Advertisement

ದೆಹಲಿ ಪ್ರತಿಭಟನೆ-ಮುಸ್ಲಿಮ್ ವಿರೋಧಿ ಘೋಷಣೆ ; ಬಿಜೆಪಿ ಮುಖಂಡ ಉಪಾಧ್ಯಾಯ ಸೇರಿ 6 ಮಂದಿ ಬಂಧನ

10:27 AM Aug 10, 2021 | Team Udayavani |

ನವದೆಹಲಿ:ದೆಹಲಿಯ ಜಂತರ್ ಮಂತರ್ ಸಮೀಪ ಭಾರತೀಯ ಜನತಾ ಪಕ್ಷ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಮುಸ್ಲಿಮ್ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಹಾಗೂ ಇತರ ಐದು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಸಿಆರ್ ಪಿಎಫ್ ತುಕಡಿ ಮೇಲೆ ಉಗ್ರರ ದಾಳಿ: ಗಾಯಗೊಂಡ ಓರ್ವ ಯೋಧ

ಪ್ರಕರಣದ ಕುರಿತಂತೆ ವಿಚಾರಣೆಗೆ ಹಾಜರಾಗುವಂತೆ ಅಶ್ವಿನಿ ಉಪಾಧ್ಯಾಯಗೆ ಸೋಮವಾರ  ಕೊನ್ನಾಟ್ ಪ್ಲೇಸ್ ಪೊಲೀಸ್ ಠಾಣೆ ಸಮನ್ಸ್ ನೀಡಿತ್ತು. ಪ್ರತಿಭಟನೆ ಸಂಘಟಿಸಿದ್ದ ಉಪಾಧ್ಯಯ ಅವರನ್ನು ನಿನ್ನೆ ತಡ ರಾತ್ರಿವರೆಗೂ ಪೊಲೀಸರು ವಿಚಾರಣೆಗೊಳಪಡಿಸಿದ್ದರು ಎಂದು ವರದಿ ಹೇಳಿದೆ.

ವಿನೋದ್ ಶರ್ಮಾ, ದೀಪಕ್ ಸಿಂಗ್, ದೀಪಕ್, ವಿನೀತ್ ಕ್ರಾಂತಿ, ಪ್ರೀತ್ ಸಿಂಗ್ ಅವರನ್ನೂ ಪೊಲೀಸರು ವಿಚಾರಣೆಗೊಳಪಡಿಸಿದ್ದು, ಎಲ್ಲಾ ಆರು ಮಂದಿಯನ್ನು ಕೂಡಲೇ ಬಂಧಿಸುವ ಸಾಧ್ಯತೆ ಇದ್ದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಈ ಪ್ರಕರಣದಲ್ಲಿ ಯಾರೆಲ್ಲಾ ಬಂಧನಕ್ಕೊಳಗಾಗಲಿದ್ದಾರೆಯೋ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ತಾನಾ ತಿಳಿಸಿದ್ದಾರೆ. ಜಂತರ್ ಮಂತರ್ ಸಮೀಪ ನಡೆದಿದ್ದ ಪ್ರತಿಭಟನೆ ವೇಳೆ ಕೋಮು ಪ್ರಚೋದಕ ಘೋಷಣೆ ಕೂಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ನಂತರ ಈ ಬಗ್ಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

Advertisement

ಘಟನೆ ಬಗ್ಗೆ ಅಶ್ವಿನಿ ಉಪಾಧ್ಯಾಯ ಹೇಳಿದ್ದೇನು?

ವೈರಲ್ ಆದ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಪ್ರಚೋದನಕಾರಿ ಭಾಷಣ ಮಾಡಿರುವುದು ದಾಖಲಾಗಿದೆ. ಈ ವಿಚಾರದಲ್ಲಿ ಟ್ವಿಟರ್, ಫೇಸ್ ಬುಕ್ ಮತ್ತು ವಾಟ್ಸಪ್ ನಲ್ಲಿ ನನ್ನ ವಿರುದ್ಧ ಅವಹೇಳನ ಮಾಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಇರುವ ವ್ಯಕ್ತಿಗಳನ್ನು ನಾನು ಯಾವತ್ತೂ ಭೇಟಿಯೂ ಆಗಿಲ್ಲ, ಅವರ ಪರಿಚಯವೂ ಇಲ್ಲ. ಅಷ್ಟೇ ಅಲ್ಲ ಕಾರ್ಯಕ್ರಮಕ್ಕೆ ಆ ವ್ಯಕ್ತಿಗಳನ್ನು ಆಹ್ವಾನಿಸಿರಲಿಲ್ಲವಾಗಿತ್ತು ಎಂದು ಅಶ್ವಿನಿ ಉಪಾಧ್ಯಾಯ ದೆಹಲಿ ಪೊಲೀಸ್ ಕಮಿಷನರ್ ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next