Advertisement

ಗರೀಬಿ ಹಠಾವೋ: ಒಂದೇ ಕಲ್ಲಿಗೆ ಬಿಜೆಪಿ, ಕಾಂಗ್ರೆಸ್‌ ಹಕ್ಕಿ ಹೊಡೆವ ಮಾಯಾವತಿ

09:13 AM Mar 29, 2019 | Team Udayavani |

ಲಕ್ನೋ : ಆಳುವ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷದ ಗರೀಬಿ ಹಠಾವೋ ಆಶ್ವಾಸನೆ ಮಹಾ ದೊಡ್ಡ ಸುಳ್ಳೆಂದು ಹೇಳುವ ಮೂಲಕ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಅವರು ಒಂದೇ ಕಲ್ಲೇಟಿಗೆ ಒಂದೇ ನಮೂನೆಯ ರೆಕ್ಕೆಯ ಕಾಂಗ್ರೆಸ್‌ ಮತ್ತು ಬಿಜೆಪಿ ಎಂಬ ಎರಡು ಹಕ್ಕಿಗಳನ್ನು ಹೊಡೆದುರುಳಿಸುವ ಯತ್ನ ಮಾಡಿದ್ದಾರೆ.

Advertisement

ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೇ ಬಗೆಯ ರೆಕ್ಕೆ ಇರುವ ಎರಡು ಹಕ್ಕಿಗಳೆಂಬ ಪಕ್ಷಗಳಾಗಿವೆ. ಬಡತನ ನಿರ್ಮೂಲನೆಗೆ ಈ ಎರಡೂ ಪಕ್ಷಗಳು ನೀಡುತ್ತಿರುವ ಭರವಸೆಗಳು ಬರೇ ಸುಳ್ಳು ಮತ್ತು ಪೊಳ್ಳು. ಇದು ಚುನಾವಣಾ ಗಿಮಿಕ್‌ ಅಲ್ಲದೇ ಬೇರೇನೂ ಅಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಕಾಂಗ್ರೆಸ್‌ ಪಕ್ಷದ ಗರೀಬೀ ಹಠಾವೋ 2.0 ಘೋಷಣೆಯನ್ನು ಬೋಗಸ್‌ ಎಂದು ಆಳುವ ಬಿಜೆಪಿ ಹೇಳಿದೆ. ಆದರೆ ಈ ಎರಡೂ ಪಕ್ಷಗಳು ತಾವು ನೀಡುವ ಆಶ್ವಾಸನೆಗಳಿಂದ ಹಿಂದೆ ಸರಿವ ಪಕ್ಷಗಳಾಗಿವೆ ಎಂದು ಮಾಯಾವತಿ ಹೇಳಿದರು.

ಕಾಂಗ್ರೆಸ್‌ ಮತ್ತು ಆಳುವ ಬಿಜೆಪಿ ಬಡಜನರು ಕಾರ್ಮಿಕರು, ರೈತರು ಮತ್ತು ಇತರರ ಹಿತಾಸಕ್ತಿಗಳಿಗೆ ಮೋಸ ಎಸಗಿರುವ ಪಕ್ಷಗಳಾಗಿವೆ ಎಂದು ಮಾಯಾವತಿ ಟ್ವಿಟರ್‌ನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next