Advertisement
ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಸಂಘಟನ ಪರ್ವ ಕಾರ್ಯಾಗಾರದಲ್ಲಿ ಜಿಲ್ಲಾಧ್ಯಕ್ಷರು ಈ ಒತ್ತಾಯ ಮಂಡಿಸಿದ್ದು, ಡಿಸೆಂಬರ್ 9ರಿಂದ ಪ್ರಾರಂಭವಾಗುವ ಬೆಳಗಾವಿ ಅಧಿವೇಶನಕ್ಕೆ ಮುಂಚಿತವಾಗಿಯೇ ವಿವಾದ ಇತ್ಯರ್ಥವಾಗಬೇಕು. ಇಲ್ಲವಾದರೆ ಪಕ್ಷ ಇನ್ನಷ್ಟು ಮುಜುಗರ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಯತ್ನಾಳ್ ವಿಚಾರದಲ್ಲಿ ಪಕ್ಷದ ನಿಲುವು ತಳಹಂತದಲ್ಲಿ ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತಿದೆ. ನಾವು ನಡೆಸುತ್ತಿರುವ ಹೋರಾಟಕ್ಕೆ ಪಕ್ಷದ ಸಮ್ಮತಿ ಇದೆ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಹೋರಾಟದಲ್ಲಿ ಭಾಗವಹಿಸಬೇಕೋ, ಬೇಡವೋ? ಎಂಬ ವಿಚಾರದಲ್ಲೇ ಎರಡು ಬಣ ಸೃಷ್ಟಿಯಾಗುತ್ತಿದೆ. ಯತ್ನಾಳ್ ವಿಚಾರದಲ್ಲಿ ಹೈಕಮಾಂಡ್ ನಿಲುವೇನೆಂಬುದು ಸ್ಪಷ್ಟಪಡಿಸಲಿ. ರಾಜ್ಯ ಘಟಕದ ವಿರುದ್ಧ ಇದ್ದಾರೆ ಎಂಬ ಕಾರಣಕ್ಕೆ ಜಿಲ್ಲಾಧ್ಯಕ್ಷರು ಈಗ ವಿರೋಧ ವ್ಯಕ್ತಪಡಿಸಬಹುದು. ಆದರೆ ಭವಿಷ್ಯದಲ್ಲಿ ಅವರಿಗೆ ಸ್ಥಾನಮಾನ ನೀಡಿದರೆ ನಾವು ಗೌರವಿಸಬೇಕಾಗುತ್ತದೆ. ಹೀಗಾಗಿ ಕಾರ್ಯಕರ್ತರು ಗೊಂದಲದಲ್ಲಿ ಇದ್ದಾರೆ. ಆದಷ್ಟು ಬೇಗ ವಿವಾದ ಇತ್ಯರ್ಥಗೊಳಿಸಿ ಎಂದು ಆಗ್ರಹಿಸಿದ್ದಾರೆ. ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಘಟಕದ ವಿರುದ್ಧ ಕೀಳುಮಟ್ಟದ ಹೇಳಿಕೆ ಕೊಡುವುದು ಸರಿಯಲ್ಲ. ಇದು ಇನ್ನಷ್ಟು ದಿನ ಮುಂದುವರಿದರೆ ಪಕ್ಷಕ್ಕೆ ಸಮಸೆ
ಯಾಗುತ್ತದೆ. ವಕ್ಫ್ ವಿಚಾರದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ತೆಗೆದುಕೊಂಡ ನಿರ್ಣಯಗಳಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸದನದಲ್ಲಿ ಯತ್ನಾಳ್ ಹೇಳಿಕೆ ಕೊಟ್ಟರೆ ಪಕ್ಷದ ಗತಿಯೇನು? ವಿಪಕ್ಷಗಳ ಕೈಗೆ ನಾವೇ ಅಸ್ತ್ರ ಕೊಟ್ಟಂತಾಗುವುದಿಲ್ಲವೇ? ಹೀಗಾಗಿ ಡಿಸೆಂಬರ್ 9ರೊಳಗಾಗಿ ಈ ವಿಚಾರವನ್ನು ಅಂತ್ಯಗೊಳಿಸಿ. ವರಿಷ್ಠರ ಸಮಯವನ್ನು ಕೇಳಿ. ಇಲ್ಲವಾದರೆ ನಾವೇ ದಿಲ್ಲಿಗೆ ತೆರಳಬೇಕಾಗುತ್ತದೆ ಎಂದು ಜಿಲ್ಲಾಧ್ಯಕ್ಷರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಯಾದಗಿರಿ: ವಕ್ಫ್ ವಿರುದ್ಧ ಪಕ್ಷದ ವೇದಿಕೆ ಯಿಂದಲೇ ಹೋರಾಟ ನಡೆಸಬೇಕು ಎಂಬ ಮಾಜಿ ಸಚಿವ ಸಿ.