Advertisement

ಉಪಚುನಾವಣೆ ಪ್ರಚಾರಕ್ಕೆ ಬಿಜೆಪಿ ಸಿದ್ಧತೆ

10:31 PM Oct 29, 2019 | Lakshmi GovindaRaju |

ಬೆಂಗಳೂರು: 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು, ರಾಜ್ಯದ ಕೇಂದ್ರ ಸಚಿವರು, ರಾಜ್ಯ ಬಿಜೆಪಿ ಅಧ್ಯಕ್ಷರು, ಸಚಿವರು, ಸಂಘಟನಾ ಕ್ಷೇತ್ರದ ಪ್ರಮುಖರು ಸೇರಿ ಹಲವರಿಂದ ಚುನಾವಣಾ ಪ್ರಚಾರ ನಡೆಸಲು ಬಿಜೆಪಿ ಸಿದ್ಧತೆ ಆರಂಭಿಸಿದೆ.

Advertisement

ಉಪಚುನಾವಣಾ ನೀತಿ ಸಂಹಿತೆಯು ನ.11ರಿಂದ ಜಾರಿಯಾಗಲಿದ್ದು, ಅಂದಿನಿಂ ದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಈ ನಡುವೆ ಅನರ್ಹತೆಗೊಂಡ ಶಾಸಕರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಪ್ರೀಂ ಕೋರ್ಟ್‌ ತೀರ್ಪು ಹೊರಬರಬೇಕಿದೆ. ಹಾಗಾಗಿ ಪ್ರಚಾರದ ವೇಳಾಪಟ್ಟಿಯನ್ನೂ ಸಿದ್ಧಪಡಿಸುವ ಕಾರ್ಯಕ್ಕೆ ರಾಜ್ಯ ಬಿಜೆಪಿ ಅಣಿಯಾಗುತ್ತಿದೆ.

ಉಪಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಸದ್ಯದಲ್ಲೇ ಸಿದ್ಧತೆ ಆರಂಭಿಸಲಾಗುವುದು. ಮುಖ್ಯಮಂತ್ರಿ ಗಳು, ರಾಜ್ಯದ ಕೇಂದ್ರ ಸಚಿವರು, ಪಕ್ಷದ ರಾಜ್ಯಾಧ್ಯಕ್ಷರು, ಸಚಿವರು, ಸಂಘಟನಾ ಕ್ಷೇತ್ರದ ಪ್ರಮುಖರು ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪಕ್ಷದ ನಿರ್ಧಾರಕ್ಕೆ ಎಲ್ಲರೂ ಬದ್ಧವಾಗಿರ ಬೇಕು. ಅದರಂತೆ ಪಕ್ಷ ಟಿಕೆಟ್‌ ನೀಡಿದವರ ಪರವಾಗಿ ಎಲ್ಲರೂ ಪ್ರಚಾರ ನಡೆಸಿ ಗೆಲುವಿಗೆ ಶ್ರಮಿಸಬೇಕಿದೆ. ಅದರಂತೆ ಸದ್ಯ ದಲ್ಲೇ ಸಭೆ ನಡೆಸಿ ಪ್ರಚಾರ ವೇಳಾಪಟ್ಟಿ ಸಿದ್ಧಪಡಿಸಲಾಗುವುದು ಎಂದು ಬಿಜೆಪಿ ಪ್ರ.ಕಾರ್ಯದರ್ಶಿಯೊಬ್ಬರು ತಿಳಿಸಿದರು.

ಸರಳ ಆಚರಣೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ ನ.2ಕ್ಕೆ 100 ದಿನ ಪೂರೈಸುತ್ತಿದ್ದು, ಆ ಸಂದರ್ಭವನ್ನು ಸರ್ಕಾರದ ವತಿಯಿಂದ ಸರಳವಾಗಿ ಆಚರಿಸಲು ಚಿಂತನೆ ನಡೆದಂತಿದೆ. ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ 100 ದಿನ ಪೂರ್ಣಗೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ನೆರೆ, ಭಾರೀ ಮಳೆಯಿಂದಾಗಿ ಲಕ್ಷಾಂತರ ಮಂದಿ ಸಂಕಷ್ಟದಲ್ಲಿರುವ ಹಿನ್ನೆಲೆಯಲ್ಲಿ ಸರ್ಕಾರ ಶತದಿನ ಪೂರೈಸಿದ ಸಂದರ್ಭವನ್ನು ಸರಳವಾಗಿ ಆಚರಿಸಲು ನಿರ್ಧರಿಸಿದಂತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next