Advertisement

ರಾಯಚೂರಿನಲ್ಲಿ ಮತ್ತೆ ತ್ರಿಕೋನ ಸ್ಪರ್ಧೆ

11:33 PM May 07, 2022 | Team Udayavani |

ರಾಯಚೂರು: ವಿಧಾನಸಭೆ ಚುನಾವಣೆಗೆ ಇನ್ನೂ 10 ತಿಂಗಳು ಬಾಕಿ ಇರುವಾಗಲೇ ರಾಜಕೀಯ ಲೆಕ್ಕಾಚಾರ ಶುರುವಾಗಿದೆ. ಈ ಬಾರಿ ಹೊಸ ಮುಖಗಳ ಪ್ರವೇಶಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಬಹುತೇಕ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವುದು ನಿಚ್ಚಳವಾಗಿದೆ.

Advertisement

ಏಳು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡ ರಾಯಚೂರು ಜಿಲ್ಲೆಯಲ್ಲಿ ಈಗ ಕಾಂಗ್ರೆಸ್‌ ಮೂರು, ಜೆಡಿಎಸ್‌, ಬಿಜೆಪಿ ತಲಾ ಎರಡು ಕ್ಷೇತ್ರಗಳಲ್ಲಿ ಅಧಿ ಕಾರದಲ್ಲಿವೆ. ಎಲ್ಲ ಕ್ಷೇತ್ರ ಗಳಲ್ಲಿ ಹಾಲಿ ಶಾಸಕರು ಮತ್ತೂಮ್ಮೆ ಗೆಲ್ಲಲು ತಂತ್ರಗಾರಿಕೆ ಶುರು ಮಾಡಿದರೆ, ಪರಾಜಿತ ಅಭ್ಯರ್ಥಿಗಳು ಕೂಡ ಪ್ರಚಾರ ಶುರು ಮಾಡಿ ಕೊಂಡಿ ದ್ದಾರೆ. ಇದರ ಮಧ್ಯೆ ಕೆಲವು ಕ್ಷೇತ್ರ ಗಳಲ್ಲಿ ಹೊಸ ಮುಖಗಳ ಪ್ರವೇಶ ವಾಗುತ್ತಿದ್ದು, ಕಣ ರಂಗೇರಿಸುವ ಹುಮ್ಮಸ್ಸಿನಲ್ಲಿದ್ದಾರೆ.

ನಗರ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ: ಸಾಮಾನ್ಯ ವರ್ಗಕ್ಕೆ ಮೀಸಲಾದ ಈ ಕ್ಷೇತ್ರದಲ್ಲೀಗ ಟಿಕೆಟ್‌ಗೆ ಭಾರೀ ಪೈಪೋಟಿ ಏರ್ಪಟ್ಟಿದೆ. ಹಾಲಿ ಶಾಸಕ ಡಾ| ಶಿವರಾಜ್‌ ಪಾಟೀಲ್‌ ಒಮ್ಮೆ ಜೆಡಿಎಸ್‌, ಮತ್ತೂಮ್ಮೆ ಬಿಜೆಪಿ  ಯಿಂದ ಗೆಲುವು ಸಾಧಿ ಸಿದ್ದು, ಈ ಬಾರಿ ಬಿಜೆಪಿ ಯಿಂದಲೇ ಹ್ಯಾಟ್ರಿಕ್‌ ಗೆಲುವಿಗಾಗಿ ಹವಣಿ ಸುತ್ತಿದ್ದಾರೆ. ಕಾಂಗ್ರೆಸ್‌ನ ಮಾಜಿ ಶಾಸಕ ಎನ್‌.ಎಸ್‌. ಬೋಸರಾಜ್‌ ಅಥವಾ ಅವರ ಪುತ್ರ ರವಿ ಬೋಸರಾಜ್‌ ಸ್ಪರ್ಧೆ ಅಣಿಯಾಗುತ್ತಿದ್ದು, ಪೈಪೋಟಿ ಖಚಿತ. ಜೆಡಿಎಸ್‌ ಟಿಕೆಟ್‌ಗೆ ಭಾರೀ ಬೇಡಿಕೆ ಬಂದಿದೆ. ಗುತ್ತಿಗೆದಾರರ ಮುಜಿಬುದ್ದೀನ್‌, ಮುಖಂಡ ರಾಮನ  ಗೌಡ ಏಗನೂರು, ನಗರಸಭೆ ಮಾಜಿ ಅಧ್ಯಕ್ಷ ವಿನಯ  ಕುಮಾರ್‌, ಡಿಕೆಶಿ ಆಪ್ತ ಎನ್ನಲಾಗುತ್ತಿರುವ ಬೊಮ್ಮ ನ  ಹಳ್ಳಿ ಬಾಬು ಹೀಗೆ ಅನೇಕರ ಹೆಸರು ಕೇಳಿ ಬಂದಿದೆ.

