Advertisement

Bigg Boss Season-10: ಬಿಗ್‌ಬಾಸ್‌ ಲೆಕ್ಕಾಚಾರ ಶುರು ಸೀಸನ್‌-10 ಸುತ್ತ ಎಲ್ಲರ ಚಿತ್ತ

04:01 PM Aug 21, 2023 | Team Udayavani |

ಕನ್ನಡ ಕಿರುತೆರೆಯಲ್ಲಿ ಜನಪ್ರಿಯವಾಗಿರುವ ಒಂದು ಕಾರ್ಯಕ್ರಮವೆಂದರೆ ಅದು ಬಿಗ್‌ಬಾಸ್‌. ಖಾಸಗಿ ವಾಹಿನಿಯಲ್ಲಿ ಕಳೆದ 9 ಸೀಸನ್‌ಗಳನ್ನು ಯಶಸ್ವಿಯಾಗಿ ಪೂರೈಸಿರುವ ಈ ಕಾರ್ಯಕ್ರಮದ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಹೌದು, ಬಿಗ್‌ಬಾಸ್‌ 10ನೇ ಸೀಸನ್‌ನ ತಯಾರಿ ತೆರೆಮರೆಯಲ್ಲಿ ಜೋರಾಗಿ ನಡೆಯುತ್ತಿದೆ. ಸೆಪ್ಟೆಂಬರ್‌ ಅಂತ್ಯದಿಂದ ಕನ್ನಡ ಬಿಗ್‌ಬಾಸ್‌ನ 10ನೇ ಆವೃತ್ತಿ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾದರೆ ಈ ಬಾರಿ ಯಾರ್ಯಾರು ಸ್ಪರ್ಧಿಗಳಾಗುತ್ತಾರೆ ಎಂಬ ಕುತೂಹಲವೂ ಹುಟ್ಟಿಕೊಂಡಿದೆ. ಈ ಕುತೂಹಲಕ್ಕೆ ಉತ್ತರವಾಗಿ ಒಂದಷ್ಟು ಹೆಸರುಗಳು ಓಡಾಡುತ್ತಿವೆ. ಕಿರುತೆರೆ ಧಾರಾವಾಹಿ ಮಂದಿಯಿಂದ ಹಿಡಿದು ಕಾಂಟ್ರಾವರ್ಸಿ ಮೂಲಕ ಅಥವಾ ತಮ್ಮ “ಮಾತಿನ ಕೌಶಲ್ಯ’ದಿಂದ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡಿದ ಅನೇಕರ ಹೆಸರುಗಳು ಈ ಬಾರಿಯೂ ಕೇಳಿಬರುತ್ತಿದೆ.

Advertisement

ಇನ್ನು, ಸತತ 9 ಸೀಸನ್‌ಗಳನ್ನು ಯಶಸ್ವಿಯಾಗಿ ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಕಿಚ್ಚ ಸುದೀಪ್‌ ಸದ್ಯ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಬೆಂಗಳೂರು ಬಿಟ್ಟು, ಹೊರಗಿನ ಚಿತ್ರೀಕರಣವನ್ನು ಮುಗಿಸಿಕೊಳ್ಳುತ್ತಿರುವ ಸುದೀಪ್‌ ಆ ನಂತರ ಬಿಗ್‌ಬಾಸ್‌ನತ್ತ ಮುಖ ಮಾಡಲಿದ್ದಾರೆ.

ಸೀರಿಯಲ್‌ಗಳಿಗೆ ಕೋಕ್‌:  ಬಿಗ್‌ಬಾಸ್‌ ಪ್ರಸಾರವಾಗಲು ಆರಂಭವಾದ ನಂತರ ಒಂದಷ್ಟು ಧಾರಾವಾಹಿಗಳು ನಿಂತು ಹೋಗಲಿವೆ. ಸದ್ಯ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಯಾವ ಧಾರಾವಾಹಿಗೆ ಕೋಕ್‌ ಕೊಡಲಾಗುತ್ತದೆ ಎಂಬ ಲೆಕ್ಕಾಚಾರಗಳು ಕೂಡಾ ಕಿರುತೆರೆ ವೀಕ್ಷಕರ ಪಾಳಯದಲ್ಲಿ ನಡೆಯುತ್ತಿದೆ.

 

Advertisement

Udayavani is now on Telegram. Click here to join our channel and stay updated with the latest news.

Next