Advertisement

ಅಡ್ವಾಣಿ, ಗಡ್ಕರಿ ಅವರಂತೆ ಮಾಡಿ ಶಾ ಮಾದರಿಯಾಗಲಿ: ಸುರ್ಜೇವಾಲಾ 

01:37 PM Oct 17, 2017 | Team Udayavani |

ಬೆಂಗಳೂರು: ‘ಹಣಕಾಸು ಅಕ್ರಮದ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ  ಅಮಿತ್‌ ಶಾ ತಕ್ಷಣ ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ರಾಷ್ಟ್ರೀಯ ವಕ್ತಾರ ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಆಗ್ರಹಿಸಿದ್ದಾರೆ. 

Advertisement

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರ್ಜೇವಾಲಾ ಶಾ ವಿರುದ್ಧ ಕಿಡಿ ಕಾರಿದರು. ‘ಶಾ ಪುತ್ರ ಜಯ್‌ ಶಾ ಆಸ್ತಿ ಬುಲೆಟ್‌ ರೈಲಿನ ವೇಗದಲ್ಲಿ ವೃದ್ಧಿಯಾಗಿದೆ. ಎಲ್ಲಾ ಅಕ್ರಮಗಳಿಗೆ ಮಧ್ಯಪ್ರದೇಶ ಸರ್ಕಾರ ನೆರವಾಗಿದೆ’ ಎಂದರು.      

‘ಬಿಜೆಪಿ ನಾಯಕರಾದ ಅಡ್ವಾಣಿ, ನಿತಿನ್‌ ಗಡ್ಕರಿ ಅವರು ಭ್ರಷ್ಟಾಚಾರದ ಆರೋಪ ಕೇಳಿ ಬಂದ ತಕ್ಷಣ ರಾಜೀನಾಮೆ ನೀಡಿ ಮಾದರಿಯಾಗಿದ್ದರು. ಅವರಂತೆಯೇ ಶಾ ನಡೆದುಕೊಳ್ಳಲಿ’ ಎಂದು ಸುರ್ಜೇವಾಲಾ ಒತ್ತಾಯಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next