Advertisement
ಕ್ಯಾಪ್ಟನ್ ಶಿಶಿರ್ ಅವರು ಮನೆಯವರ ಪೈಕಿ ಹಂಸಾ, ಧನರಾಜ್ ಮತ್ತು ಜಗದೀಶ್, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ,ಚೈತ್ರಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ಇದಲ್ಲದೆ ಅನುಷಾ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ.
Related Articles
Advertisement
ಆರಾಮವಾಗಿ ಕೂತಿದ್ದ ಜಗದೀಶ್ ಅವರ ಬಳಿ ಮಂಜು ಬಂದು ಪ್ರಚೋದಿಸಿದ್ದಾರೆ. ಇದಕ್ಕೆ ಜಗದೀಶ್ ಮಂಜ ನಿನ್ನ ಲಿಮಿಟ್ ಅಲ್ಲಿ ಇರು. ನಾನು ತಾಳ್ಮೆ ಕಳೆದುಕೊಂಡರೆ ಚೆನ್ನಾಗಿರಲ್ಲ ಎಂದು ಹೇಳಿ ಹೋಗಲೀ, ಬಾರಲೋ ಎನ್ನುವಷ್ಟ ಮಟ್ಟಿಗೆ ಪರಿಸ್ಥಿತಿ ಮತ್ತೆ ವಿಕೋಪಕ್ಕೆ ತಿರುಗಿದೆ.
ಬಿಗ್ ಬಾಸ್ ನಲ್ಲಿ ನೀವು ಕಪ್ ಗೆಲ್ಲಬಹುದು. ಆದರೆ ಜನಗಳ ಮನಸ್ಸು ಗೆಲ್ಲೋದು ನಾನೇ ಎಂದು ಸಹ ಸ್ಪರ್ಧಿಗಳ ಮುಂದೆ ಜಗದೀಶ್ ಹೇಳಿದ್ದಾರೆ.
ಚೈತ್ರಾನಿಗೆ ಕರೆ ಮಾಡಿದ ಬಿಗ್ ಬಾಸ್:ಬಿಗ್ ಬಾಸ್ ಚೈತ್ರಾ ಅವರಿಗೆ ಟಾಸ್ಕ್ ವೊಂದನ್ನು ನೀಡಿದ್ದು, ಮನೆಯ ದಿನಸಿ ಸೌಲಭ್ಯ ಬೇಕಾದರೆ ನಾನು ಹೇಳಿದಂತೆ ಮಾಡಬೇಕು. ನಾಲ್ವರ ಮಹಿಳಾ ಸ್ಪರ್ಧಿಗಳ ಪೈಕಿ ಯಾರು ಸಂಕಟ ಅನುಭವಿಸಲು ಅರ್ಹರೆಂದು ಹೇಳಿ ಅವರ ಮೇಕಪ್ ಸಾಮಾನುಗಳನ್ನು ತರಬೇಕೆಂದು ಹೇಳಿದ್ದಾರೆ.ಇದಕ್ಕೆ ಚೈತ್ರಾ ಅವರು, ಭವ್ಯಾ, ಮೋಕ್ಷಿತಾ ಅವರ ಹೆಸರನ್ನು ಹೇಳಿದ್ದು, ಇಬ್ಬರ ಮೇಕಪ್ ಕಿಟ್ ಗಳನ್ನು ಸ್ಟೋರ್ ರೂಮ್ ನಲ್ಲಿಟ್ಟಿದ್ದಾರೆ. ತಿವಿಕ್ರಮ್ ಅವರಿಗೆ ಕರೆ ಮಾಡಿದ ಬಿಗ್ ಬಾಸ್, ದಿನಸಿ ಸಾಮಾನಿನ ಎರಡನೇ ಕಂತಿಗಾಗಿ ಈ ಮನೆಯಲ್ಲಿ ಇರಲು ಯೋಗ್ಯತೆ ಇಲ್ಲದವರ ಇಬ್ಬರ ಹೆಸರನ್ನು ಹೇಳುವಂತೆ ಹೇಳಿದ್ದು, ತಿವಿಕ್ರಮ್ ಐಶ್ವರ್ಯಾ ಹಾಗೂ ಮೋಕ್ಷಿತಾ ಅವರ ಹೆಸರನ್ನು ಹೇಳಿ ಅವರ ಲಗೇಜ್ ಗಳನ್ನು ಸ್ಟೋರ್ ರೂಮ್ ನಲ್ಲಿಟ್ಟಿದ್ದಾರೆ. ಬಿಗ್ ಬಾಸ್ ನಿಂದ ಶಿಕ್ಷೆ:
ವ್ಯಾಯಾಮ ನಡೆಸುವಾಗ ಮೈಕ್ ಧರಿಸದೆ ಇದ್ದ ಭವ್ಯಾ, ಅನುಷಾ ಅವರ ತಪ್ಪಿಗೆ ಇಡೀ ಮನೆಯ ಸದಸ್ಯರಿಗೆ ಮುಂದಿನ ಆದೇಶದವರೆಗೂ ಜಿಮ್ ಬಳಸುವಂತಿಲ್ಲ ಹಾಗೂ ಬೆಡ್ ಬಳಸುವಂತಿಲ್ಲ ಎನ್ನುವ ಶಿಕ್ಷೆಯನ್ನು ನೀಡಿದ್ದಾರೆ. ಪತ್ನಿ, ಮಗಳ ಜೊತೆ ಮಾತನಾಡಿದ ಧನರಾಜ್:
