Advertisement

ಬಿಲ್ಲವ ಜಾಗೃತಿ ಬಳಗ ಮಹಿಳಾ ವಿಭಾಗ: ವಿಶ್ವ ಮಹಿಳಾ ದಿನಾಚರಣೆ

03:59 PM Mar 24, 2017 | Team Udayavani |

ಮುಂಬಯಿ: ಬಿಲ್ಲವ ಜಾಗೃತಿ ಬಳಗ ಮುಂಬಯಿ ಇದರ ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯು ಮಾ. 8 ರಂದು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.

Advertisement

ವಿರಾರ್‌ನಲ್ಲಿರುವ ಬಾಬಾ ಭಾಸ್ಕರ್‌ ಪವರ್‌ ನಿರ್ಮಿತ ಅನಾಥಾಶ್ರಮ ಮತ್ತು ವೃದ್ಧಾಶ್ರಮಕ್ಕೆ ಭೇಟಿ ನೀಡಿ ಆಶ್ರಮ ವಾಸಿಗಳಿಗೆ  ತಿಂಡಿ, ತಿನಸು, ವಸ್ತ್ರ ಮತ್ತು ದಿನೋಪಯೋಗಿ ವಸ್ತುಗಳನ್ನು ವಿತರಿಸಿ, ಆನಾಥಶ್ರಮದ ಸದಸ್ಯರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. 

ನಿವೃತ್ತ ಸೇನಾಧಿಕಾರಿಯೊಬ್ಬರು ಈ ಅನಾಥಶ್ರಮವನ್ನು ಸ್ಥಾಪಿಸಿ, ಅಸಹಾಯಕರಿಗೆ ನೆರವಾಗಿದ್ದು, ಇದೀಗ ಬಾಬಾ ಭಾಸ್ಕರ್‌ ಪವರ್‌ ನಿಧನ ಹೊಂದಿದ್ದು, ಅವರ ಪುತ್ರ ಆಶ್ರಮವನ್ನು ನಡೆಸುತ್ತಿದ್ದಾರೆ.

ವಿರಾರ್‌ ವೃದ್ಧಾಶ್ರಮದ ಸದಸ್ಯರನ್ನು ಮುಂದಿನ ವರ್ಷ ವನ ವಿಹಾರಕ್ಕೆ ಕರೆದೊಯ್ಯುವ ಸಂಪೂರ್ಣ ವೆಚ್ಚವನ್ನು ಬಿಲ್ಲವ ಜಾಗೃತಿ ಬಳಗದ ಮಹಿಳಾ ವಿಭಾಗದ ಸದಸ್ಯೆಯರು ಭರಿಸುವುದಾಗಿ ಇದೇ ಸಂದರ್ಭದಲ್ಲಿ ತಿಳಿಸಿದರು. ಕಳೆದ ಡಿಸೆಂಬರ್‌ನಲ್ಲಿ ಬಿಲ್ಲವ  ಜಾಗೃತಿ ಬಳಗದ ಮಹಿಳಾ ವಿಭಾಗದ ಸದಸ್ಯೆಯರು ಪರೇಲ್‌ನಲ್ಲಿರುವ ನಾನಾ ಪಾಲ್ಕರ್‌ ಸಮಿತಿ ಸಂಸ್ಥೆಗೆ ಭೇಡಿ ನೀಡಿ ಸಹಕರಿಸಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾರದಾ ಕರ್ಕೇರ, ಕಾರ್ಯದರ್ಶಿ ಯಶೋದಾ ಎನ್‌. ಪೂಜಾರಿ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯೆಯರು ವೈಯಕ್ತಿಯ ದೇಣಿಗೆ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next