Advertisement

ಭಾಯಂದರ್‌  ಶ್ರೀ ಮಣಿಕಂಠ ಸೇವಾ ಸಂಘದ ವಾರ್ಷಿಕ ಮಹಾಪೂಜೆ

04:15 PM Dec 31, 2017 | Team Udayavani |

ಮುಂಬಯಿ: ಭಾಯಂದರ್‌ ಪೂರ್ವ ಹನುಮಾನ್‌ ನಗರದ  ಶ್ರೀ ಮಣಿಕಂಠ ಸೇವಾ ಸಂಘದ 20 ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆಯು ಮಂದಿರದ ಆವರಣದಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಬ್ರಹ್ಮಶ್ರೀ ಅರುಣ್‌ ತಂತ್ರಿ ಖಂಡಿಕೆ, ವೇದಮೂರ್ತಿ ಗಣೇಶ್‌ ಸರಳಾಯ, ಶಿಬಿರದ ಸಂತೋಷ್‌ ಗುರುಸ್ವಾಮಿ ಮೂಡುಮಾರ್ನಾಡು ಅವರ ಪೌರೋಹಿತ್ಯದಲ್ಲಿ ಸ್ವಸ್ತಿ ಪುಣ್ಯಾಹ ವಾಚನ, ಹನ್ನೆರಡು ತೆಂಗಿನ ಕಾಯಿಯ ಗಣಹೋಮ, ದುರ್ಗಾಪೂಜೆ, ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ಭಜನೆ, ಪ್ರಸನ್ನ ಪೂಜೆ, ಪಡಿಪೂಜೆ, ಮಹಾಪೂಜೆ, ಪಲ್ಲಪೂಜೆ, ತೀರ್ಥ ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಿತು.

ಮೀರಾ-ಭಾಯಂದರ್‌ ಮಹಾನಗರ ಪಾಲಿಕೆಯ ಮೇಯರ್‌ ಡಿಂಪಲ್‌ ವಿ. ಮೆಹ್ತಾ, ಸ್ಥಳೀಯ ನಗರ ಸೇವಕ ಅರವಿಂದ್‌ ಎ. ಶೆಟ್ಟಿ, ವಿವಿಧ ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನಗರ-ಉಪನಗರಗಳ ವಿವಿಧ ಅಯ್ಯಪ್ಪ ಶಿಬಿರಗಳ ಮಾಲಾಧಾರಿ ಸ್ವಾಮಿಗಳು ಉಪಸ್ಥಿತರಿದ್ದು, ಗುರುಸ್ವಾಮಿಗಳಿಂದ ಪ್ರಸಾದ ಸ್ವೀಕರಿಸಿದರು. ಶ್ರೀ ಹನುಮಾನ್‌ ಭಜನ ಮಂಡಳಿಯ ಶ್ರೀ ಮಣಿಕಂಠ ಸೇವಾ ಸಂಘದ ವ್ರತಧಾರಿ ಅಯ್ಯಪ್ಪ ಸ್ವಾಮಿಗಳು ಪಡಿಪೂಜೆಯ ಹದಿನೆಂಡು ಮೆಟ್ಟಿಲುಗಳಿಗೆ ಶಾಸ್ತೊÅàಕ್ತವಾಗಿ ಹಾಗೂ ವಿವಿಧ ಧಾರ್ಮಿಕ ಪೂಜಾ ವಿಧಿ-ವಿಧಾನಗಳ ಮೂಲಕ ತುಪ್ಪದ ದೀಪ ಕರ್ಪೂರವನ್ನು ಹಚ್ಚಿ ಶ್ರೀ ಅಯ್ಯಪ್ಪ ಸ್ವಾಮಿಯ ಶರಣು ಘೋಷಗೈದರು.

ಸಂಸ್ಥೆಯ ಅಧ್ಯಕ್ಷ ಜಯರಾಮ ಎಂ. ಶೆಟ್ಟಿ,  ಗೌರವ ಕಾರ್ಯದರ್ಶಿ ಅಶೋಕ್‌ ಕೋಟ್ಯಾನ್‌, ಕೋಶಾಧಿಕಾರಿ ಸುಕುಮಾರ್‌ ಶೆಟ್ಟಿ, ಉಪಾಧ್ಯಕ್ಷ ಸುರೇಶ್‌ ಶೆಟ್ಟಿ, ಜತೆ ಕಾರ್ಯದರ್ಶಿ ಜಯ ಆರ್‌. ಪೂಜಾರಿ, ಜತೆ ಕೋಶಾಧಿಕಾರಿ ಅಶೋಕ್‌ ಆರ್‌. ಅಮೀನ್‌, ಮಹಿಳಾ ವಿಭಾಗದ ಅಧ್ಯಕ್ಷೆ ಸುನೀತಾ ಎಸ್‌. ಶೆಟ್ಟಿ, ಕಾರ್ಯದರ್ಶಿ ಲಕ್ಷಿ¾à ಎಸ್‌. ಸುವರ್ಣ, ಯುವ ವಿಭಾಗದ ಅಧ್ಯಕ್ಷ ಹಿತೇಶ್‌ ಡಿ. ಶೆಟ್ಟಿ, ಕಾರ್ಯದರ್ಶಿ ಸುಪ್ರೀತಾ ಜೆ. ಶೆಟ್ಟಿ, ಭಜನ ಮಂಡಳಿಯ ಸದಸ್ಯರು, ಮಹಿಳಾ ವಿಭಾಗದವರು ಸಾಮೂಹಿಕ ಪ್ರಾರ್ಥನೆಯೊಂದಿಗೆ ಮಹಾಪ್ರಸಾದ ಸ್ವೀಕರಿಸಿದರು.ರಾತ್ರಿ ಧಾರ್ಮಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಪ್ರತಿಭಾವಂತ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಸಾಂತಾಕ್ರೂಜ್‌ ಕಲಾವಿದರುಗಳಿಂದ ಕೋರªಬ್ಬು ಬಾರಗ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.  

ಚಿತ್ರ-ವರದಿ : ರಮೇಶ್‌ ಅಮೀನ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next