Advertisement

ಶಬರಿ ಮಲೆ ಹೋರಾಟ ಭಾಗಶಃ ಯಶಸ್ವೀ : ಬಿ.ಜೆ.ಪಿ.

04:24 AM Jan 20, 2019 | Karthik A |

ತಿರುವನಂತಪುರಂ: ದಕ್ಷಿಣ ಭಾರತದ ಪ್ರಸಿದ್ಧ ಶ್ರದ್ಧಾಕೇಂದ್ರಗಳಲ್ಲಿ ಒಂದಾಗಿರುವ ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿ ಸುಪ್ರೀಂಕೊರ್ಟ್ ಆದೇಶ ನೀಡಿದ ಬಳಿಕ ಅಯ್ಯಪ್ಪ ಭಕ್ತವರ್ಗದಲ್ಲಿ ಆಕ್ರೋಶ ಮತ್ತು ಗೊಂದಲ ವ್ಯಕ್ತವಾಗಿತ್ತು.

Advertisement

ಸುಪ್ರೀಂ ತನ್ನ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಕೇರಳ ರಾಜ್ಯ ಸರಕಾರ ಮನವಿ ಅರ್ಜಿ ಸಲ್ಲಿಸಬೇಕೆಂದು ಬಿ.ಜೆ.ಪಿ. ಸೇರಿದಂತೆ ಹಲವಾರು ಸಂಘಟನೆಗಳು ಕೇರಳ ರಾಜ್ಯಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದವು. ಆದರೆ ಈ ವಿಚಾರದಲ್ಲಿ ಪಕ್ಷ ಸಂಘಟಿಸಿದ ಹೋರಾಟ ಪರಿಣಾಮಕಾರಿಯಾಗಿ ಯಶಸ್ವಿಯಾಗಿಲ್ಲ ಎಂಬುದನ್ನು ಬಿ.ಜೆ.ಪಿ. ಒಪ್ಪಿಕೊಂಡಿದೆ. ‘ಶಬರಿಮಲೆ ವಿಚಾರದಲ್ಲಿ ನಮ್ಮ ಹೋರಾಟವು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ, ಮತ್ತು ಭಕ್ತರ ನಂಬಿಕೆಗಳನ್ನು ಪುನರ್ ಸ್ಥಾಪಿಸುವ ಪ್ರಯತ್ನದಲ್ಲಿ ನಾವು ವಿಫಲರಾಗಿದ್ದೇವೆ..’ ಎಂದು ಬಿ.ಜೆ.ಪಿ.ಯ ಕೇರಳ ರಾಜ್ಯಾಧ್ಯಕ್ಷ ಪಿ. ಎಸ್. ಶ್ರೀಧರನ್ ಪಿಳ್ಳೈ ಅವರು ಹೇಳಿದ್ದಾರೆ.

ಶಬರಿ ಮಲೆ ವಿಚಾರದಲ್ಲಿ ಪಕ್ಷವು ನಡೆಸುತ್ತಿದ್ದ ಅನಿರ್ಧಷ್ಟಾವಧಿ ಮುಷ್ಕರವು ಇಂದು ಕೊನೆಗೊಳ್ಳಲಿದೆ ಎಂದೂ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಈ ವಿಚಾರದಲ್ಲಿ ವಿವಿಧ ಹಂತಗಳಲ್ಲಿ ಪ್ರತಿಭಟನೆಗಳು ನಡೆದರೂ ಭಕ್ತರ ನಂಬಿಕೆಗಳನ್ನು ಉಳಿಸಿಕೊಳ್ಳುವಲ್ಲಿ ನಾವು ಮಾಡಿದ ಹೋರಾಟ ಸಂಪೂರ್ಣ ಯಶಸ್ವಿಯಾಗಿಲ್ಲ ಎಂದೂ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಇದುವರೆಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ 5000 ಅಯ್ಯಪ್ಪ ಭಕ್ತರ ಮೇಲೆ ವಿವಿಧ ಕೇಸುಗಳನ್ನು ದಾಖಲಿಸಲಾಗಿದೆ ಮತ್ತು 1000 ಹೋರಾಟಗಾರರು ಇನ್ನೂ ಜೈಲಿನಲ್ಲಿದ್ದಾರೆ ಅವರನ್ನು ಶೀಘ್ರವೇ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಪಿಳ್ಳೈ ಅವರು ಆಡಳಿತಾರೂಢ ಸಿ.ಪಿ.ಎಂ. ಸರಕಾರವನ್ನು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next