Advertisement
ಭಾನುವಾರ ಸಮೀಪದ ಕೆ. ಗುಡಿಯಲ್ಲಿ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ 2023ನೇ ಸಾಲಿನ ಪಕ್ಷಿ ಸಮೀಕ್ಷೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
Related Articles
Advertisement
ಮೈಸೂರು ಕಾರ್ಯಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌ಕುಮಾರ್ ಮಾತನಾಡಿ, ಪಕ್ಷಿ ಸಮೀಕ್ಷೆಗೆ ಬಂದಿರುವ ಸ್ವಯಂ ಸೇವಕರು ನಿಜವಾದರಾಯಭಾರಿಗಳಾಗಿದ್ದಾರೆ. ಇವರು ಸಮೀಕ್ಷೆ ಮಾಡಿ, ಚಲನವಲನಗಳನ್ನು ಗಮನಿಸಿ, ಇದರ ಉಪಯೋಗ,ಇದರ ಸಂರಕ್ಷಣೆ ಬಗ್ಗೆ ಹೊರ ಜಗತ್ತಿಗೆ ಸಾರುವ ಕೆಲಸವನ್ನು ಮಾಡಬೇಕು ಎಂದರು.
ಪಕ್ಷಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರಿಗೆ ಪ್ರಮಾಣಪತ್ರವನ್ನು ವಿತರಿಸಲಾಯಿತು. ಎಸಿಎಫ್ ಮಹದೇವಯ್ಯ, ಕೆ. ಸುರೇಶ್, ಆರ್‌ಎಫ್ಒ ವಿನೋದ್‌ಗೌಡ, ಲೋಕೇಶ್ ಮೂರ್ತಿ, ಎಸ್.ಪಿ ಮಂಜುನಾಥ್,ಸಲೀಂ, ಪ್ರಭುಸ್ವಾಮಿ ಸೇರಿದಂತೆ ರಾಜ್ಯದ ವಿವಿಧಭಾಗಗಳಿಂದ ಅಗಮಿಸಿದ್ದ ಸ್ವಯಂ ಸೇವಕರು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.
ಬಿಆರ್‌ಟಿಯಲ್ಲಿ 274 ಪಕ್ಷಿ ಪ್ರಭೇದ ಪತ್ತೆ: ದೀಪ್ : ಬಿಆರ್‌ಟಿ ಹುಲಿ ಯೋಜನೆಯ ಉಪ ಅರಣ್ಯಸಂರಕ್ಷಣಾಧಿಕಾರಿ ಮತ್ತು ನಿರ್ದೇಶಕಿ ದೀಪ್‌ಜೆ. ಕಂಟ್ರಾಕ್ಟರ್ ಮಾತನಾಡಿ, ಬಿಆರ್‌ಟಿಯಲ್ಲಿ2012 ರಲ್ಲಿ ಪಕ್ಷಿ ಸಮೀಕ್ಷೆ ಮಾಡಿದಾಗ 272ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿತ್ತು. ಈ ಬಾರಿ ಇನ್ನೆರಡು ಪ್ರಭೇದಗಳು ಸೇರಿ ಒಟ್ಟು 274 ಪ್ರಭೇದದ ಪಕ್ಷಿಗಳನ್ನು ಗುರುತಿಸಲಾಗಿದೆ. ದಾಂಡೇಲಿ ಹಾಗೂ ಪಶ್ಚಿಮ ಘಟ್ಟಗಳಲ್ಲಿಕಂಡುಬರುವ ಗ್ರೇಟ್ ಹಾರ್ನ್ಬಿಲ್ ಹಾಗೂ
ನಾರ್ಥನ್ ಪಿನ್ ಟೇಲ್ ಎಂಬ ಪಕ್ಷಿಗಳು ಈಬಾರಿ ಬಿಆರ್‌ಟಿ ವಲಯ ವ್ಯಾಪ್ತಿಯಲ್ಲಿ ಕಂಡು ಬಂದಿರುವುದು ಇಲ್ಲಿನ ವಿಶೇಷವಾಗಿದೆ. ಪಕ್ಷಿ ಸಮೀಕ್ಷೆಗೆ ಸ್ವಯಂ ಸೇವಕರು, ತೆಲಂಗಾಣದಅರಣ್ಯ ಶಿಕ್ಷಣದ ವಿದ್ಯಾರ್ಥಿಗಳು ಸೇರಿ 50 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಇವರ 25 ತಂಡಗಳು ಅರಣ್ಯ ಸಿಬ್ಬಂದಿ ತಂಡದೊಂದಿಗೆ ಬಿಆರ್‌ಟಿ ವಲಯದ ಸುತ್ತ ಮೂರು ದಿನಗಳ ಸಮೀಕ್ಷೆ ಮಾಡಿದ್ದು ವೈಜ್ಞಾನಿಕವಾಗಿ ಪಕ್ಷಿ ಪ್ರಭೇದವನ್ನು ಗುರುತಿಸುವ ಕೆಲಸವನ್ನು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.