ಆಗಸ್ಟ್ 5ರ ಅಯೋಧ್ಯೆಯ ಕಾರ್ಯಕ್ರಮಕ್ಕೆ ತೆರಳುವೆ
ಸಿಎಂ ಆಗಿರುವುದರಿಂದ ನನಗೆ ತೆರಳಲು ಸಾಧ್ಯ; ರಾಮ ಭಕ್ತರಿಗೆ ಸಾಧ್ಯವೇ?
ಎಂವಿಎ ಸರಕಾರದ ಸ್ಟೀರಿಂಗ್ ವ್ಹೀಲ್ ನನ್ನಲ್ಲಿದೆ
ಶಿವಸೇನೆ ಮುಖವಾಣಿ “ಸಾಮ್ನಾ’ಗೆ ನೀಡಿದ ಸಂದರ್ಶನದಲ್ಲಿ ಪ್ರತಿಪಾದನೆ
ಮುಂಬಯಿ: ಕೋವಿಡ್ ಹಿನ್ನೆಲೆಯಲ್ಲಿ ಆ.5ರಂದು ಅಯೋಧ್ಯೆ ಯಲ್ಲಿ ನಡೆಯಲಿರುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆಯನ್ನು ವೀಡಿಯೋ ಲಿಂಕ್ ಮೂಲಕ ನಡೆಸಬಹುದು. ಹೀಗೆಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಇದರ ಹೊರತಾಗಿಯೂ ತಾವು ಆ ದಿನದ ಕಾರ್ಯ ಕ್ರಮಕ್ಕಾಗಿ ಅಯೋಧ್ಯೆಗೆ ತೆರಳುವುದಾಗಿ ಹೇಳಿದ್ದಾರೆ.
ಶಿವಸೇನೆ ಮುಖ ವಾಣಿ “ಸಾಮ್ನಾ’ಗೆ ನೀಡಿದ ಸಂದರ್ಶನದಲ್ಲಿ ಮಾತ ನಾಡಿದ ಅವರು, “ಅದೊಂದು ಅದ್ಭುತವಾಗಿರುವ ದೇವಸ್ಥಾನ. ಸದ್ಯ ನಾವೆಲ್ಲರೂ ಸೋಂಕನ್ನು ಎದುರಿಸುತ್ತಿದ್ದೇವೆ ಮತ್ತು ಧಾರ್ಮಿಕ ಕಾರ್ಯಕ್ರಮ ಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ. ಮುಖ್ಯಮಂತ್ರಿಯಾಗಿರುವ ನನಗೆ ಅಯೋಧ್ಯೆಗೆ ಹೋಗಲು ಸಾಧ್ಯವಿದೆ. ಆದರೆ ಕಾರ್ಯ ಕ್ರಮದ ಸೊಬಗು ನೋಡಬೇಕೆಂದು ಇಚ್ಛಿಸುವ ಲಕ್ಷಾಂತರ ಮಂದಿ ರಾಮ ಭಕ್ತರಿಗೆ ಅದು ಸಾಧ್ಯ ವಿದೆಯೇ? ಹೀಗಾಗಿ, ಕಾರ್ಯ ಕ್ರಮವನ್ನು ವೀಡಿಯೋ ಲಿಂಕ್ ಕೂಡ ಮಾಡ ಬಹುದು’ ಎಂದು ಸಂದರ್ಶನದಲ್ಲಿ ಸಲಹೆ ನೀಡಿದ್ದಾರೆ.
ನನ್ನಲ್ಲಿಯೇ ಸ್ಟೀರಿಂಗ್ ವ್ಹೀಲ್: ವಿಪಕ್ಷಗಳಿಗೆ ಸಾಧ್ಯವಿದ್ದರೆ ಮಹಾರಾಷ್ಟ್ರ ವಿಕಾಸ್ ಅಘಾಡಿ (ಎಂವಿಎ) ಸರಕಾರ ಪತನ ಗೊಳಿಸಲಿ ಎಂದೂ ಮುಖ್ಯಮಂತ್ರಿ ಸವಾಲು ಹಾಕಿದ್ದಾರೆ. ಮಹಾರಾಷ್ಟ್ರ ಸರಕಾರದ ಭವಿಷ್ಯ ವಿಪಕ್ಷಗಳ ಕೈಯಲ್ಲಿ ಇಲ್ಲ. ಮೂರು ಗಾಲಿಯ ಸರಕಾರವಾದರೂ ಅದರ ಸ್ಟೇರಿಂಗ್ ವೀಲ್ ನನ್ನ ಕೈಯಲ್ಲಿದೆ. ವಿಪಕ್ಷಗಳಿಗೆ ತಾಕತ್ತಿದ್ದರೆ ಸರಕಾರ ವನ್ನು ಉರುಳಿಸಲಿ ಎಂದು ಠಾಕ್ರೆ ಸವಾಲು ಹಾಕಿದ್ದಾರೆ.
ಸರಕಾರವನ್ನು ಉರುಳಿಸುವ ಕಾರ್ಯದಲ್ಲಿ ನಿಮಗೆ ತೃಪ್ತಿ ಸಿಗಲಿದೆ. ಹಾಗಿದ್ದರೆ ಸೆಪ್ಟಂಬರ್-ಅಕ್ಟೋಬರ್‌ವರೆಗೆ ಏಕೆ ಕಾಯಬೇಕು, ಈಗಲೇ ಸರಕಾರವನ್ನು ಉರುಳಿಸಿ ಎಂದು ಕಿಡಿ ಕಾರಿದ್ದಾರೆ. ಮೂರು ಪಕ್ಷಗಳಿಂದ ಕೂಡಿದ ತ್ರಿಚಕ್ರ ಸರಕಾರ ವಾದರೂ, ಅದರ ಸ್ಟೀರಿಂಗ್ ವ್ಹೀಲ್ ತಮ್ಮ ಬಳಿಯೇ ಇದೆ. ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಧನಾತ್ಮಕವಾಗಿಯೇ ಚಿಂತಿಸುತ್ತಿವೆ. ಮೂರು ಪಕ್ಷಗಳ ಅನುಭವಗಳಿಂದ ಸರಕಾರಕ್ಕೆ ಅನುಕೂಲವೇ ಆಗಲಿದೆ.
ಮುಂಬಯಿ- ಅಹ್ಮದಾಬಾದ್ ಬುಲೆಟ್ ಟ್ರೈನ್ ಯೋಜನೆ ಕುರಿತು ಪ್ರಸ್ತಾವಿಸಿರುವ ಠಾಕ್ರೆ, “ಮೂರು ಗಾಲಿ (ಆಟೋ ರಿಕ್ಷಾ) ಬಡವರ ವಾಹನವಾಗಿದೆ. ನಿಮಗೆ ಬುಲೆಟ್ ಟ್ರೈನ್ ಅಥವಾ ಆಟೋ ರಿಕ್ಷಾ ಪೈಕಿ ಯಾವುದು ಬೇಕು ಎಂದು ನನ್ನನ್ನು ಕೇಳಿದರೆ, ನಾನು ಆಟೋ ರಿಕ್ಷಾ ಆಯ್ದುಕೊಳ್ಳುತ್ತೇನೆ. ಮುಂಬಯಿ-ಅಹ್ಮದಾಬಾದ್ ಬುಲೆಟ್ ಟ್ರೈನ್ ಬದಲು ಮುಂಬಯಿ- ನಾಗ್ಪುರಕ್ಕೆ ಸಂಪರ್ಕ ಕಲ್ಪಿಸಬೇಕಿದೆ ಎಂದು ತಿಳಿಸಿದ್ದಾರೆ.