ಬೆಂಗಳೂರು: ಕಿಚ್ಚ ಸುದೀಪ್ (Kiccha Sudeep) ಬಿಗ್ ಬಾಸ್ ಕನ್ನಡ -11 (Bigg Boss Kannada-11) ಸ್ಪರ್ಧಿಗಳ ಪೈಕಿ ಮೊದಲ ಸ್ಪರ್ಧಿಯನ್ನು ರಿವೀಲ್ ಮಾಡಲಾಗಿದೆ.
ʼರಾಜಾ ರಾಣಿʼ ಗ್ರ್ಯಾಂಡ್ ಪಿನಾಲೆ ವೇಳೆ ಬಿಗ್ ಬಾಸ್ ಮನೆಗೆ ಹೋಗುವ ಮೊದಲ ಸ್ಪರ್ಧಿಯನ್ನು ರಿವೀಲ್ ಮಾಡಿ ವೋಟಿಂಗ್ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..
ʼಸತ್ಯʼ ಧಾರಾವಾಹಿ ಖ್ಯಾತಿ ಗೌತಮಿ ಜಾಧವ್ ಅವರು ಬಿಗ್ ಬಾಸ್ ಮನೆಯ ಮೊದಲ ಸ್ಪರ್ಧಿ ಆಗಿದ್ದಾರೆ. ಅವರು ಸ್ವರ್ಗಕ್ಕೆ ಹೋಗಲಿದ್ದಾರಾ ಅಥವಾ ನರಕಕ್ಕಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
2ನೇ ಸ್ಪರ್ಧಿ ಇವರೇ ನೋಡಿ..
ಬಿಗ್ ಬಾಸ್ ಮನೆಗೆ ಎರಡನೇ ಸ್ಪರ್ಧಿಯಾಗಿ ಲಾಯರ್ ಜಗದೀಶ್ ಎಂಟ್ರಿ ಆಗಿದ್ದಾರೆ. ಅವರನ್ನು ಪ್ರೇಕ್ಷಕರು ವೋಟ್ ಮಾಡಿ ʼಸ್ವರ್ಗ ಅಥವಾ ನರಕಕ್ಕೆ ಕಳುಹಿಸಬಹುದಾಗಿದೆ.
ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಹೇಳಿಕೆಗಳಿಂದಲೇ ಸುದ್ದಿ ಆಗಿರುವ ಜಗದೀಶ್ ಅವರು, ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದರು. ಕರ್ನಾಟಕದ ಪ್ರಮುಖ ಸಚಿವರೊಬ್ಬರ ಲೈಂಗಿಕ ಪ್ರಕರಣ, ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸ್ಪೋಟಕ ಮಾಹಿತಿ ಹಂಚಿಕೊಂಡು ಅವರು ಸುದ್ದಿಯಾಗಿದ್ದರು. ಇದಲ್ಲದೆ ಅನೇಕ ದಾಖಲೆಗಳ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇದಲ್ಲದೆ ವಿವಾದದಿಂದಲೂ ಸುದ್ದಿಯಾಗಿರುವ ಅವರನ್ನು ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲಾಗಿತ್ತು. ಇತ್ತೀಚೆಗೆ ಮುಖ್ಯ ಪೇದೆಯೊಬ್ಬರ ಜತೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿದೆ.
ಜಗದೀಶ್ ಹೇಳಿದ್ದೇನು..
ಎಲ್ಲೆಲ್ಲಿ ನ್ಯಾಯ ಮರೆಯಾಗುತ್ತದೆ ಅಲ್ಲಿ ನ್ಯಾಯವನ್ನು ಉಳಿಸೋಕೆ ನಾನು ಬಂದೇ ಬರುತ್ತೇನೆ. ನಾನು ಈ ವಕೀಲ ವೃತ್ತಿಯನ್ನು 10-12 ವರ್ಷದಿಂದ ಮಾಡುತ್ತಿದ್ದೇನೆ. ಆ ನ್ಯಾಯವನ್ನು ಯಾರಿಗೆ ಧ್ವನಿ ಇರಲ್ವೋ ಅವರಿಗೆ ಹುಡಕಿಕೊಡುವುದೇ ನನ್ನ ಕೆಲಸ. ಆ ನ್ಯಾಯವನ್ನು ಉಳಿಸೋಕೆ ನಾನು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತೇನೆ ಒಂದು ಸಲಿ ನಾನು ಏನಾದರೂ ಡಿಸೈಡ್ ಮಾಡಿದರೆ ನನ್ನ ಮಾತನ್ನು ನಾನೇ ಕೇಳಲ್ಲ. ಕರ್ನಾಟಕದಲ್ಲಿ ನಾನೇ ಎಂದ ರಾಜಕರಣಿಗಳಿಗಿರಬಹದು. ನಾನೇ ಅಂದ ಪೊಲೀಸ್ ಅಧಿಕಾರಿಗಳು ಆಗಿರಬಹುದು ಗೊಂಡಾಗಳು ಆಗಿರಬಹುದು ಅವರನ್ನು ಅವರ ಯೋಗ್ಯತೆಯನ್ನು ತೋರಿಸಿಕೊಟ್ಟಿದ್ದೀನಿ. ದೊಡ್ಡ ಲೈಂಗಿಕ ದೌರ್ಜನ್ಯ ಕೇಸ್. ಆ ಕೇಸ್ ನ್ನು ಹ್ಯಾಂಡಲ್ ಮಾಡಿದಾಗ ನನಗೆ ಎಲ್ಲ ಹೇಳಿದ್ರು ನೀನು ಇದನ್ನು ಮುಗಿಸುತ್ತೀಯ ಅಂಥ. ಆ ಮಿನಿಸ್ಟರು ನನ್ನಲ್ಲ ನನ್ನಲ್ಲ ಅಂಥ ಮೊದಲು ಹೇಳಿದ್ದ. ಆದರೆ ನಂತ್ರ ನಾನೇ ನಾನೇ ಎಂದ. ನನಗೆ ಗೊತ್ತಿರುವುದು ಈ ದೇಶದ ಸಂವಿಧಾನ, ಕಾನೂನು ಅದನ್ನು ಹೇಗೆ ಪ್ರಹಾರ ಮಾಡಬೇಕು ಬ್ರಹಾಸ್ತ್ರ ಅನ್ನೋದು ನನಗೆ ಗೊತ್ತಿದೆ. ನನ್ನ ಸ್ಟೋರಿ ಜೀರೋಯಿಂದ ಹೀರೋವರೆಗೆ ಹೋಗಿದೆ. ನನ್ನ ಜೀವನ ತುಂಬಾ ಸಿಂಪಲ್ ಎಂದು ಜಗದೀಶ್ ಪ್ರೋಮೊದಲ್ಲಿ ಹೇಳಿದ್ದಾರೆ.
ನನ್ನ ಬಳಗ ನನ್ನ ಮೊಬೈಲ್. ಹೆಣ್ಣು ಮಕ್ಕಳು ಫ್ರೀಯಾಗಿ ಓಡಾಡಬೇಕು ಯಾರೂ ಕೂಡ ಅವರನ್ನ ರೇಗಿಸಬಾರದು. ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು ಎನ್ನುವುದೇ ನನ್ನ ಕನಸು. ಒಂದು ದಿನ ನಾನು ಸಿಎಂ ಆಗುತ್ತೇನೆ ಎಂದಿದ್ದಾರೆ.