Advertisement

BJP ಕಚೇರಿ ಶ್ರೀಮಂತರ ಚಹಾ ಹೋಟೆಲ್: ಕಾಂಗ್ರೆಸ್ ಗೆ ಯತ್ನಾಳ್ ತಿರುಗೇಟು

06:05 PM Nov 18, 2023 | Team Udayavani |

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ವಿಪಕ್ಷ ನಾಯಕರ ಆಯ್ಕೆ ಬೆನ್ನಲ್ಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಟೀಕೆಗಳ ಸಮರ ತೀವ್ರವಾಗಿದ್ದು, ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್ ಎಂದು ಕಾಂಗ್ರೆಸ್ ಮಡಿದ ಎಕ್ಸ್ ಪೋಸ್ಟ್ ಗೆ ಬಿಜೆಪಿ ಹಿರಿಯ ನಾಯಕ ಬಸನ ಗೌಡ ಪಾಟೀಲ ಯತ್ನಾಳ್ ತಿರುಗೇಟು ನೀಡಿದ್ದು, ”ಹೇ ಪ್ರಭು!, ಚಹಾ ಮಾರಿಕೊಂಡು ಆದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ!” ಎಂದು ಪೋಸ್ಟ್ ಮಾಡಿದ್ದಾರೆ.

Advertisement

ಶುಕ್ರವಾರ ಯತ್ನಾಳ್ ಅವರು ಶಾಸಕಾಂಗ ಸಭೆಯಿಂದ ತೀವ್ರ ಅಸಮಾಧಾನಿತರಾಗಿ ಹೊರ ನಡೆದ ವೇಳೆ ಮಾಧ್ಯಮ ಪ್ರತಿನಿಧಿಗಳ ಬಳಿ ”ಇಲ್ಲೇ ಚಹಾ ಕುಡಿದು ಬರುತ್ತೇನೆ” ಎಂದು ಹೇಳಿ ಹೋಗಿದ್ದರು.

ಕಾಂಗ್ರೆಸ್ ಎಕ್ಸ್ ಪೋಸ್ಟ್ ನಲ್ಲಿ ”ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ ಅಂತ ಹೊರಗೆ ಟೀ ಕುಡಿಯಲು ಹೋದವರು ಜಗನ್ನಾಥ ಭವನದ ಎದುರು ಟೀ ಮಾರಿಕೊಂಡು ಕೂತಿದ್ದಾರಂತೆ, ಮೋದಿ ಮಾದರಿ!!, ಹೇ ಜಗನ್ನಾಥ ಪ್ರಭು, ನೀನೆಷ್ಟು ಕ್ರೂರಿ..?! “ಜಾರಿದವರ ಯತ್ನ ಬೆಲ್ಲ” ಆಗ್ಲಿಲ್ಲವಲ್ಲಪ್ಪ..!” ಎಂದು ಯತ್ನಾಳ್ ಅವರನ್ನು ಕುಟುಕಿತ್ತು.

ಇನ್ನೊಂದು ಪೋಸ್ಟ್ ನಲ್ಲಿ ” ಬಿಜೆಪಿಯವರೇ ಬಿಜೆಪಿಯವರಿಗೆ ಚಿಂದಿಚೋರ್ ಎಂದಿದ್ದಾರೆ,”ಚಿಂದಿಚೋರ್” ಅಂದರೆ ಯಾರು?? ಈ ಯಕ್ಷಪ್ರಶ್ನೆಗೆ ಕರ್ಣಾಟಕ ಬಿಜೆಪಿ ಉತ್ತರಿಸುವುದೇ?? ಆ ಚಿಂದಿ ಚೋರ್ RTGS ಮೂಲಕ ಕಳ್ಳತನ ಮಾಡಿದ್ದಾರಾ? #VST ಮೂಲಕ ಕಳ್ಳತನ ಮಾಡಿದ್ದಾರಾ? ಅಪ್ಪನ ಫೋರ್ಜರಿ ಸಹಿ ಮಾಡಿ ಕಳ್ಳತನ ಮಾಡಿದ್ದಾರಾ?” ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

”ಬಿಜೆಪಿ ಕಾರ್ಯಕರ್ತರಿಂದಲೇ “ಗೋ ಬ್ಯಾಕ್” ಎನಿಸಿಕೊಂಡು ಓಡಿ ಬಂದವರು ಈಗ ವಿರೋಧ ಪಕ್ಷದ ನಾಯಕರಂತೆ! ತಮ್ಮ ಕಾರ್ಯಕರ್ತರಿಂದಲೇ ಛೀಮಾರಿ ಹಾಕಿಕೊಂಡ, ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಸ್ವಪಕ್ಷದವರ ಬೆನ್ನಿಗೆ ಚೂರಿ ಹಾಕಿದ
ಆರ್.ಅಶೋಕ ಅವರನ್ನು ಅವರ ಪಕ್ಷದ ನಾಯಕರು, ಕಾರ್ಯಕರ್ತರೇ ಒಪ್ಪುತ್ತಿಲ್ಲ, ಇನ್ನು ಜನತೆ ಒಪ್ಪುವರೇ?”ಎಂದು ಪೋಸ್ಟ್ ಮಾಡಿದೆ.

