Advertisement

BBK11: ಸ್ಪರ್ಧಿಗಳ ಆಯ್ಕೆಗೆ ವೋಟಿಂಗ್‌ To ಫೇಸ್‌ ರಿವೀಲ್; ಹೇಗಿರಲಿದೆ ಈ ಬಾರಿ ಬಿಗ್‌ಬಾಸ್?

05:28 PM Sep 23, 2024 | Team Udayavani |

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ (Bigg Boss Kannada-11) ಆರಂಭಕ್ಕೆ ದಿನ ನಿಗದಿಯಾದ ಹಿನ್ನೆಲೆಯಲ್ಲಿ ʼಬಿಗ್‌ ಬಾಸ್ʼ ಮಹತ್ವದ ಸುದ್ದಿಗೋಷ್ಠಿ ನಡೆಸಿದೆ.

Advertisement

ಕಿಚ್ಚ ಸುದೀಪ್‌ ಅವರು ಮಾತನಾಡಿ, ಪ್ರತಿ ಬಾರಿ ಹೊಸ ಸ್ಪರ್ಧಿಗಳು ಬಂದಾಗ, ಹೊಸ ವ್ಯಕ್ತಿತ್ವಗಳು ಒಳಗೆ ಬರುತ್ತವೆ. ಹೊಸ ವ್ಯಕ್ತಿತ್ವಗಳು ಒಳಗೆ ಬಂದಾಗ ಅವರಿಗೆ ನೀವು ಒಂದೇ ವಿಷಯವನ್ನು ಕೊಟ್ಟರೆ ಅವರು ಹ್ಯಾಂಡಲ್‌ ಮಾಡುವ ರೀತಿ ಬೇರೆ ಆಗಿರುತ್ತದೆ. ಬಿಗ್‌ ಬಾಸ್‌ ತಂಡದ ಮೇಲೆ ದೊಡ್ಡ ಜವಬ್ದಾರಿಯಿದೆ ಎಂದು ಕಿಚ್ಚ ಹೇಳಿದ್ದಾರೆ.

ಸ್ವರ್ಗ – ನರಕ.. ಮೊದಲಿನಿಂದಲೂ ಇರಲಿದೆ ಎರಡು ತಂಡ: ಈ ಬಾರಿ ಸ್ವರ್ಗ – ನರಕ ಎನ್ನುವ ಥೀಮ್‌ ಬಗ್ಗೆ ಮಾತನಾಡಿದ ಅವರು, “ನಾವು ಹೀಗೆ ಮಾಡದೆ ಇದ್ರೆ ಮನೆಗೆ ಹೋದ ಕೂಡಲೇ ಎರಡು ಟೀಮ್‌ ಆಗಿ ಎಲ್ಲರೂ ಕಿತ್ತಾಡಿಕೊಳ್ಳುತ್ತಾರೆ. ಬರೀ ಸ್ವರ್ಗವನ್ನೇ ತೋರಿಸಿದರೆ ನೀವು ನೋಡುತ್ತೀರಾ? ಅದಕ್ಕೆ ಈ ಬಾರಿ ಮೊದಲಿನಿಂದಲೇ ಎರಡು ಟೀಮ್‌ ಇರುತ್ತದೆ. ಮೊದಲಿನಿಂದಲೇ ಸ್ವರ್ಗ – ನರಕದ ಕಾನ್ಸೆಪ್ಟ್‌ ಇರುವುದರಿಂದ ಇದು ಅಷ್ಟು ಸುಲಭವಾಗಿರಲ್ಲ ಎಂದು ಕಿಚ್ಚ ಹೇಳಿದ್ದಾರೆ. ‌

Advertisement

ಮೊದಲೇ ರಿವೀಲ್‌ ಆಗಲಿದೆ ಸ್ಪರ್ಧಿಗಳ ಹೆಸರು..  ಈ ಸಲ ಏನೆಲ್ಲಾ ಹೊಸತನ್ನು ಪ್ರೇಕ್ಷಕರು ನಿರೀಕ್ಷೆ ಮಾಡಬಹುದು ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಆಯೋಜಕರು, ಸ್ವರ್ಗ – ನರಕ ಎಂಬ ಕಾನ್ಸೆಪ್ಟ್‌  ಇರುವುದು ಗೊತ್ತೇ ಇದೆ. ಇದು ಬಿಟ್ಟು ಈ ಬಾರಿ ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡಲಿದ್ದೇವೆ. ʼರಾಜಾರಾಣಿʼ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್‌ ಮಾಡುತ್ತೇವೆ. ಸ್ಪರ್ಧಿಗಳ ವಿಚಾರಕ್ಕೆ ಬಂದರೆ ಈ ಬಾರಿ ಕಳೆದ ಬಾರಿಗಿಂತ ಭಿನ್ನವಾದ ಸ್ಪರ್ಧಿಗಳು ಇರಲಿದ್ದಾರೆ ಎಂದು ಹೇಳಿದ್ದಾರೆ.