ರಾಯಚೂರು ಗ್ರಾಮೀಣ: ಈ ಕ್ಷೇತ್ರದಲ್ಲಿ ಒಮ್ಮೆ ಗೆದ್ದ ವರು ಮತ್ತೂಮ್ಮೆ ಗೆಲುವು ಕಂಡ ಉದಾಹರಣೆ ಇಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಪ್ರತೀ ಬಾರಿ ಹೊಸಬರ ಪ್ರವೇಶವಾಗುತ್ತಿದೆ. ಈ ನಿಟ್ಟಿನಲ್ಲಿ ಶಾಸಕ ಕಾಂಗ್ರೆಸ್‌ನ ದದ್ದಲ್‌ ಬಸನ ಗೌಡ ಕ್ಷೇತ್ರ ಸಂಚಾರ ಶುರು ಮಾಡಿದ್ದಾರೆ. ಪರಾಜಿತ ಅಭ್ಯರ್ಥಿ ಬಿಜೆಪಿಯ ತಿಪ್ಪರಾಜ್‌ ಹವಾ ಲ್ದಾರ್‌ ಕೂಡ ಮತ್ತೆ ಅದೇ ಪಕ್ಷದಿಂದ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಜೆಡಿಎಸ್‌ ಕಳೆದ ಬಾರಿ ಉತ್ತಮ ಮತ ಪಡೆದಿತ್ತಾದರೂ ಸೂಕ್ತ ಅಭ್ಯರ್ಥಿ ಸಿಕ್ಕಲ್ಲಿ ಜೆಡಿಎಸ್‌ಗೂ ಅವಕಾಶ ಇಲ್ಲ ಎನ್ನಲಾಗುವುದಿಲ್ಲ.

ದೇವದುರ್ಗದಲ್ಲಿ ಬದಲಾವಣೆ ಪರ್ವ: ಹಾಲಿ ಶಾಸಕ ಕೆ.ಶಿವನಗೌಡ ನಾಯಕ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂಬ ಗಾಳಿಮಾತು ಹರಿದಾಡುತ್ತಿವೆ. ಮಾಜಿ ಸಂಸದ ಬಿ.ವಿ. ನಾಯಕ ಸ್ಪರ್ಧೆ ಮಾಡಿದರೆ ಪ್ರಬಲ ಪೈಪೋಟಿ ಖಚಿತ. ಇದರ ಜತೆಗೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಕರೆಮ್ಮ 23 ಸಾವಿರ ಮತ ಪಡೆದ ಗಮನ ಸೆಳೆದಿದ್ದರು. ಈ ಬಾರಿ ಅವರಿಗೆ ಜೆಡಿಎಸ್‌ ಟಿಕೆಟ್‌ ಖಚಿತ ಗೊಂಡಿದ್ದು, ಇಲ್ಲೂ ತ್ರಿಕೋನ ಸ್ಪರ್ಧೆ ನಿಕ್ಕಿ.

