ಬೆಂಗಳೂರು: ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷಕ್ಕೆ ಬೆಂಬಲ ನೀಡಿದ್ದಕ್ಕಾಗಿ ನಟ ಕಿಚ್ಚ ಸುದೀಪ್ ಅವರನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಗುರಿಯಾಗಿಸುತ್ತಿದೆ ಎಂದು ಬಿಜೆಪಿ ಶನಿವಾರ ಆರೋಪಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಅವರು, ಸುದೀಪ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯಂತೆ ತಮ್ಮ ಸ್ಥಾನವನ್ನು ಆನುವಂಶಿಕವಾಗಿ ಪಡೆದಿಲ್ಲ. ವಿರೋಧ ಪಕ್ಷಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಹಕ್ಕುಗಳ ಬಗ್ಗೆ ಮಾತನಾಡುವ ಬೂಟಾಟಿಕೆ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಮತ್ತೊಂದೆಡೆ ನಟನನ್ನು ಗುರಿಯಾಗಿಸಿಕೊಂಡು ಟೀಕೆ ಮಾಡುತ್ತಿದ್ದಾರೆ. ಪಕ್ಷವನ್ನು ಬೆಂಬಲಿಸುವ ಹಕ್ಕು ಅವರಿಗಿದೆ ಎಂದರು.
ಸುದೀಪ್ ಅವರ ಬೆಂಬಲವನ್ನು ಬಯಸುತ್ತಿರುವ ಬಿಜೆಪಿಗೆ ಹೊರಗಿನವರ ಮೇಲಿನ ಅವಲಂಬನೆಯನ್ನು ಎತ್ತಿ ತೋರಿಸುತ್ತದೆ ಎಂಬ ಟೀಕೆಗೆ ತಿರುಗೇಟು ನೀಡಿದ ಭಾಟಿಯಾ, ಸ್ವರಾ ಭಾಸ್ಕರ್ ಮತ್ತು ರಿಯಾ ಸೇನ್ ಅವರಂತಹ ನಟಿಯರು ರಾಹುಲ್ ಗಾಂಧಿಯವರ ‘ಭಾರತ್ ಜೋಡೋ ಯಾತ್ರೆ’ಯಲ್ಲಿದ್ದರಲ್ಲೆವೇ. ದೇಶದ ಅಖಂಡತೆಯ ವಿರುದ್ಧ ಘೋಷಣೆಗಳನ್ನು ಕೂಗಿದವರಿಗೆ ಭಾಸ್ಕರ್ ಬೆಂಬಲ ನೀಡಿದ್ದರು ಎಂದರು.
ಇದು ಎರಡು ಪಕ್ಷಗಳ “ಅನಾರೋಗ್ಯದ ಮನಸ್ಥಿತಿ” ಯನ್ನು ಬಹಿರಂಗಪಡಿಸುತ್ತದೆ, ಸುದೀಪ್ ಕನ್ನಡದ ಮಣ್ಣಿನ ಮಗ. ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿಯೊಬ್ಬ ಕನ್ನಡಿಗನ ಭಾವನೆಗಳನ್ನು ನೋಯಿಸುತ್ತಿದ್ದಾರೆ ಎಂದು ಭಾಟಿಯಾ ಆರೋಪಿಸಿದರು.
ಕಾಂಗ್ರೆಸ್ ಪ್ರಕಾರ, ತನ್ನ ತವರು ರಾಜ್ಯದಲ್ಲಿರುವ ಭಾರತೀಯ ಪ್ರಜೆ ತನ್ನ ರಾಜಕೀಯ ಒಲವು ಏನೆಂದು ಆಯ್ಕೆ ಮಾಡಲು ಸಾಧ್ಯವಿಲ್ಲವೇ ಎಂದು ಬಿಜೆಪಿ ನಾಯಕ ಪ್ರಶ್ನಿಸಿದರು.