Advertisement

ಬಿಹಾರದಲ್ಲಿ ಮಹಾಘಟಬಂಧನ್ ಗೆ ‘ಜೈ’ ಎಂದ ಜನತೆ ?: ಚುನಾವಣೋತ್ತರ ಸಮೀಕ್ಷೆ ಪ್ರಕಟ

08:15 PM Nov 07, 2020 | Mithun PG |

ಬಿಹಾರ: ತೀವ್ರ ಕುತೂಹಲಕ್ಕೆ ಎಡೆಮಾಡಿದ್ದ ಬಿಹಾರ ವಿಧಾನ ಸಭೆ ಚುನಾವಣೆಯ ಅಂತಿಮ ಹಂತದ ಮತದಾನಕ್ಕೆ ಶನಿವಾರ (ನ.7) ತೆರೆಬಿದ್ದಿದ್ದು, ಚುನಾವಣೋತ್ತರ ಸಮೀಕ್ಷೆಗಳ ಭರಾಟೆ ಆರಂಭವಾಗಿದೆ.

Advertisement

ಸಮೀಕ್ಷೆಗಳ ಪ್ರಕಾರ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್, 124 ಸೀಟುಗಳಲ್ಲಿ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದು, ಬಹುಮತಕ್ಕೆ ಕೆಲವೇ ಅಂತರವನ್ನು ಹೊಂದಿದೆ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟ 110 ಸೀಟುಗಳಲ್ಲಿ ಮಾತ್ರ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದರ ಪ್ರಕಾರ ಬಿಹಾರದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕುವ ಸಾಧ್ಯತೆ ಇಲ್ಲವಾಗಿದ್ದು, ಅತಂತ್ರ ವಿಧಾನಸಭೆ ಸೃಷ್ಟಿಯಾಗುವುದು ದಟ್ಟವಾಗಿದೆ.

ಸುಮಾರು 44% ಮಂದಿ ತೇಜಸ್ವಿಯಾದವ್ ಮುಖ್ಯಮಂತ್ರಿಯಾಗಬೇಕೆಂದು ಬಯಸಿದರೇ, ಶೇ 35% ಮಾತ್ರ ಹಾಲಿ ಸಿಎಂ ನಿತೀಶ್ ಕುಮಾರ್ ಪರವಾಗಿ ಮತ ಚಲಾಯಿಸಿದ್ದಾರೆಂದು ಸಮೀಕ್ಷೆ ತಿಳಿಸಿದೆ.

ಟೈಮ್ಸ್ ನೌ ಸಮೀಕ್ಷೆ ಪ್ರಕಾರ  ಎನ್ ಡಿಎ-116, ಮಹಾಘಟಬಂಧನ್- 120, ಚಿರಾಗ್ ಪಾಸ್ವಾನ್ ಅವರ ಎಲ್ ಜೆಪಿಗೆ ಕೇವಲ 1 ಸ್ಥಾನ  ದೊರಕಲಿದೆ.

ಟುಡೇಯ್ಸ್ ಚಾಣಕ್ಯ ಸಮೀಕ್ಷೆ ಪ್ರಕಾರ  ಆರ್‌ಜೆಡಿ ನೇತೃತ್ವದಲ್ಲಿ ಮಹಾಘಟಬಂಧನ್ 108 -131, ಜೆಡಿಯು ನೇತೃತ್ವದ ಎನ್‌ಡಿಎ 104 – 128, ಇತರರು: 4-8

Advertisement

ಇಂಡಿಯಾ ಟಿವಿ-ಸಿ ವೋಟರ್ ಸಮೀಕ್ಷೆ: ಜೆಡಿಯು-ಬಿಜೆಪಿ ಮೈತ್ರಿಕೂಟ – 116, ಮಹಾಘಟಬಂಧನ್ – 120, ಎಲ್ ಜೆಪಿ – 1, ಇತರೆ – 6

ಜನ್ ಕಿ ಬಾತ್ (ರಿಪಬ್ಲಿಕ್): ಎನ್ ಡಿಎ ಮೈತ್ರಿಕೂಟ 91-117, ಮಹಾಘಟಬಂಧನ್ 118-138, ಎಲ್ ಜೆಪಿ 5-8, ಇತರೆ 3-6

ಈಗಾಗಲೇ ಬಿಹಾರ ವಿಧಾನಸಭೆಗೆ ಮೂರು ಹಂತಗಳಲ್ಲಿ ಮತದಾನ ನಡೆದಿದ್ದು, ನವೆಂಬರ್ 10 ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಹಾರ ವಿಧಾನಸಭೆ 243 ಸದಸ್ಯ ಬಲ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next