Advertisement

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

09:40 PM Apr 19, 2024 | Team Udayavani |

ಚಿಕ್ಕಮಗಳೂರು: ಕರ್ನಾಟಕದಲ್ಲಿ ಎರಡು ಮಾಡೆಲ್‌ಗಳಿದ್ದು, ಕಾಂಗ್ರೆಸ್‌ ಐದು ಗ್ಯಾರಂಟಿ ಮಾಡೆಲ್ ನೀಡಿದ್ದರೇ, ಬಿಜೆಪಿಯವರು ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನಿಡಿದ್ದಾರೆ ಎಂದು ಎಐಸಿಸಿ ಮುಖಂಡ ಹಾಗೂ ಲೋಕಸಭಾ ಚುನಾವಣೆ ಕರ್ನಾಟಕ ಉಸ್ತುವಾರಿ ಸುರ್ಜೇವಾಲ ಟೀಕಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನು ನೀಡಿದೆ. ಕರ್ನಾಟಕ ರಾಜ್ಯ ಸರ್ಕಾರ ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ, ಶಕ್ತಿ ಯೋಜನೆ ಹಾಗೂ ಅನ್ನ ಭಾಗ್ಯ ಐದು ಗ್ಯಾರೆಂಟಿ ಗಳನ್ನು ಈಗಾಗಲೇ ಜಾರಿಗೊಳಿಸಿದೆ ಎಂದರು.

ಎಐಸಿಸಿ ಘೋಷಣೆ ಮಾಡಿರುವ ಮಹಾಲಕ್ಷ್ಮಿ ಗ್ಯಾರಂಟಿಯಡಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 8,300 ರೂ.ನಂತೆ ಮಹಿಳೆಯರ ಬ್ಯಾಂಕ್ ಖಾತೆಗೆ ಒಂದು ವರ್ಷಕ್ಕೆ ಒಂದು ಲಕ್ಷ ರೂ. ನೀಡಲಾಗುವುದು. ನಿರುದ್ಯೋಗಿ ಯುವ ಸಮುದಾ ಯಕ್ಕೆ ಪ್ರತಿ ತಿಂಗಳು 8,300 ರೂ.ನಂತೆ ಒಂದು ಲಕ್ಷ ರೂ. ಹಣ ನೀಡುವುದಾಗಿ ಘೋಷಿಸಿದೆ ಎಂದು ತಿಳಿಸಿದರು.

ರೈತರ ಸಾಲಮನ್ನಾ, ರೈತರು ಬೆಳೆದ ಬೆಳೆಗಳಿಗೆ ಎಂ.ಎಸ್.ಪಿ, ಪ್ರತಿ ಕುಟುಂಬಕ್ಕೆ 25 ಲಕ್ಷ ರೂ. ಮೌಲ್ಯದ ಉಚಿತ ಆರೋಗ್ಯ ವಿಮೆ, ಮರೇಗಾ ಯೋಜನೆಯಡಿ ವೇತನ ಹೆಚ್ಚಳ ಮಾಡುವ ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ನೀಡಿದೆ ಎಂದರು.

ಬಿಜೆಪಿಯವರದ್ದು ಒಂದೇ ಮಾಡೆಲ್ ಅದು ಮೋದಿ ಮಾಡೆಲ್ ಮತ್ತೊಂದು ಅರ್ಥದಲ್ಲಿ ಇದೊಂದು ಚೊಂಬು ಮಾಡೆಲ್ ಎಂದು ವ್ಯಂಗ್ಯ ಮಾಡಿ, ರಾಜ್ಯದ ಬರ ನಿರ್ವಹಣೆಗೆ 17 ಸಾವಿರ ಕೋಟಿ ರೂ. ನೀಡುವುದಾಗಿ ಪ್ರಧಾನಮಂತ್ರಿ ಹೇಳಿದ್ದರು. ಆದರೆ, ಪರಿಹಾರ ನೀಡದೆ ಚೊಂಬು ನೀಡಿದ್ದಾರೆ.

Advertisement

ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಹಣ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿತ್ತು. ಇದುವರೆಗೂ ಹಣ ನೀಡಿಲ್ಲ. ಕರ್ನಾಟಕದಿಂದ ಅತೀ ಹೆಚ್ಚು ತೆರಿಗೆ ಸಂಗ್ರಹಿಸಿ ಕೇಂದ್ರಕ್ಕೆ ನೀಡಲಾಗುತ್ತಿದೆ. ನಮ್ಮಗೆ ಸಲ್ಲಬೇಕಾದ ತೆರಿಗೆ ಹಣದ ಪಾಲು ನೀಡದೆ ಚೊಂಬು ನೀಡಿದ್ದಾರೆ ಎಂದು ಹೇಳಿದರು.

ಐದನೇ ಹಣಕಾಸು ಆಯೋಗದಡಿ ನೀಡಬೇಕಾಗಿದ್ದ ಐದು ಸಾವಿರ ಕೋಟಿ ಹಣ ನೀಡಿಲ್ಲ. ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿ ಭಾರತೀಯರ ಕುಟುಂಬದ ಬ್ಯಾಂಕ್ ಅಕೌಂಟ್‌ಗೆ 15-16 ಲಕ್ಷ ರೂ. ಹಣ ಹಾಕುವುದಾಗಿ ಹೇಳಿ ಹಣ ಹಾಕದೆ ಎಲ್ಲರ ಕೈಗೆ ಚೊಂಬು ಇಟ್ಟಿದ್ದಾರೆ.
2020-22 ರಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿ ಯಾವುದನ್ನು ಮಾಡದೆ ಜನತೆಗೆ ಚೊಂಬು ನೀಡಿದ್ದಾರೆಂದರು.

ರಾಜ್ಯದಲ್ಲಿ ಬಿಜೆಪಿ ಇಲ್ಲ. ಬಿಜೆಪಿ ಎಂದರೇ ಯಡಿಯೂರಪ್ಪನವರ ಮಕ್ಕಳು ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದ ಪ್ರಮುಖ ನಾಯಕರನ್ನು ಮೂಲೆಗುಂಪು ಮಾಡಿದ್ದಾರೆ. ಈಶ್ವರಪ್ಪರಂತಹ ನಾಯಕರನ್ನು ತುಳಿದಿದ್ದಾರೆ. ಇಂದು ಬಿಜೆಪಿ ರಾಜ್ಯ ದಲ್ಲಿರುವ ಯಡಿಯೂರಪ್ಪ ಮತ್ತು ಮಕ್ಕಳ ಪಕ್ಷವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next