Advertisement

”ಲಿಂಗಾಯತ ನಾಯಕರನ್ನು ಬಳಸಿ ಬೀಸಾಡುವುದೇ ಬಿಜೆಪಿಯ ಅಜೆಂಡಾ!, ಯಡಿಯೂರಪ್ಪರನ್ನು ಎರಡೆರಡು ಬಾರಿ ಕಣ್ಣೀರು ಹಾಕಿಸಿ ಹುದ್ದೆಯಿಂದ ಕೆಳಗಿಳಿಸಿ ಕಳಿಸಿತ್ತು.ಜಗದೀಶ್ ಶೆಟ್ಟರ್ ರವರನ್ನು ಅಧಿಕಾರದಿಂದ ದೂರವಿಟ್ಟು ವಂಚಿಸಿತ್ತು.ವಿ. ಸೋಮಣ್ಣರನ್ನು ವ್ಯವಸ್ಥಿತವಾಗಿ ಸೋಲಿನ ಹೊಂಡಕ್ಕೆ ತಳ್ಳಲಾಗಿತ್ತು.ಲಕ್ಷ್ಮಣ್ ಸವದಿಯವರನ್ನು ಮೂಲೆಗುಂಪು ಮಾಡಿ ಕೂರಿಸಲಾಗಿತ್ತು.ಈಗ ಸಿಎಂ ಆಗಿದ್ದ ಬೊಮ್ಮಾಯಿಯವರು ಆಟಕ್ಕೂ ಇಲ್ಲ, ಲೆಕ್ಕಕ್ಕೂ ಇಲ್ಲದಂತೆ ನಿರ್ಲಕ್ಷಿಸಲಾಗಿದೆ.ಇದೇ ಮಾದರಿಯಲ್ಲಿ ವಿಜಯೇಂದ್ರ ಕೂಡ ಬಳಸಿ ಬೀಸಾಡಲು ತಂದಿರುವ ಹೊಸ “ಹರಕೆಯ ಕುರಿ” ಅಷ್ಟೇ!” ಎಂದು ಕಾಂಗ್ರೆಸ್ ಸರಣಿ ಪೋಸ್ಟ್ ಗಳ ಮೂಲಕ ಟೀಕಾ ಪ್ರಹಾರ ಮುಂದುವರಿಸಿದೆ.

ಶ್ಯಾಡೋ ಸಿಎಂ : ಬಿಜೆಪಿಯಿಂದ ತೀವ್ರ ಟೀಕೆ

”ಕರ್ನಾಟಕದ ಶ್ಯಾಡೋ ಸಿಎಂ ಡಾ.ಯತೀಂದ್ರ ಅವರು, “ಹಲೋ ಅಪ್ಪಾ- ನಾನು ಹೇಳಿದ್ದಷ್ಟೆ ಮಾಡಬೇಕು” ಎಂದು ಆವಾಜ್‌ ಮೇಲೆ ಆವಾಜ್‌ ಹಾಕಿದ್ದು, ಶಾಲೆಗಳಿಗೆ ಬಣ್ಣ ಬಳಿಸುವುದಕ್ಕಲ್ಲ ಬದಲಿಗೆ ತಮ್ಮ ಎಟಿಎಂ ಸರಕಾರದ ಕಲೆಕ್ಷನ್‌ ಬಯಲಾಟಕ್ಕಾಗಿ ಎಂಬುದು ಸಾಕ್ಷಿ ಸಮೇತ ಸಾಬೀತು!! “ನೆಲಕ್ಕೆ ಜಾರಿ ಬಿದ್ದರೂ ಮೀಸೆಗೆ ಮಣ್ಣು ಹತ್ತಿಲ್ಲ” ಎಂಬ ಪ್ರವೃತ್ತಿಯ ಸಿಎಂ ಸಿದ್ದರಾಮಯ್ಯ ಅವರು ಇದಕ್ಕೂ ರಂಗ್‌ ಬಿರಂಗಿ ಕತೆಗಳನ್ನು ಹೆಣೆಯುತ್ತಿರುವುದು ಅಸಹ್ಯದ ಪರಮಾವಧಿ.” ಎಂದು ಬಿಜೆಪಿ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಗಳ ಮೂಲಕ ಟೀಕಾ ಪ್ರಹಾರ ನಡೆಸಿದೆ.

“ಹಲೋ ಅಪ್ಪಾ ಎಂದಿದ್ದು ವರುಣಾದ ಶಾಲೆಗಳಿಗೆ ಬಣ್ಣ ಬಳಿಸಲು ಎಂದು ಹಸಿ ಹಸಿ ಸುಳ್ಳಿನ ಸೌಧ ಕಟ್ಟಿದ್ದ ಸಿಎಂರನ್ನು, ಸಿದ್ದರಾಮಯ್ಯರವರು ಎಂದು ಕರೆಯಬೇಕೋ ಅಥವಾ ಸುಳ್ಳುರಾಮಯ್ಯರವರು ಎಂದು ಕರೆಯಬೇಕೋ ಎಂಬುದು ಸದ್ಯ ಆರೂವರೆ ಕೋಟಿ ಕನ್ನಡಿಗರಿಗಿರುವ ಗೊಂದಲ!!. ಸಿಎಂ ಸಿದ್ದರಾಮಯ್ಯ ಹಾಗೂ ಶ್ಯಾಡೋ ಸಿಎಂ ಯತೀಂದ್ರ ಸಿದ್ದರಾಮಯ್ಯ ಮತ್ತು ಡಮ್ಮಿ ಡಿಸಿಎಂ ಡಿ. ಕೆ. ಶಿವಕುಮಾರ್‌ ನೇತೃತ್ವದ ಕಾಂಗ್ರೆಸ್ ಸರ್ಕಾರ, ಸರ್ಕಾರದ ಶುರುವಾತಿನಿಂದ ಹಿಡಿದು ಇಲ್ಲಿಯವರೆಗೂ ಮಾಡಿದ್ದು ಬರೀ ಕಲೆಕ್ಷನ್-ಕಮಿಷನ್-ಕರಪ್ಷನ್!!” ಎಂದು ಇನ್ನೊಂದು ಪೋಸ್ಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next