Advertisement
ಈ ಹಿಂದೆ 816 ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಪೊಲೀಸರು ಸಲ್ಲಿಸಿದ್ದು, ಈಗ 817ರಿಂದ 918 ಪುಟ ಸಂಖ್ಯೆಯನ್ನು ಹೆಚ್ಚುವರಿ ಚಾರ್ಜ್ ಶೀಟ್‌ನಲ್ಲಿ ನಮೂದಿಸಲಾಗಿದೆ. ಅಂದು 147 ಸಾಕ್ಷಿಗಳನ್ನು ಉಲ್ಲೇಖೀಸ ಲಾಗಿತ್ತು. ಈಗ ಹೆಚ್ಚುವರಿ ಚಾರ್ಜ್ ಶೀಟ್‌ನಲ್ಲಿ ಮತ್ತೆ 20 ಸಾಕ್ಷಿಗಳನ್ನು ಉಲ್ಲೇಖೀಸಲಾಗಿದೆ. ತಜ್ಞರ ವರದಿಗಳ ಸಹಿತ ಹಲವು ದಾಖಲೆ, ಸಾಕ್ಷ್ಯಗಳು ಹೆಚ್ಚುವರಿ ಚಾರ್ಜ್‌ಶೀಟ್‌ನಲ್ಲಿವೆ.
ಪ್ರಕರಣದ ಆರೋಪಿಗಳಾದ ರಾಜೇಶ್ವರಿ ಶೆಟ್ಟಿ (51), ನವನೀತ ಶೆಟ್ಟಿ (21) ಮತ್ತು ನಂದಳಿಕೆ ನಿರಂಜನ ಭಟ್ಟ (27) ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಗುರುವಾರ ಅವರನ್ನು ಬೆಂಗಳೂರಿನಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟಿಗೆ ಹಾಜರುಪಡಿಸಲಾಯಿತು. ಜಾಮೀನಿನಲ್ಲಿರುವ ಸಾಕ್ಷ್ಯನಾಶದ ಆರೋಪಿಗಳಿಬ್ಬರು ಉಡುಪಿ ಕೋರ್ಟ್‌ನಲ್ಲಿ ಹಾಜರಿದ್ದರು. ಮುಂದಿನ ವಿಚಾರಣಾ ಪ್ರಕ್ರಿಯೆಗೆ ನ್ಯಾಯಾಧೀಶರು ಫೆ. 9ಕ್ಕೆ ದಿನಾಂಕ ನಿಗದಿಪಡಿಸಿದರು.