ಟಿ. ರವಿ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ನಾವು ಶಾಸಕರನ್ನು, ಮುಖಂಡರನ್ನು ನಂಬಿ ಈ ಹೋರಾಟ ಹಮ್ಮಿಕೊಂಡಿಲ್ಲ, ನಮ್ಮ ಜತೆ ಕಾರ್ಯಕರ್ತರಿದ್ದಾರೆ, ರೈತರಿದ್ದಾರೆ ಎಂದರು. ರವಿ ನಿತ್ಯ ನಮ್ಮ ತಂಡದ ಜತೆ ದೂರವಾಣಿ ಮೂಲಕ ಮಾತನಾಡುತ್ತಾರೆ. ನಿಮ್ಮ ಹೋರಾಟ ಸತ್ಯದ ಪರವಿದೆ ಎಂದು ಹೇಳಿದ್ದಾರೆ. ಆದರೆ ಈಗ ಹೀಗೇಕೆ ಹೇಳಿದ್ದಾರೋ ಅವರನ್ನೇ ಕೇಳಿ ಎಂದರು.
Advertisement
ವಕ್ಫ್ ಹೋರಾಟ ರೈತರ ಪರವಾಗಿದೆ. ರೈತರಿಗೆ ರಾಜ್ಯದಲ್ಲಿ ವಕ್ಫ್ ನೆಪದಲ್ಲಿ ಅನ್ಯಾಯವಾಗುತ್ತಿದೆ. ನಮ್ಮ ಹೋರಾಟ ಇರುವುದು ವಕ್ಫ್ ಬೋರ್ಡ್ನಿಂದ ಅನ್ಯಾಯಕ್ಕೊಳಗಾದ ರೈತರು, ಮಠಾ ಧೀಶರ ಪರ. ಇದು ಯಾರ ವಿರುದ್ಧವೂ ಅಲ್ಲ. ಇದನ್ನು ಸಹಿಸದವರು ಏನೇನೋ ಹೇಳುತ್ತಾರೆ ಎಂದು ಹೇಳಿದರು.
ಒಡಕು ನಿಜ, ಸರಿಪಡಿಸಿಕೊಳ್ಳುವೆವುದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಒಡಕು ಇರುವುದು ನಿಜ. ಎಲ್ಲವೂ ವರಿಷ್ಠರಿಗೆ ಗೊತ್ತಿದೆ. ಪಕ್ಷದ ಹಿತದೃಷ್ಟಿಯಿಂದ ಎಲ್ಲರೊಂದಿಗೆ ಚರ್ಚಿಸಿ, ಎಲ್ಲವನ್ನೂ ಸರಿಪಡಿಸಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುದ್ದಿಗಾರರಲ್ಲಿ ಹೇಳಿದರು. ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂಬುದೆಲ್ಲ ಕೇವಲ ಊಹಾಪೋಹ. ಕಾಂಗ್ರೆಸ್ನ ಕೆಲವು ನಾಯಕರು ಇದನ್ನು ಹೇಳುತ್ತಿದ್ದು ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದ ರಚನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಇದಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. ಬಿ.ವೈ. ವಿಜಯೇಂದ್ರ ಮುಂದಿನ ಮುಖ್ಯಮಂತ್ರಿ ಎಂಬ ಕೂಗು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.