Advertisement

ಕೇಂದ್ರ ಬಿಂದು ಮಸ್ಕಿ: ಮಸ್ಕಿ ಕ್ಷೇತ್ರದ ಉಪ ಚುನಾವಣೆ ಇಡೀ ದೇಶದ ಗಮನ ಸೆಳೆದಿತ್ತು. ಈಗ ಕಾಂಗ್ರೆಸ್‌ ಆಡಳಿತವಿದ್ದು, ಮುಂದಿನ ಚುನಾವಣೆಯಲ್ಲೂ ಇದೇ ಗಾಳಿ ಮುಂದುವ ರಿಯಬಹುದು. ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ವಿರೋ ಧಿ ಅಲೆ ಬಿಜೆಪಿಯನ್ನು ನೆಲಕಚ್ಚುವಂತೆ ಮಾಡಿದೆ. ದೊಡ್ಡ ಅಂತರದಲ್ಲಿ ಬಸನಗೌಡ ತುರ್ವಿ ಹಾಳ ಗೆಲುವು ಸಾ ಧಿಸಿದರೂ ಸರಕಾರ ಆಡಳಿತದಲ್ಲಿ ಇಲ್ಲದ್ದಕ್ಕೆ ಕೆಲಸಗಳಾಗಿಲ್ಲ. ಮತದಾರ ಮತ್ತೂಮ್ಮೆ ಕಾಂಗ್ರೆಸ್‌ಗೆ ಒಲವು ತೋರಿದರೂ
ಅಚ್ಚರಿ ಇಲ್ಲ.

ಸಿಂಧನೂರಲ್ಲಿ ಕೈ-ದಳ ಕಸರತ್ತು: ಸಾಮಾನ್ಯ ವರ್ಗಕ್ಕೆ ಮೀಸಲಾದ ಸಿಂಧನೂರು ಕ್ಷೇತ್ರದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ನೇರ ಹಣಾಹಣಿ ಯಿದ್ದು, ಇಲ್ಲಿ ಬಿಜೆಪಿಗೆ ನೆಲೆ ಇಲ್ಲ. ಇಲ್ಲಿಯೂ ಒಮ್ಮೆ ಕಾಂಗ್ರೆಸ್‌, ಮತ್ತೂಮ್ಮೆ ಜೆಡಿಎಸ್‌ ಗೆಲ್ಲುತ್ತಿವೆ. ಕಾಂಗ್ರೆಸ್‌ ಯುವ ಮುಖಂಡ ಬಸನಗೌಡ ಬಾದರ್ಲಿ ಸ್ಪರ್ಧೆ ಇಂಗಿತ ವ್ಯಕ್ತಪಡಿಸಿದ್ದು, ಮಾಜಿ ಶಾಸಕ ಹಂಪನಗೌಡ ಬಾದರ್ಲಿಗೆ ಸಂಕಷ್ಟ ಏರ್ಪಟ್ಟಿದೆ. ಹಾಲಿ ಶಾಸಕ ವೆಂಕಟರಾವ್‌ ನಾಡಗೌಡ ಜೆಡಿಎಸ್‌ನಲ್ಲೇ ಭದ್ರವಾಗಿದ್ದಾರೆ.

ಮಾನ್ವಿಯಲ್ಲಿ ಜೆಡಿಎಸ್‌ ಬಲ: ಕಾಂಗ್ರೆಸ್‌ ಭದ್ರಕೋಟೆ ಯನ್ನು ಭೇದಿಸುವಲ್ಲಿ ಜೆಡಿಎಸ್‌ ಯಶಸ್ವಿಯಾಗಿತ್ತು. ಬಿಜೆಪಿ ಉತ್ತಮ ಪೈಪೋಟಿ ನೀಡಿತ್ತಾದರೂ ಇನ್ನೂ ಹೆಚ್ಚು ಶ್ರಮಿಸಬೇಕಿದೆ. ಹಾಲಿ ಜೆಡಿಎಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಮತ್ತೂಮ್ಮೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಕಾಂಗ್ರೆಸ್‌ಗೆ ಪ್ರಬಲ ಅಭ್ಯರ್ಥಿ ಸಿಕ್ಕರೆ ಮಾತ್ರ ಈ ಬಾರಿ ಜೆಡಿಎಸ್‌ ಮಣಿಸಲು ಸಾಧ್ಯ. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದ ಮೇಲೆ ಕೆಲವು ಶಾಸಕರು ಕಣ್ಣಿ ಟ್ಟಿದ್ದು, ಈ ಕ್ಷೇತ್ರಕ್ಕೆ ವಲಸೆ ಹೋಗುವ ಲೆಕ್ಕಾಚಾರದಲ್ಲಿದ್ದಾರೆ.

– ಸಿದ್ಧಯ್ಯಸ್ವಾಮಿ ಕುಕನೂರು

Advertisement

Udayavani is now on Telegram. Click here to join our channel and stay updated with the latest news.

Next