ವೋಟಿಂಗ್‌ ಮೂಲಕ ಸ್ಪರ್ಧಿಗಳ ಆಯ್ಕೆ: ಶನಿವಾರ ಸಂಜೆ ʼರಾಜಾರಾಣಿʼ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರುಗಳು ರಿವೀಲ್‌ ಆಗಲಿದೆ. ಈ ಸಂದರ್ಭದಲ್ಲಿ ಪ್ರೇಕ್ಷಕರಿಗೆ ವೋಟ್‌ ಮಾಡುವ ಅವಕಾಶವಿರುತ್ತದೆ. ವೋಟಿನ ಆಧಾರದಲ್ಲಿ ಹೆಚ್ಚು ವೋಟ್‌ ಬಂದ ಸ್ಪರ್ಧಿಗಳನ್ನು ನಮ್ಮ ತಂಡ ಆಯ್ಕೆ ಮಾಡಲಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಕಿಚ್ಚ: ಈ ಬಾರಿ ಶೋವನ್ನು ಕಿಚ್ಚ ಅವರು ನಿರೂಪಣೆ ಮಾಡುತ್ತಾರೋ ಇಲ್ವೋ ಎನ್ನುವುದರ ಬಗ್ಗೆ ಪ್ರಶ್ನೆ ಇತ್ತು. ನಿಮ್ಮ ಮನಸ್ಸಿನಲ್ಲಿ ಶೋ ನಡೆಸಬೇಕೋ ಬೇಡ್ವೋ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, “ಇತ್ತು. ಗಿಮಿಕ್‌ ಮಾಡಿ ನಾನೇನು ಪ್ರೋಮೋ ಮಾಡಬೇಕಾಗಿಲ್ಲ. ಗಿಮಿಕ್‌ ಮಾಡಿಕೊಂಡು ಹೋಗುವವನು ನಾನಲ್ಲ. ಓಪನ್‌ ಆಗಿ ಈ ಬಗ್ಗೆ ನಾನು ಅವರ ಬಳಿ ಹೇಳಿದ್ದೆ. ಬಿಗ್‌ ಬಾಸ್‌ ಒಂದು ಸುಂದರ ವೇದಿಕೆ. ಇದನ್ನು ಜನ ಪ್ರೀತಿಯಿಂದ ನೋಡುತ್ತಾರೆ. ಆದರೆ ಶೋ ಶುರುವಾದ ಬಳಿಕ ನನ್ನ ಲೈಫ್‌ ಸ್ವಲ್ಪ ಮ್ಯೂಟ್‌ ಆಗುತ್ತದೆ. ವಾರಾಂತ್ಯದಲ್ಲಿ ನಾನು ಎಲ್ಲೇ ಇದ್ರು ನಾನು ಸ್ಟುಡಿಯೋಗೆ ಓಡಿ ಬರಬೇಕು. ಹೀಗಾಗಿ ನಾನು ಅವರ ಬಳಿ ನೀವು ಬೇರೆಯವರನ್ನು ನೋಡಿ ಎಂದು ಹೇಳಿದ್ದು ನಿಜ. ಹೀಗೆ ಹೇಳಿದ ಮೇಲೆ ನನ್ನ ಮನೆಗೆ ಕಲರ್ಸ್‌ ನಲ್ಲಿನ ಎಲ್ಲರೂ ಒಪ್ಪಿಸೋಕೆ ಬಂದಿದ್ದರು ಎಂದು ಹೇಳಿದರು.

ಮನೆ ಕೂಡ ಸ್ವರ್ಗ – ನರಕದ ಕಾನ್ಸೆಪ್ಟ್‌ ಆಗಿಯೇ ಇರುತ್ತದೆ ಎಂದು ಕಿಚ್ಚ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ಮೊದಲ ದಿನದ  ಕಾರ್ಯಕ್ರಮ ಶೂಟಿಂಗ್‌ ವರೆಗೆ ನಾನು ಸ್ಪರ್ಧಿಗಳ ಹೆಸರನ್ನು ನನ್ನ ಬಳಿ ಹೇಳಬೇಡಿ ಎಂದು ಆಯೋಜಕರ ಬಳಿ ಹೇಳುತ್ತೇನೆ ಎಂದು ಕಿಚ್ಚ ಹೇಳಿದ್ದಾರೆ.

ಓಟಿಟಿ ಸೀಸನ್‌ ಮಾಡುವ ಯಾವುದೇ ಯೋಜನೆ ಸದ್ಯಕ್ಕಿಲ್ಲ. ಆದರೆ ಕೆಲ ಸಮಯದ ಬಳಿ ಮಿನಿ ಸೀಸನ್‌ ನಡೆಸುವ ಯೋಜನೆಯಿದೆ ಎಂದು ಪ್ರೋಗ್ರಾಂ ಹೆಡ್‌ ಪ್ರಶಾಂತ್‌ ಹೇಳಿದ್ದಾರೆ.

ಮೂರು ಹ್ಯಾಷ್‌ ಟ್ಯಾಗ್‌ ರಿವೀಲ್..‌: ಈ ಸಂದರ್ಭದಲ್ಲಿ ಈ ಬಾರಿಯ ಮೂರು ಹೊಸ ಹ್ಯಾಷ್‌ ಟ್ಯಾಗ್‌ ಗಳನ್ನು ರಿವೀಲ್‌ ಮಾಡಲಾಯಿತು. #ಕಲರ್ಸ್‌ ಕನ್ನಡ, #ಬಿಬಿಕೆ11, #ಹೊಸಅಧ್ಯಾಯ ಎನ್ನುವ ಹ್ಯಾಷ್‌ ಟ್ಯಾಗ್‌ ಗಳನ್ನು ರಿವೀಲ್‌ ಮಾಡಲಾಯಿತು.

ಇದೇ ಸೆ.29ರಿಂದ ಬಿಗ್‌ ಬಾಸ್‌ ಶೋ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next