ಗಾಂಧಿನಗರ: ಸಾಮಾಜಿಕ ಜಾಲತಾಣಗಳಿಗೆ ಬಿಜೆಪಿ ಹೇರಳ ಪ್ರಮಾಣದಲ್ಲಿ ಹಣ ನೀಡಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಉತ್ತರ ಗುಜರಾತ್‌ನ ಬನಾಸ್ಕಾಂತ ಸೇರಿ ದಂತೆ ಪ್ರಮುಖ ಸ್ಥಳಗಳಲ್ಲಿ ಎರಡನೇಯ ದಿನವಾದ ರವಿ ವಾ ರ ಅವರು ಪ್ರಚಾರ ಮಾಡಿದರು. ಆದರೆ ಕಾಂಗ್ರೆಸ್ ಜಾಲ ತಾಣಗಳನ್ನು ಉಚಿತವಾಗಿ ಬಳಕೆ ಮಾಡು ತ್ತಿದೆ ಎಂದು ಪ್ರತಿಪಾದಿಸಿದರು. ಜಾಲತಾಣ ಗಳಲ್ಲಿ ಪ್ರಧಾನಿಯವರ ವೈಫಲ್ಯಗಳನ್ನು ಎತ್ತಿ ಹಿಡಿಯುತ್ತೇವೆ ಎಂದರು.
ಗುಜರಾತ್ ಸಿಎಂ ವಿಜಯ್ ರುಪಾಣಿ ಮಾಲೀಕತ್ವದ ಸಂಸ್ಥೆಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ ದಂಡ ವಿಧಿಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಅವರು. ಈ ಬಗ್ಗೆ ಪ್ರಧಾನಿ ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ರುಪಾಣಿ ಅಪ್ರಾಮಾಣಿಕ ಎಂದು ಸೆಬಿ ಪ್ರಮಾಣೀಕರಿಸಿದ್ದು, ದಂಡ ವಿಧಿಸಿದೆ. ಗುಜರಾತಿಗರು ಅತ್ಯಂತ ಭ್ರಷ್ಟರಾಗಿದ್ದಾರೆ. ಪೊಲೀಸರು ಗಂಟೆಗೊಮ್ಮೆ ನನ್ನ ಕಚೇರಿಗೆ ಲಂಚಕ್ಕಾಗಿ ಬರುತ್ತಾರೆ ಎಂದು ಸೂರತ್‌ನ ವ್ಯಾಪಾರಿಯೊಬ್ಬರು ಹೇಳುತ್ತಿದ್ದರು ಎಂದು ರಾಹುಲ್ ಕಿಡಿಕಾರಿದ್ದಾರೆ.
ಮತ್ತೆ ಪಿಡಿ ಪ್ರಸ್ತಾಪ: ಈ ಹಿಂದೆ ನನ್ನ ಟ್ವಿಟರ್ ಖಾತೆಯನ್ನು ಪಿಡಿ ಎಂಬ ನಾಯಿ ನಿರ್ವಹಿಸುತ್ತಿದೆ ಎಂದು ಲಘುವಾಗಿ ಟ್ವೀಟ್ ಮಾಡಿದ್ದ ರಾಹುಲ್ ಗಾಂಧಿ, ರವಿ ವಾ ರ ಬನಸ್‌ಕಂತಾ ಜಿಲ್ಲೆಯಲ್ಲಿ ಕಾಂಗ್ರೆಸ್ ಐಟಿ ಸೆಲ್ ಸಿಬ್ಬಂದಿಯೊಂದಿಗೆ ನಡೆಸಿದ ಮಾತುಕತೆಯಲ್ಲಿ ಇನ್ನಷ್ಟು ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. 2-3 ಜನರ ತಂಡಕ್ಕೆ ನಾನು ವಿಷಯವನ್ನು ಹೇಳುತ್ತೇನೆ. ಅವರು ಪಠ್ಯರೂಪಕ್ಕಿಳಿಸಿ ಟ್ವೀಟ್ ಮಾಡುತ್ತಾರೆ. “ಅಡ್ವಾಣಿ ಯವರಿಗೆ ಹುಟ್ಟುಹಬ್ಬದ ಶುಭಾಶಯ ಗಳು’ ಎಂಬ ವಿಷಯಗಳ ಬಗ್ಗೆ ಟ್ವೀಟ್ ಮಾಡುವುದಿಲ್ಲ. ರಾಜಕೀಯ ವಿಚಾರಗಳ ಬಗ್ಗೆ ಹೆಚ್ಚು ಯೋಚಿಸುತ್ತೇನೆ ಎಂದರು.
ಸ್ಥಾನ ಉಳಿಸಿಕೊಂಡ ಕಾಂಗ್ರೆಸ್
ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆ ಭರಾಟೆಯ ನಡುವೆ ಮಧ್ಯಪ್ರದೇಶದ ಚಿತ್ರಕೂಟ ಕ್ಷೇತ್ರಕ್ಕೆ ನಡೆದ ವಿಧಾನಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದೆ. ಈ ಹಿಂದಿಗಿಂತ 14 ಸಾವಿರ ಹೆಚ್ಚು ಮತಗಳಿಂದ ಕಾಂಗ್ರೆಸ್ ಅಬÂರ್ಥಿ ನೀಲಾಂಶು ಚತುರ್ವೇದಿ ಗೆಲುವು ಸಾಧಿಸಿದ್ದಾರೆ. ಹಿಂದಿನಿಂದಲೂ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.