ್‌ ಕ್ಷೇತ್ರದ ಮತದಾರರು ಐದು ಬಾರಿ ವಿಧಾನಸಭೆಗೆ ಕಳುಹಿಸಿರುವುದರಿಂದ  ಕಾಂಗ್ರೆಸ್ ಅವರನ್ನು ಮತ್ತೊಂದು ಕ್ಷೇತ್ರಕ್ಕೆ ಸ್ಥಳಾಂತರಿಸುವ ಸಾಧ್ಯತೆಯಿಲ್ಲ.

ಪಟಾನ್‌ನಲ್ಲಿ ವಿಜಯ್ ಬಘೇಲ್ ಅವರ ಚಿಕ್ಕಪ್ಪ ಭೂಪೇಶ್ ಬಘೇಲ್ ಅವರನ್ನು ಎದುರಿಸುವುದು ಇದು ನಾಲ್ಕನೇ ಬಾರಿಯಾಗಿದೆ. ಬಿಜೆಪಿ ಅಭ್ಯರ್ಥಿಯಾಗಿ ಮೂರನೇ ಬಾರಿಗೆ. ವಿಜಯ್ ಅವರು 2008 ರ ವಿಧಾನಸಭಾ ಚುನಾವಣೆಯಲ್ಲಿ ಪಟಾನ್‌ನಿಂದ ಸುಮಾರು 7,500 ಮತಗಳ ಅಂತರದಿಂದ ತಮ್ಮ ಚಿಕ್ಕಪ್ಪನನ್ನು ಸೋಲಿಸಿದ್ದರು. ಕಾಂಗ್ರೆಸ್ ನಾಯಕ ಭೂಪೇಶ್ ಬಘೇಲ್, 2003 ಮತ್ತು 2013 ರಲ್ಲಿ ವಿಜಯಶಾಲಿಯಾಗಿದ್ದರು.ಕಳೆದ ಚುನಾವಣೆಯಲ್ಲಿ ಬಿಜೆಪಿಯ ಮೋತಿಲಾಲ್ ಸಾಹು ವಿರುದ್ಧ 27,000 ಮತಗಳ ಅಂತರದಿಂದ ಗೆಲುವು ಸಾಧಿಸಿ ಸಿಎಂ ಹುದ್ದೆಗೇರಿದ್ದರು.

ಛತ್ತೀಸ್‌ಗಢದಲ್ಲಿ ಒಟ್ಟು 90 ವಿಧಾನಸಭಾ ಸ್ಥಾನಗಳಿವೆ. ಒಟ್ಟು 11 ಲೋಕಸಭೆ ಮತ್ತು 5 ರಾಜ್ಯಸಭಾ ಸ್ಥಾನಗಳನ್ನು ಹೊಂದಿದೆ. 51 ಸ್ಥಾನಗಳನ್ನು ಸಾಮಾನ್ಯ ವರ್ಗಕ್ಕೆ, 10 ಸ್ಥಾನಗಳನ್ನು ಪರಿಶಿಷ್ಟ ಜಾತಿಗೆ ಮತ್ತು 29 ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗಿದೆ.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲನ್ನು ಅನುಭವಿಸಿತ್ತು. ಕೇವಲ 15 ಸ್ಥಾನಗಳನ್ನು ಗೆದ್ದಿತ್ತು. ಕಾಂಗ್ರೆಸ್ 68 ಸ್ಥಾನಗಳನ್ನು ವಶಪಡಿಸಿಕೊಂಡು ಸರ್ಕಾರವನ್ನು ರಚಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next