Advertisement

Anti-national;ಅಫ್ಜಲ್ ಗುರು ವಿಚಾರದಲ್ಲಿ ಆತಿಷಿ ವಿರುದ್ಧ ಬಿಜೆಪಿ ಟೀಕಾ ಪ್ರಹಾರ

10:56 AM Sep 18, 2024 | Team Udayavani |

ಹೊಸದಿಲ್ಲಿ: ಸಂಸತ್ ದಾಳಿಯ ಅಪರಾಧಿ ಅಫ್ಜಲ್ ಗುರುವಿಗೆ ಸಂಬಂಧಿಸಿದಂತೆ ರಾಷ್ಟ್ರಪತಿಗಳಿಗೆ ಸಲ್ಲಿಸಲಾದ ಕ್ಷಮಾದಾನ ಅರ್ಜಿಗೆ ಆಕೆಯ ಪೋಷಕರು ಸಹಿ ಹಾಕಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ದೆಹಲಿ ಘಟಕ ಮಂಗಳವಾರ ಆಮ್ ಆದ್ಮಿ ಪಕ್ಷದ ನಿಯೋಜಿತ ಮುಖ್ಯಮಂತ್ರಿ ಆತಿಷಿ ಮರ್ಲೆನಾ ಸಿಂಗ್ (Atishi Marlena Singh) ಮೇಲೆ ತೀವ್ರ ಟೀಕಾ ಪ್ರಹಾರ ನಡೆಸಿದೆ.

Advertisement

ದೆಹಲಿಯಲ್ಲಿ ಕೇವಲ ಭ್ರಷ್ಟ ಸರ್ಕಾರ ಮಾತ್ರವಲ್ಲ, ದೇಶ ವಿರೋಧಿ ಸರಕಾರವೂ ಕಾರ್ಯನಿರ್ವಹಿಸಲಿದೆ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ವೀರೇಂದ್ರ ಸಚ್‌ದೇವ್ ವಾಗ್ದಾಳಿ ನಡೆಸಿದ್ದಾರೆ.

”ಆತಿಷಿ ಮರ್ಲೆನಾ ಅವರ ಹೆಸರನ್ನು ಘೋಷಿಸಿ ಅರವಿಂದ್ ಕೇಜ್ರಿವಾಲ್ ದೆಹಲಿಯನ್ನು ಅರಾಜಕತೆಗೆ ತಳ್ಳಿದ್ದಾರೆ. ಅದರ ಹಿಂದೆ ಒಂದು ಕಾರಣವಿದೆ.ಅಫ್ಜಲ್ ಗುರುವಿಗಾಗಿ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿಯನ್ನು ಸಲ್ಲಿಸಲಾಯಿತು ಮತ್ತು ಆಕೆಯ ಪೋಷಕರು ಅದಕ್ಕೆ ಸಹಿ ಹಾಕಿದ್ದರು”ಎಂದುಟೀಕಾ ಪ್ರಹಾರ ನಡೆಸಿದರು.

ಆಪ್ ತಿರುಗೇಟು
ತಿರುಗೇಟು ನೀಡಿರುವ ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್, ‘ಬಿಜೆಪಿ ಅತಿದೊಡ್ಡ ದೇಶವಿರೋಧಿ . ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಯೊಂದಿಗೆ ಬಿಜೆಪಿ ಸರ್ಕಾರ ರಚಿಸಿತು, ಅದು ಅಫ್ಜಲ್ ಗುರುವನ್ನು “ಹುತಾತ್ಮ” ಎಂದು ಕರೆದಿತ್ತಲ್ಲವೇ’ ಎಂದು ಕಿಡಿ ಕಾರಿದ್ದಾರೆ.

ಎಎಪಿ ಶಾಸಕಾಂಗ ಪಕ್ಷವು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕೇಜ್ರಿವಾಲ್ ಅವರ ಆಯ್ಕೆಯಾದ ಉತ್ತರಾಧಿಕಾರಿ ಆತಿಷಿ ಅವರನ್ನು ನಾಯಕಿಯನ್ನಾಗಿ ಆಯ್ಕೆ ಮಾಡಿದಂತೆ, ಮುಖ್ಯಮಂತ್ರಿಯ ಮುಖವನ್ನು ಬದಲಾಯಿಸುವುದರಿಂದ ಆಮ್ ಆದ್ಮಿ ಪಕ್ಷದ ಸ್ವರೂಪ ಬದಲಾಗುವುದಿಲ್ಲ ಎಂದು ಬಿಜೆಪಿ ಹೇಳಿದೆ.

Advertisement

ಬಂಡಾಯವೆದ್ದಿರುವ ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಅವರು ”ದೆಹಲಿಗೆ ಇದು ಅತ್ಯಂತ ದುಃಖದ ದಿನವಾಗಿದ್ದು, ಭಯೋತ್ಪಾದಕ ಅಫ್ಜಲ್ ಗುರುವನ್ನು ಮರಣದಂಡನೆಯಿಂದ ರಕ್ಷಿಸಲು ಆತಿಷಿ ಕುಟುಂಬ ಹೋರಾಡಿತ್ತು.ಆಫ್ಜಲ್ ಗುರುವನ್ನು ಗಲ್ಲಿಗೇರಿಸಬಾರದು, ಆತ ನಿರಪರಾಧಿ ಮತ್ತು ರಾಜಕೀಯ ಪಿತೂರಿಗೆ ಬಲಿಯಾಗಿದ್ದಾರೆ ಎಂದು ಆಕೆಯ ಪೋಷಕರು ರಾಷ್ಟ್ರಪತಿಗಳಿಗೆ ಹಲವಾರು ಬಾರಿ ಕ್ಷಮಾದಾನ ಅರ್ಜಿಯನ್ನು ಕಳುಹಿಸಿದ್ದರು ಎಂದು ಆರೋಪಿಸಿದ ಬಳಿಕ ಬಿಜೆಪಿಯೂ ತೀವ್ರ ಟೀಕಾ ಪ್ರಹಾರ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next