ಬಿಗ್ ಬಾಸ್ ಆಟ ಫಿನಾಲೆದತ್ತ ಮುಖ ಮಾಡುತ್ತಿದೆ. ಸ್ಪರ್ಧಿಗಳ ನಡುವಿನ ಪೈಪೋಟಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಫಿನಾಲೆಗೆ ಹೋಗುವ ಮೊದಲ ಸ್ಪರ್ಧಿಯ ಹೆಸರು ರಿವೀಲ್ ಆಗಿದೆ.
ಬಿಗ್ ಬಾಸ್ ತಮಿಳು -8 (Bigg Boss Tamil Season 8)ರಲ್ಲಿ ಕಳೆದ ಎರಡು ವಾರದಿಂದ ಡಬಲ್ ಎಲಿಮಿನೇಷನ್ ನಡೆದಿದೆ. ಕಳೆದ ವಾರ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಎಂಟ್ರಿ ಕೊಟ್ಟಿದ್ದ ಮಂಜರಿ (Manjari) ಮತ್ತು ರಾಣವ್ (Raanav) ಅವರು ಎಲಿಮಿನೇಟ್ ಆಗಿದ್ದಾರೆ. ಆ ಮೂಲಕ ವೀಕ್ಷಕರಿಗೆ ಬಿಗ್ ಬಾಸ್ ಶಾಕ್ ನೀಡಿದ್ದಾರೆ.
ಈ ನಡುವೆ ಫಿನಾಲೆ ಟಿಕೆಟ್ ಪಡೆಯುವ ಟಾಸ್ಕ್ ನಡೆದಿದ್ದು, ಇದರಲ್ಲಿ ಒಬ್ಬ ಸ್ಪರ್ಧಿ ಟಾಸ್ಕ್ ಗೆದ್ದು ನೇರವಾಗಿ ಫಿನಾಲೆಗೆ ಪ್ರವೇಶ ಪಡೆದಿದ್ದಾರೆ.
ʼʼಟಿಕೆಟ್ ಟು ಫಿನಾಲೆ” ಎನ್ನುವ ಟಾಸ್ಕ್ನಲ್ಲಿ ಮನೆಮಂದಿ ಭಾಗಿಯಾಗಿದ್ದಾರೆ. ಇದರಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಪ್ರವೇಶ ಪಡೆದಿರುವ ರಾಯನ್ ಅವರು ಗೆದ್ದಿದ್ದಾರೆ. ಅವರಿಗೆ ವಿಜಯ್ ಸೇತುಪತಿ ಅವರು ದೊಡ್ಮನೆಯೊಳಗೆ ಬಂದು ಫಿನಾಲೆ ಟಿಕೆಟ್ ನೀಡುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.
ಇಬ್ಬರು ಎಲಿಮಿನೇಟ್ ಆದ ಬಳಿಕ ನೇರವಾಗಿ ಒಬ್ಬರು ಫಿನಾಲೆಗೆ ಎಂಟ್ರಿಯಾಗಿದ್ದಾರೆ. ಆ ಮೂಲಕ ಬಿಗ್ ಬಾಸ್ ಆಟ ರೋಚಕ ಘಟಕ್ಕೆ ತಲುಪಿದೆ.
ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ತಮಿಳು ಫೈನಲ್ ನಡೆಯಲಿದೆ.