Advertisement
ಸಮಿತಿಯ ಮೊದಲ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಪಕ್ಷದ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಎಲ್ಲ ಜಿಲ್ಲೆಗಳ 200ಕ್ಕೂ ಹೆಚ್ಚು ಮುಖಂಡರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಹಿಳೆ ಯರು, ಯುವಜನರು, ವೃದ್ಧರು ಸಹಿತ ಎಲ್ಲ ಜನವರ್ಗಗಳಿಗೆ ನೀಡಲಿ ರುವ ಕಾರ್ಯಕ್ರಮಗಳ ಕುರಿತು ನಿರ್ಧಾರವಾಗಲಿದೆ ಎಂದರು.
ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರ ಮಾತಿಗೆ ಪ್ರತಿಕ್ರಿಯೆ ನೀಡಬೇಕಿಲ್ಲ. ಆದರೆ ಅವರಿಗೆ ತಾಕತ್ತಿದ್ದರೆ ಮುಸಲ್ಮಾನರನ್ನು ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಲಿ ಎಂದು ಡಾ| ಕೆ.ಸುಧಾಕರ್ ಸವಾಲು ಹಾಕಿದ್ದಾರೆ. ಕುಮಾರಸ್ವಾಮಿ ಅವರ ಮಾತು ಅಗತ್ಯವೇ ಇರಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಉತ್ತಮ ಆಡಳಿತಗಾರರು. ಬಿಜೆಪಿಗೆ ಕುಮಾರಸ್ವಾಮಿಯವರ ಸಲಹೆ ಬೇಕಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಕುಮಾರಸ್ವಾಮಿ ಘೋಷಿಸಲಿ. ಅವರು ಬಿಜೆಪಿಗೆ ಸವಾಲು ಹಾಕುವ ಮುನ್ನ, ಅವರಿಗೆ ಅವರೇ ಸವಾಲು ಹಾಕಿಕೊಳ್ಳಲಿ ಎಂದರು.