Advertisement
ದಲಿತರು ಮತ್ತು ಲಂಬಾಣಿಗಳು ಕೇವಲ ಮತ ಬ್ಯಾಂಕ್ ಆಗಿ ಉಪಯೋಗವಾಗುತ್ತಿದ್ದಾರೆ ಎಂಬ ಸಾಕಷ್ಟು ಆರೋಪ ಮತ್ತು ಟೀಕೆಗಳ ನಡುವೆ ಈಗ ಬಿಜೆಪಿ ಸರಕಾರ ಈ ಸಮುದಾಯಕ್ಕೆ ಹಕ್ಕುಪತ್ರ ನೀಡಲು ಮುಂದಾಗಿರುವುದು ನಾನಾ ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ.
Related Articles
Advertisement
1700 ತಾಂಡಾಗಳು: ರಾಜ್ಯದಲ್ಲಿ ಪ್ರಸ್ತುತ 1700 ಲಂಬಾಣಿ ತಾಂಡಾಗಳಿವೆ. ಈಗ 800 ತಾಂಡಾಗಳು ಕಂದಾಯ ಗ್ರಾಮಗಳಾಗಿ ಬದಲಾಗಲಿದ್ದು, ಈ ತಾಂಡಾಗಳ ಜನರಿಗೆ ಹಕ್ಕುಪತ್ರ ವಿತರಿಸಲಾಗುತ್ತದೆ. ಇದಲ್ಲದೆ ಇನ್ನೊಂದು ತಿಂಗಳಲ್ಲಿ ಬಹುತೇಕ 1500 ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಲಿವೆ. ಸುಮಾರು ಒಂಬತ್ತು ಲಕ್ಷ ಫಲಾನುಭವಿಗಳು ಇದರ ನೇರ ಪ್ರಯೋಜನ ಪಡೆಯಲಿದ್ದಾರೆ.
ಇನ್ನೊಂದು ಕಡೆ ರಾಜ್ಯದಲ್ಲಿ ಲಂಬಾಣಿಗಳ ಜನಸಂಖ್ಯೆ 22 ಲಕ್ಷಕ್ಕಿಂತ ಹೆಚ್ಚಿದೆ. ಇದರಲ್ಲಿ ವಲಸೆ ಹೋಗುವವರ ಸಂಖ್ಯೆಯೆ ಲಕ್ಷ ಲಕ್ಷದಷ್ಟಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ ಸುಮಾರು 7.5 ಲಕ್ಷ ಜನಸಂಖ್ಯೆ ಇರುವುದು ವಿಶೇಷ. ಕಿತ್ತೂರು ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈ ಸಮುದಾಯದ ಜನಸಂಖ್ಯೆ ಅಂದಾಜು 4.5 ಲಕ್ಷದಷ್ಟಿದೆ.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದು ಮತ್ತು ಈ ಜನರಿಗೆ ಹಕ್ಕುಪತ್ರ ಕೊಡುವುದು ಸುಲಭದ ಮಾತಲ್ಲ. ಕೇಂದ್ರದ ಸ್ವಾಮಿತ್ವ ಯೋಜನೆಯ ಮೂಲಕ ರಾಜ್ಯದಲ್ಲಿನ ತಾಂಡಾ ಗಳನ್ನು ಸಮೀಕ್ಷೆ ಮಾಡಿ ಅನಂತರ ಇವುಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸಾಧ್ಯವಾಗಿದೆ. ಕಲಬುರಗಿ, ರಾಯಚೂರು, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಯ ಗಡಿ ತಾಂಡಾಗಳು ಸೇರಿದಂತೆ 50 ಸಾವಿರ ಕುಟುಂಬಗಳಿಗೆ ಪ್ರಧಾನಿ ಮೋದಿ ಅವರಿಂದ ಹಕ್ಕುಪತ್ರ ವಿತರಣೆ ಮಾಡಲಾಗುತ್ತದೆ.
ಇದರಲ್ಲಿ ನಾವು ರಾಜಕೀಯ ನೋಡಿಲ್ಲ ಎಂಬುದು ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ ಅವರ ವಿಶ್ವಾಸ.
ಲಂಬಾಣಿ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಇದುವರೆಗೆ ತನ್ನ ರಾಜಕೀಯ ಲಾಭಕ್ಕಾಗಿ ಮಾತ್ರ ಬಳಸಿ ಕೊಂಡು ಬಂದಿದೆ.
ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡುವ ಮೂಲಕ ಬಿಜೆಪಿ ಸರಕಾರ ಐತಿಹಾಸಿಕ ಸಾಧನೆಗೆ ಮುಂದಾಗಿದೆ. ಇದರಿಂದ ಪಕ್ಷಕ್ಕೆ ರಾಜಕೀಯವಾಗಿ ಬಹಳ ಅನುಕೂಲವಾಗಲಿದೆ. ಇದಕ್ಕಿಂತ ಮುಖ್ಯವಾಗಿ ಈ ಸಮಾಜದ ಬಹಳ ವರ್ಷಗಳ ಬೇಡಿಕೆಗೆ ನಮ್ಮ ಸರಕಾರ ಸ್ಪಂದಿಸಿದ ತೃಪ್ತಿ ಇದೆ. ರಾಜಕೀಯ ಬೇರೆ. ಸಮಾಜಮುಖಿ ಕೆಲಸ ಬೇರೆ. ಈ ಕೆಲಸವನ್ನು ಕಾಂಗ್ರೆಸ್ ಯಾವತ್ತೂ ಮಾಡಲಿಲ್ಲ.-ಪಿ.ರಾಜೀವ, ಲಂಬಾಣಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ -ಕೇಶವ ಆದಿ