ಸಣ್ಣ ಮಗುವನ್ನು ಬಿಟ್ಟು ಬಿಗ್ ಬಾಸ್ ಮನೆಗೆ ಬಂದಿರುವ ಧನರಾಜ್ ಅವರಿಗೆ ಬಿಗ್ ಬಾಸ್ ಕರೆ ಮಾಡಿಸಿ ಪತ್ನಿ ಮತ್ತು ಮಗಳ ಧ್ವನಿಯನ್ನು ಕೇಳಿಸಿದ್ದಾರೆ. ಧನರಾಜ್ ಮಗಳ ಧ್ವನಿ ಕೇಳಿ ಕಣ್ಣೀರಿಟ್ಟಿದ್ದಾರೆ. ನನ್ನ ಮಗಳೇ ನನಗೆ ಸ್ಪೂರ್ತಿ, ಇನ್ಮುಂದೆ ಎಲ್ಲರ ಮುಂದೆ ಆಡಿ ತೋರಿಸುತ್ತೇನೆ ಎಂದಿದ್ದಾರೆ. ಕನ್ನಡ ಭಾಷೆ ಬಳಸಿ ಬಿಗ್ ಬಾಸ್ ಸೂಚನೆ:
ಬಿಗ್ ಬಾಸ್ ನಲ್ಲಿ ಕನ್ನಡ ಅಷ್ಟಾಗಿ ಬಳಕೆ ಆಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದ ಹಿನ್ನೆಲೆ ಕನ್ನಡದಲ್ಲೇ ಹೆಚ್ಚು ಮಾತನಾಡಿ, ನಿಮ್ಮನ್ನು ಇಡೀ ಕರ್ನಾಟಕ ಜನತೆ ನೋಡುತ್ತಿದೆ ಎಂದು ಬಿಗ್ ಬಾಸ್ ಎಚ್ಚರಿಕೆ ನೀಡಿದ್ದಾರೆ. ಮಾತಿನ ಭರದಲ್ಲಿ ಅಲ್ಲಲ್ಲಿ ಇಂಗ್ಲಿಷ್ ಪದಗಳು ಬಂದರೆ ಪರವಾಗಿಲ್ಲ ಆದರೆ ಇಡೀ ಮಾತೇ ಇಂಗ್ಲಿಷ್ ನಲ್ಲಿರಬಾರದು. ಇದು ಮೊದಲ ಹಾಗೂ ಕೊನೆಯ ಎಚ್ಚರಿಕೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಹೆಣ್ಮಕ್ಕಳ ಬಗ್ಗೆ ಜಗದೀಶ್ ಮಾತು; ಇಡೀ ಮನೆಯೇ ಗರಂ:
ಹೆಣ್ಮಕ್ಕಳ ಬಗ್ಗೆ ಮಾತನಾಡುವಾಗ ಎಚ್ಚರವೆಂದು ಗೋಲ್ಡ್ ಸುರೇಶ್ ಅವರು ಹೇಳಿದಾಗ, ಜಗದೀಶ್ ಮಾತನಾಡ್ತೀನಿ ನೀನ್ಯಾರೋ ಕೇಳೋಕೆ ಎಂದಿದ್ದಾರೆ. ಈ ವೇಳೆ ಚೈತ್ರಾ ಅವರೊಂದಿಗೂ ಜಗದೀಶ್ ವಾಗ್ವಾದಕ್ಕೆ ಇಳಿದಿದ್ದಾರೆ. ಇತ್ತ ಹಂಸಾ ಅವರು ಇಲ್ಲಿ ಏನೆಲ್ಲ ಹೇಳಿಸಿಕೊಳ್ಳೋಕ್ಕೆ ನಾವು ರೆಡಿಯಿಲ್ಲ. ನಿನ್ನ ಅಪ್ಪನಿಗೆ ಹುಟ್ಟಿದರೆ ಬಾ ಎಂದು ಚೈತ್ರಾ ಸವಾಲು ಎಸೆದಿರುವುದನ್ನು ತೋರಿಸಲಾಗಿದೆ. ಆ ಪದ ಉಪಯೋಗಿಸಿದ್ದೀರಾ ಇಲ್ವಾ? ಎಂದು ಚೈತ್ರಾ ಜಗದೀಶ್ ಗೆ ಪ್ರಶ್ನೆ ಮಾಡಿದ್ದಾರೆ. ತಾಕತ್ತಿದ್ರೆ ಏನೂ ಬೇಕೋ ಅದನ್ನು ಮಾಡ್ಕೋ ಹೋಗು ಎಂದು ಮರು ಪ್ರಶ್ನೆ ಹಾಕಿದ್ದಾರೆ. ಸೀರೆ ಕೊಡ್ತೀನಿ ಹಾಕ್ಕೋ ಎಂದು ಮಾನಸ ಜಗದೀಶ್ ಗೆ ಹೇಳಿದ್ದಾರೆ. ಸೀರೆ ಏನಕ್ಕೆ ಹೆಣ್ಣು ಆಗೋಕ್ಕೂ ಈತನಿಗೆ ಯೋಗ್ಯತೆ ಇಲ್ಲ ಎಂದು ಹಂಸಾ ಗರಂ ಆಗಿರುವುದನ್ನು ತೋರಿಸಲಾಗಿದೆ. ಹೊಡೆದಾಡಿಕೊಂಡ ಪರಿಣಾಮ ಬಿಗ್ ಬಾಸ್ ಮನೆಯಿಂದ ರಂಜಿತ್ – ಜಗದೀಶ್ ಹೊರಗೆ ಹೋಗಿದ್ದಾರೆ ಎನ್ನಲಾಗಿದೆ.