Advertisement

‘Kadavule…Ajithey’; ಘೋಷಣೆಗಳ ಬಳಕೆಗೆ ತಮಿಳು ಸೂಪರ್ ಸ್ಟಾರ್ ಅಜಿತ್ ಅಸಮಾಧಾನ

10:24 AM Dec 11, 2024 | Team Udayavani |

ಮುಂಬೈ:“ಕಡವುಲೆ…ಅಜಿತೇ”(ದೇವರು) ಎಂಬ ಘೋಷಣೆಯನ್ನು ಬಳಸಿದ್ದಕ್ಕಾಗಿ ತಮ್ಮ ಅಭಿಮಾನಿಗಳೊಂದಿಗೆ ತಮಿಳು ಸೂಪರ್ ಸ್ಟಾರ್ ಅಜಿತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಹೆಸರಿನ ಮೊದಲು ಅತಿಶಯೋಕ್ತಿ ಅಥವಾ ಪೂರ್ವಪ್ರತ್ಯಯಗಳನ್ನು ಸೇರಿಸುವುದನ್ನು ತಪ್ಪಿಸುವಂತೆ ಒತ್ತಾಯಿಸಿದ್ದಾರೆ.

Advertisement

ಅಜಿತ್ ಅವರ ಪರವಾಗಿ ಆಪ್ತ ಸುರೇಶ್ ಚಂದ್ರ ಅವರು ತಮಿಳು ಮತ್ತು ಇಂಗ್ಲಿಷ್ ಎರಡರಲ್ಲೂ ಅಜಿತ್ ಪರವಾಗಿ ಅಧಿಕೃತ ಹೇಳಿಕೆಯನ್ನು X ನಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಅಜಿತ್ ಅವರು ತನ್ನ ಅಭಿಮಾನಿಗಳೆಲ್ಲರೂ ತಮ್ಮ ವೈಯಕ್ತಿಕ ಜೀವನದ ಮೇಲೆ ಕೇಂದ್ರೀಕರಿಸಿ, ಸಾರ್ವಜನಿಕ ಘೋಷಣೆಗಳಲ್ಲಿ ಪಾಲ್ಗೊಳ್ಳಬೇಡಿ ಎಂದು ಒತ್ತಾಯಿಸಿದ್ದಾರೆ.

“ನನ್ನ ಹೆಸರಿನ ಜೊತೆಗೆ ಅತಿಶಯೋಕ್ತಿ ಅಥವಾ ಯಾವುದೇ ರೀತಿಯ ಪೂರ್ವಪ್ರತ್ಯಯವನ್ನು ನಮೂದಿಸುವುದರಿಂದ ನನಗೆ ಅನಾನುಕೂಲವಾಗುತ್ತಿದೆ. ನನ್ನ ಹೆಸರು ಅಥವಾ ನನ್ನ ಮೊದಲಕ್ಷರಗಳ ಮೂಲಕ ಸಂಬೋಧಿಸಲು ನಾನು ಇಷ್ಟಪಡುತ್ತೇನೆ” ಎಂದು 53 ರ ಹರೆಯದ ಖ್ಯಾತ ನಟ ಮನವಿ ಮಾಡಿದ್ದಾರೆ.

ಅಜಿತ್ ಅವರ ಕೊನೆಯ ಚಿತ್ರ “ತುನಿವು” 2023 ರಲ್ಲಿ ಬಿಡುಗಡೆಯಾಗಿತ್ತು. ಸದ್ಯ ತ್ರಿಶಾ, ಅರ್ಜುನ್ ಸರ್ಜಾ ಮತ್ತು ರೆಜಿನಾ ಕಸ್ಸಂದ್ರ ಅವರೊಂದಿಗೆ “ವಿದಾ ಮುಯಾರ್ಚಿ” ಮತ್ತು ತ್ರಿಶಾ ಅವರೊಂದಿಗೆ “ಗುಡ್ ಬ್ಯಾಡ್ ಅಗ್ಲಿ” ನಲ್ಲಿ ನಟಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next